೮೦ ಕೋಟಿ ರೂ.ವೆಚ್ಚದಲ್ಲಿ ೩ ಹೊಸ ಕೆಮಿಕಲ್ ಲ್ಯಾಬ್‌ಗಳಿಗೆ ಪ್ರಸ್ತಾವನೆ

ಚಿತ್ರದುರ್ಗದಲ್ಲಿ ಶುಕ್ರವಾರ ಜಿಪಂದಲ್ಲಿ ಏರ್ಪಡಿಸಿದ್ದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್,ಎಂ.ಬಾಬು, ಜಯಲಕ್ಷಿ÷್ಮÃ, ಅಮರನಾಥ್‌ಜೈನ್, ಡಾ.ಎಂ.ಸಿ.ಸುನೀಲ್‌ಕುಮಾರ್, ವಿ.ವಸಂತ್‌ಕುಮಾರ್, ದಿವಾಕರ್, ಎಂ.ಆರ್.ಮAಜುನಾಥ್, ರಂಜಿತಾ, ದೇವರಾಜರೆಡ್ಡಿ ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಜಿಪಂದಲ್ಲಿ ಏರ್ಪಡಿಸಿದ್ದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್,ಎಂ.ಬಾಬು, ಜಯಲಕ್ಷಿ÷್ಮÃ, ಅಮರನಾಥ್‌ಜೈನ್, ಡಾ.ಎಂ.ಸಿ.ಸುನೀಲ್‌ಕುಮಾರ್, ವಿ.ವಸಂತ್‌ಕುಮಾರ್, ದಿವಾಕರ್, ಎಂ.ಆರ್.ಮAಜುನಾಥ್, ರಂಜಿತಾ, ದೇವರಾಜರೆಡ್ಡಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ೫೦೦ ಹೊಸ ಆರ್‌ಒ ಪ್ಲಾಂಟ್‌ಗಳ ನಿರ್ಮಾಣ
  • ತ್ಯಾಜ್ಯ ಸಾಗಣೆ ವಾಹನಗಳಿಗೆ ಜಿಪಿಎಸ್ ಟ್ರ‍್ಯಾಕರ್
  • ಜಿಪಂ ಸಿಇಒ ಡಾ.ಎಸ್.ಆಕಾಶ್
ಚಿತ್ರದುರ್ಗ: ಜಿಲ್ಲೆಯಲ್ಲಿರುವ ನೀರು ಪರಿಶೀಲನಾ ರಾಸಾಯನಿಕ ಪ್ರಯೋಗಾಲಯಗಳ ಸಂಖ್ಯೆಯನ್ನು ೩ರಿಂದ ೬ಕ್ಕೆ ಹೆಚ್ಚಿಸಲಾಗುವುದು ಎಂದು ಜಿಪಂ ಸಿಇಒ ಡಾ.ಎಸ್.ಆಕಾಶ್ ಹೇಳಿದರು.
ಜಿಪಂದಲ್ಲಿ ಶುಕ್ರವಾರ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆಯಲ್ಲಿ ಪ್ರಯೋಗಾಲಯಗಳಿವೆ. ಹೊಸದಾಗಿ ಅಂದಾಜು ೮೦ ಕೋಟಿ ರೂ.ವೆಚ್ಚದಲ್ಲಿ ಹೊಳಲ್ಕೆರೆ, ಮೊಳ ಕಾ ಲ್ಮೂರು ಮತ್ತು ಹಿರಿಯೂರು ತಾಲೂಕುಗಳಲ್ಲೂ ಕೆಮಿಕಲ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಶೀಘ್ರದಲ್ಲೇ ಕೆಎಂಇಆರ್‌ಸಿ ಸೆಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ೩೯೦ ಪೂರ್ಣಗೊಂಡಿರುವ ಜೆಜೆಎಂ ಕಾಮಗಾರಿಗಳ ಪೈಕಿ ೩೮೩ ಕಾಮಗಾರಿಗೆ ಕಾಲಾವಽ ವಿಸ್ತರಣÉ ನೀಡಿ, ದಂಡ ವಿಽ ಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗೀಯ ಇಂಜಿಯರ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೆಲವು ಕಾಮಗಾ ರಿಗಳಲ್ಲಿ ೫೦೦ ದಿನಗಳಿಗೂ ಹೆಚ್ಚು ವಿಳಂಬವಾಗಿದೆ. ಕಾಮಗಾರಿ ಮೊತ್ತದ ಶೇ.೧೦ ದಂಡ ವಿಽಸಲು ಅವಕಾಶ ವಿದ್ದರೂ, ದಿನವೊಂದಕ್ಕೆ ೫೦೦ ಅಥವಾ ಒಟ್ಟು ಮೊತ್ತದ ಶೇ.೧ರಿಂದ ಶೇ.೨ ದಂಡ ಹಾಕಲು ಪರಿಶೀಲಿಸಲಾಗುತ್ತಿದೆ ಎಂದರು.
