ಚಿತ್ರದುರ್ಗ ಜಿಲ್ಲೆಯಲ್ಲಿ ೬,೨೯೫ ಏಕ ಸದಸ್ಯ(ಒಬ್ಬ ಹಿರಿಯ ನಾಗರಿಕ)ರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಪಡಿತರ ತಲುಪಿ ಸುವ ಕಾರ್ಯ ಆರಂಭಿಸಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ೧೨೩ ನ್ಯಾಯಬೆಲೆ ಅಂಗಡಿಗಳು, ೧,೫೧೪ ಪಡಿತರ ಚೀಟಿಗಳು ಇವೆ. ಚಿತ್ರದುರ್ಗ-೧೫೧-೧,೧೦೬, ಹಿರಿಯೂರು- ೯೨- ೧,೪೬೦, ಹೊಳಲ್ಕೆರೆ-೯೬-೮೬೬, ಹೊಸದುರ್ಗ-೧೧೦-೯೧೨ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ೫೦ ನ್ಯಾಯಬೆಲೆ ಅಂಗಡಿಗಳು ಮತ್ತು ೪೩೭ ಪಡಿತರ ಚೀಟಿಗಳಿವೆ.