ಎಸ್‌ಐಆರ್ ವಿರೋಽಸಿ ಪ್ರತಿಭಟನೆ

ಮತಪಟ್ಟಿ ಮರು ಸ್ಥಾಪನೆಗೆ ಒತ್ತಾಯ
ಎಸ್‌ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ಮತ್ತಿತರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಎಸಿ ಡಾ.ಕೆ.ಜೆ.ಕಾಂತರಾಜ್‌ಗೆ ಮನವಿ ಸಲ್ಲಿಸಿದರು. ಈಚಘಟ್ಟದ ಸಿದ್ದವೀರಪ್ಪ, ಕೆ.ಸಿ. ಹೊರಕೇರಪ್ಪ ಇತರರಿದ್ದರು.
ಎಸ್‌ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ಮತ್ತಿತರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಎಸಿ ಡಾ.ಕೆ.ಜೆ.ಕಾಂತರಾಜ್‌ಗೆ ಮನವಿ ಸಲ್ಲಿಸಿದರು. ಈಚಘಟ್ಟದ ಸಿದ್ದವೀರಪ್ಪ, ಕೆ.ಸಿ. ಹೊರಕೇರಪ್ಪ ಇತರರಿದ್ದರು.
Published on: 

ಚಿತ್ರದುರ್ಗ: ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್)ರದ್ದುಗೊಳಿಸಿ ೨೦೨೫ ಜನವರಿಯ ಮತಪಟ್ಟಿ ಮರು ಸ್ಥಾಪಿಸಬೇಕು, ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ಹಾಗೂ ಎಲ್ಲ ಸಹಭಾಗಿತ್ವ ಸಂಘಟನೆಗಳ ಜಿಲ್ಲಾ ಘಟಕದ ಸದಸ್ಯರು ಡಿಸಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿದರು.

ಕರ್ನಾಟಕದಲ್ಲಿ ಒಂದು ಕೋಟಿಗೂ ಅಽಕ ಮತದಾರರ ಹೆಸರು ಕೈ ಬಿಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇವರಲ್ಲಿ ಅನೇಕರು ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಒಂಟಿ ಮಹಿಳೆಯರು, ದಲಿತ ಸಮುದಾಯ ಮತ್ತು ಅಲ್ಪಸಂಖ್ಯಾತ ವರ್ಗದವರು ಇದ್ದಾರೆ. ಫಾರ್ಮ್ ೬ರ ಮೂಲಕ ಕೈಬಿಟ್ಟವರ ಹೆಸರುಗಳ ಸಂಖ್ಯೆ ತೀರಾ ಕಡಿಮೆ ಇದೆ ಎಂದರು.

ದಲಿತ ಸಮುದಾಯ, ಮಹಿಳೆಯರು, ವಲಸೆ ಕಾರ್ಮಿಕರು, ಅಲ್ಪಸಂಖ್ಯಾತರು ಮತ್ತಿತರ ಸಮುದಾಯಗಳ ಮತದಾರರು, ದಾಖಲೆ ಒದಗಿಸುವಲ್ಲಿ ಆಗಿರುವ ತೊಂದರೆ, ವಲಸೆ, ಹೆಸರಲ್ಲಿರುವ ವ್ಯತ್ಯಾಸಗಳಿಂದ ಹಾಗೂ ಅನಿಯಂತ್ರಿತ ಆಕ್ಷೇಪಗಳ ಕಾರಣಗಳಿಂದಾಗಿ ಮತಪಟ್ಟಿಯಿಂದ ಹೊರಗುಳಿಯುವ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆಂದರು.

ರಾಜ್ಯ ಚುನಾವಣಾ ಆಯೋಗದ ಚುನಾವಣಾಽಕಾರಿ ವಿ. ಅನ್ಬುಕುಮಾರ್ ಅವರ ರಾಜೀನಾಮೆಯೂ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸಿ ಡಾ.ಕೆ.ಜೆ. ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಈಚಘಟ್ಟದ ಸಿದ್ದವೀರಪ್ಪ, ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಬಸವರಾಜಪ್ಪ, ಟಿ. ಷಫಿವುಲ್ಲಾ, ಎಐಟಿಯು ಸಿ.ಸುರೇಶ್‌ಬಾಬು, ಪ್ರೊ.ಜೆ. ಯಾದವರೆಡ್ಡಿ, ನಾಗರಾಜ್, ಕಬ್ಬಿಗೇರೆ ನಾಗರಾಜ್, ರಾಧಾ, ಎಚ್. ಪ್ರಸನ್ನ, ಎಸ್. ಮಹದೇವಪ್ಪ, ನಿಜಲಿಂಗಪ್ಪ, ಪರಮೇಶ್ವರಪ್ಪ, ಪುರುಷೋತ್ತಮ ಮತ್ತಿತರರು ಇದ್ದರು.

ಅರ್ಹ ಮತದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸುವ ಫಾರ್ಮ್-೭ ದುರುಪಯೋಗವಾಗಿದೆ. ವಿಶೇಷವಾಗಿ ದಲಿತ ಸಮುದಾಯ ಮತ್ತು ಮುಸ್ಲಿಂ ಮತದಾರರನ್ನು ಗುರಿಯಾಗಿಸಿ, ರಾಜಕೀಯ ಪ್ರೇರಿತವಾಗಿ ಮತದಾರರ ಹೆಸರು ಅಳಿಸಲು ಅವಕಾಶ ಸೃಷ್ಟಿಸಲಾಗಿದೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಕಾರ‍್ಯನಿರ್ವಹಿಸಬೇಕಾಗಿದ್ದ ಚುನಾವಣಾ ಆಯೋಗ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಇಚ್ಛೆಯಂತೆ ವರ್ತಿಸುತ್ತಿದೆ.
| ಪ್ರತಿಭಟನಾಕಾರರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net