ಜಲ ಜೀವನ್‌ಮಿಷನ್ ೨೦೨೪ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಗ್ರಾಮೀಣ ಮಟ್ಟದ ತಾಂತ್ರಿಕ ಹಾಗೂ ಸ್ಥಳೀಯ ಕಾರಣ ಗ ಳಿಂದ ಶೇ. ೯೯ ಕಾಮಗಾರಿಗಳು ನಿಗದಿತ ಸಮಯ ದಾಟಿದ ನಂತರವೇ ಪೂರ್ಣಗೊಂಡಿವೆ. ಪ್ರಸ್ತುತ ೩೯೦ ಕಾಮಗಾರಿಗಳ ಕಾಲಾವಽ ವಿ ಸ್ತರಣÉ ಪ್ರಸ್ತಾವನೆಗಳ ಪೈಕಿ ೩೮೩ ಪ್ರಸ್ತಾವನೆಗಳನ್ನು ಒಪ್ಪಿ ದಂಡ ವಿಽಸಲಾಗುವುದು ಎಂದರು.
೫೦೦ ಆರ್‌ಒ ಘಟಕ ಸ್ಥಾಪನೆಗೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಪ್ರಸ್ತುತ ಅಂದಾಜು ೧೦೦೦ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ತಾಂಡ ಮತ್ತಿತರ ಜನವಸತಿ ಪ್ರದೇಶಗಳಲ್ಲಿ ಆರ್‌ಒ ಪ್ಲಾಂಟ್ ಸೌಲಭ್ಯವಿಲ್ಲ. ತಾಂಡಗಳಲ್ಲಿ ನೇರವಾಗಿ ಬೋರ್‌ವೆಲ್ ನೀರನ್ನೇ ಕುಡಿಯಲು ಬಳಸಲಾಗುತ್ತಿದೆ. ಕನಿಷ್ಠ ೨೫ ಮನೆಗಳು ಅಥವಾ ಸೂಕ್ತ ಜನಸಂಖ್ಯೆ ಇರುವ ಇಂಥ ೫೦೦ ತಾಂಡ ಹಾಗೂ ಜನವಸತಿ ಪ್ರದೇಶಗಳಲ್ಲಿ ತಲಾ ೧೦ ಲಕ್ಷ ರೂ.ವೆಚ್ಚದಲ್ಲಿ ೫೦೦ ನೂತನ ಆರ್‌ಒ ಘ ಟಕಗಳನ್ನು ಸ್ಥಾಪಿಸಲು ಕೆಎಂಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಓವರ್ ಹೆಡ್ ಟ್ಯಾಂಕರ್‌ಗಳ ಭದ್ರತೆ
ಜಿಲ್ಲೆಯಲ್ಲಿರುವ ಅಂದಾಜು ೨ ಸಾವಿರ ಓವರ್‌ಹೆಡ್ ಟ್ಯಾಂಕ್‌ಗಳ ಪೈಕಿ ಕನಿಷ್ಠ ೧೦೦೦ ಟ್ಯಾಂಕ್‌ಗಳ ಕೆಳಭಾಗದಲ್ಲಿ ಕಾಂಕ್ರೀಟ್ -ÉÇ್ಲÃ ರಿಂಗ್ ಹಾಗೂ ಸುತ್ತಲೂ ತಂತಿ ತಡೆಗೋಡೆ ನಿರ್ಮಿಸಿ ಸುರಕ್ಷತೆ ಕಾಯ್ದುಕೊಳ್ಳಲು ಯೋಜಿಸಲಾಗಿದೆ. ಇದಕ್ಕೆ ತಲಾ ೨.೫ ಲಕ್ಷ ರೂ.ನಿಗದಿ ಪಡಿಸಲಾಗಿದೆ ಎಂದರು.
