ಸುರಕ್ಷಿತ ವಾಹನ ಚಾಲನೆ ಅರಿವು ಮೂಡಿಸಿ

 ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಪತ್‌ರಕ್ಷಕ ದಿನಾಚರಣೆಯನ್ನು ಡಾ.ಜೆ.ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು. ಡಾ.ಸೌಮ್ಯಾ ಸಂದೀಪ್, ಮೋಕ್ಷಾ ರುದ್ರಸ್ವಾಮಿ, ಸೌಮ್ಯಾ ಮಂಜುನಾಥಸ್ವಾಮಿ, ಸಿದ್ದರಾಜು, ಡಿ.ರಂಗಸ್ವಾಮಿ, ಅರುಣ್‌ಕುಮಾರ್ ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಪತ್‌ರಕ್ಷಕ ದಿನಾಚರಣೆಯನ್ನು ಡಾ.ಜೆ.ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು. ಡಾ.ಸೌಮ್ಯಾ ಸಂದೀಪ್, ಮೋಕ್ಷಾ ರುದ್ರಸ್ವಾಮಿ, ಸೌಮ್ಯಾ ಮಂಜುನಾಥಸ್ವಾಮಿ, ಸಿದ್ದರಾಜು, ಡಿ.ರಂಗಸ್ವಾಮಿ, ಅರುಣ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಕೆ.ಕರಿಯಪ್ಪ ಮಾಳಿಗೆ ಹೇಳಿಕೆ
  • ಆಪತ್‌ರಕ್ಷಕ ದಿನಾಚರಣೆ
  • ಸಂಜೀವಿನಿ ಜೀವ ರಕ್ಷಕ ಟ್ರಸ್ಟ್,
ಚಿತ್ರದುರ್ಗ: ರಸ್ತೆ ಅಪಘಾತಗಳೆಡೆ ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಆಂದೋಲನದ ಅಗತ್ಯವಿದೆ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಆಪತ್‌ರಕ್ಷಕ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಮನುಷ್ಯನ ಜೀವನ ಶೈಲಿ ಬದಲಾಗಿದೆ. ಒತ್ತಡದ ಬದುಕು, ಅರಿವಿನ ಕೊರತೆಯಿಂದ ಅಪಘಾತಗಳು ನಿತ್ಯ ನಡೆಯುತ್ತಿವೆ. ಅವಸರ ಮುಖ್ಯವಲ್ಲವೆಂದು ಎಲ್ಲರೂ ಆತ್ಮಾವಲೋಕನ ಮಾಡಿಕೊಂಡಾಗ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಡಾ.ಸೌಮ್ಯಾ ಸಂದೀಪ್ ಮಾತನಾಡಿ, ಅಪಘಾತಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆಯುತ್ತಿರುವ ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು.
ಚಿತ್ರದುರ್ಗ ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ ಮಾತನಾಡಿ, ರಸ್ತೆ ಕಳಪೆ ಕಾಮಗಾರಿಗಳ ವಿರುದ್ಧ ಪ್ರತಿಭಟಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಅಲಿ ಮಾತನಾಡಿ, ರಕ್ತದಾನದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸಬಹುದಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯಾ ಮಂಜುನಾಥಸ್ವಾಮಿ ಮಾತನಾಡಿ, ಸಮಾಜ ಸೇವಕರನ್ನು ಗುರುತಿಸಿ ಟ್ರಸ್ಟ್ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ. ೨೦ ಜಿಲ್ಲೆಗಳಲ್ಲಿ ಆಪತ್‌ರಕ್ಷಕ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಪತ್ರಕರ್ತ ಸಿದ್ದರಾಜು ಮಾತನಾಡಿ, ರಸ್ತೆ ಅಪಘಾತಗಳಿಂದಾಗುವ ಅನಾಹುತಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಅಧ್ಯಕ್ಷ ಡಿ.ರಂಗಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ಅರುಣ್‌ಕುಮಾರ್ ಇದ್ದರು. ವಿವಿಧ ಕ್ಷೇತ್ರಗಳ ೨೫ ಸಾಧಕರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net