ಕಲ್ಲು ಗಣಿಗಾರಿಕೆಗೆ ವಿರೋಽಸಿ ಪ್ರತಿಭಟನೆ

 ಮೊಳಕಾಲ್ಮೂರು ತಾಲೂಕು ಮರ್ಲಹಳ್ಳಿಯಲ್ಲಿ ಕಲ್ಲುಗಣಿಕಾರಿಕೆಗೆ ನೀಡಿರುವ ಅನುಮತಿ ರದ್ದತಿಗೆ ಒತ್ತಾಯಿಸಿ ರೈತ ಸಂಘ,ಹಸಿರು ಸೇನೆ ಕಾರ್ಯಕರ್ತರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರ‍್ಲಹಳ್ಳಿ ರವಿಕುಮಾರ್, ಪ್ರೊ.ಜೆ. ಯಾದವರೆಡ್ಡಿ, ಕೆ.ಟಿ. ತಿಪ್ಪೇಸ್ವಾಮಿ, ದಂಡಿ ಸೂರಯ್ಯ, ತಿಪ್ಪೇಸ್ವಾಮಿ, ಬಸವರಾಜ್ ಹಿರೇಹಳ್ಳಿ ಇತರರು ಇದ್ದರು.

Published on
ಚಿತ್ರದುರ್ಗ : ಮೊಳಕಾಲ್ಮೂರು ತಾಲೂಕು ರ‍್ಲಹಳ್ಳಿಯಲ್ಲಿ ಕಲ್ಲುಗಣಿಗಾರಿಕೆ ವಿರೋಽಸಿ ರೈತಸಂಘ, ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಽಕಾರಿ ಕಚೇರಿ ಬಳಿ ಗುರುವಾರ ಮುಷ್ಕರ ನಡೆಸಿದರು.
ಕೂಡಲೇ ಜಿಲ್ಲಾಡಳಿತ ಗಣಿಗಾರಿಕೆಗೆ ಅನುಮತಿ ನಿರಾಕರಿಸಿ ಆದೇಶಿಸದಿದ್ದರೆ ಮೊಳಕಾಲ್ಮೂರು ತಾಲೂಕಿನಲ್ಲಿ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು. ತಾಲೂಕು ಹಾಗೂ ಜಿಲ್ಲಾಽಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭ ಟನಾ ನಿರತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಬಯಲುಸೀಮೆ ಪ್ರದೇಶದಲ್ಲಿ ಅಂತರ್ಜಲ ರಕ್ಷಣೆ ಕಾರಣವಾಗಿರುವ ಗುಡ್ಡಗಾಡು ಪ್ರದೇಶಗಳ ರಕ್ಷಣೆ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ಕುರಿತು ಶಾಸಕ ಎನ್.ವೈ. ಗೋಪಾಲ ಕÊಷ್ಣ ಅವರು ಮೌನ ವಹಿಸಿದ್ದಾರೆ. ಆಂಧಪ್ರದೇಶದ ರೌಡಿಗಳು ಬಂದು ಬೆದರಿಕೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮುಖಂಡ ರ‍್ಲಹಳ್ಳಿ ರವಿಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡಲು ನಾವು ಅವಕಾಶ ನೀಡುವುದಿಲ್ಲ ಎಂದರು.
ಚಿAತಕ ಪ್ರೊ.ಜೆ.ಯಾದವರೆಡ್ಡಿ, ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿದರು. ರಾಜಣ್ಣ, ತಿಪ್ಪೇಸ್ವಾಮಿ, ಬಸವ ರಾಜ್ ಹಿರೇಹಳ್ಳಿ, ಬಾಗೇನಾಳ್ ಎಸ್.ಆರ್. ತಿಪ್ಪೇಸ್ವಾಮಿ, ಚಂದ್ರಣ್ಣ, ವೆಂಕಟೇಶ್, ತಿಮ್ಮಯ್ಯ, ಪಾಲಯ್ಯ, ನಾಗರಾಜ್, ನಾಗೇಂದ್ರ, ಬಸವರಾಜ್, ಶರಣಪ್ಪ, ತಿಪ್ಪಯ್ಯ, ಅಂಜಿನಿ, ಸೂರಪಾಪಯ್ಯ, ಮೂರ್ತಿ, ಕಾಂತರಾಜ್, ಉಮೇಶ್, ಲೋಕೇಶ್, ಗೋವಿಂದ, ಬೋರಸ್ವಾಮಿ, ಮಂಜಣ್ಣ, ಪಾಪಣ್ಣ, ದಂಡಿ ಸೂರಯ್ಯ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net