ತ್ಯಾಜ್ಯ ಸಾಗಣÉ ವಾಹನಗಳಿಗೆ ಜಿಪಿಎಸ್ ಟ್ರ‍್ಯಾಕರ್
ಗ್ರಾಮೀಣ ನೈರ್ಮಲ್ಯ ಮತ್ತು ಕಸ ಸಂಗ್ರಹಣÉ ವ್ಯವಸ್ಥೆ ಬಲಪಡಿಸಲು ಜಿಲ್ಲೆಯ ೧೫೦ಕ್ಕೂ ಹೆಚ್ಚು ತ್ಯಾಜ್ಯ ಸಂಗ್ರಹಣÁ ವಾಹನ ಗಳಿಗೆ ಜಿ ಪಿಎಸ್ ಟ್ರ‍್ಯಾಕರ್ ಅಳವಡಿಸಲಾಗುತ್ತಿದೆ. ಇದರಿಂದ ಮನೆ ಮನೆಗಳಿಂದ ಕಸ ಸಂಗ್ರಹಣÉ ಸರಿಯಾಗಿ ನಡೆಯುತ್ತಿ ದೆಯೇ ಎಂಬುದನ್ನು ಜಿಪಂ ಹಂತದಲ್ಲೇ ನೇರವಾಗಿ ತಿಳಿಯಬಹುದಾಗಿದೆ.
ಜಿಲ್ಲೆಯಲ್ಲಿ ನಿತ್ಯ ೪೫ ಸಾವಿರ ಕೆಜಿ ಒಣ ಮತ್ತು ಹಸಿ ತ್ಯಾಜ್ಯ ಸಂಗ್ರಹ ಸಾಮರ್ಥ್ಯ ವಿದೆ. ಜಿಲ್ಲೆಯ ೧೮೯ ಗ್ರಾಪಂಗಳ ಪೈಕಿ ೩೦-೪೦ ಗ್ರಾಪಂಗಳಲ್ಲಿ ಅತಿ ಹೆಚ್ಚು ಕಸ ಉತ್ಪತ್ತಿ ಯಾಗುತ್ತಿದ್ದು, ಅಂತಹ ಕಡೆಗಳಲ್ಲಿ ವಾಹನಗಳ ಸಂ ಚಾರ ಹಾಗೂ ಕಸ ಸಂಗ್ರಹಣÉಯನ್ನು ಜಿಪಿಎಸ್ ಮೂಲಕ ಉಸ್ತುವಾರಿ ಮಾಡಲಾಗುವುದು ಎಂದು ಸಿಇಒ ಹೇಳಿದರು.
ಜಿಪಂ ಡಿಎಸ್ ಎಂ.ಬಾಬು, ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್‌ಜೈನ್, ಡಿಎಚ್‌ಒ ಡಾ.ಎಂ.ಸಿ.ಸುನೀಲ್‌ಕುಮಾರ್, ಆರ್‌ಎಫ್‌ಒ ವಿ.ವಸಂತ್‌ಕುಮಾರ್,ಜಿಲ್ಲಾ ಪರಿಶಿಷ್ಟ ವರ್ಗ ಗಳ ಕಲ್ಯಾಣÁಽಕಾರಿ ದಿವಾಕರ್, ಡಿಡಿಪಿಐ ಎಂ.ಆರ್.ಮAಜುನಾಥ್, ಕÊಷಿ ಇಲಾಖÉ ಉಪ ನಿರ್ದೇಶಕಿ ರಂಜಿತಾ, ಜಲತಜ್ಞ ದೇವರಾಜ ರೆಡ್ಡಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net