ಚಿತ್ರದುರ್ಗ: ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಅಥವಾ ಯಾವುದೋ ಕಾರಣಕ್ಕೆ ಕೈದಿಗಳು ಕಾರಾಗೃಹ ಸೇರಿರಬಹುದು. ಆದರೆ, ಮಾನಸಿಕವಾಗಿ ಬದಲಾಯಿಸಿ ಮನುಷ್ಯರನ್ನಾಗಿಸುವ ಸ್ಥಳಗಳಾಗಿವೆ ಎಂದು ಕಸಾಪ ಜಿ¯್ಲÁಧ್ಯಕ್ಷ ಕೆ.ಎಂ. ಶಿವಸ್ವಾಮಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದಿAದ ಕಾರಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಸೊಬಗು-೨೦೨೬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನಸ್ಸಿಗೆ ಮುದ ನೀಡುವ ಶಕ್ತಿ ಸಂಗೀತಕ್ಕಿದೆ. ಎಲ್ಲರನ್ನೂ ಸಂತಸಗೊಳಿಸುವ ಸಾಮರ್ಥ್ಯ ಹೊಂದಿದೆ. ಕೋಪಕ್ಕೆ ಗುರಿಯಾಗದೆ, ಶಾಂತಿ, ಸೌಹಾರ್ದತೆ ಕಾಪಾಡಲು ಸಂಗೀತ ಮುಖ್ಯ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಮಾತನಾಡಿ, ತಪ್ಪು ಮಾಡಿಯೋ, ಮಾಡದೆ ಯೋ ಕೆಲವೊಮ್ಮೆ ಜೈಲು ಸೇರುವ ಸಂದರ್ಭ ಎದುರಾಗುತ್ತದೆ. ಆದ್ದರಿಂದ ನೀತಿ, ನಿಯತ್ತು, ಧರ್ಮ, ಮಾತಿನಲ್ಲಿ ಹಿಡಿತವಿದ್ದವರು ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಜಿ¯್ಲÁ ಕಾರಾಗೃಹ ಅಽÃಕ್ಷಕ ಸಿದ್ದರಾಮ ಬಿ. ಪಾಟೀಲ್ ಮಾತನಾಡಿ, ಬಂಽಖಾನೆಯಲ್ಲಿ ಇರುವವರು ತಮ್ಮೊಳಗಿನ ಪ್ರತಿಭೆ ಮು ಚ್ಚಿಡುತ್ತಾರೆ. ಅದರ ಬದಲು ಇಂತಹ ಕಾರ್ಯಕ್ರಮಗಳಲ್ಲಾದರೂ ಹೊರಹಾಕಬೇಕೆಂದು ವಿಚಾರಣಾಽÃನ ಖೈದಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಎಂ.ಕೆ. ಹರೀಶ್ ಮತ್ತು ತಂಡ, ಕೆ. ಗಂಗಾಧರ್ ಮತ್ತು ಚನ್ನಬಸಪ್ಪ ಸಂಗಡಿಗರು, ಮಹಿಳಾ ಪೊಲೀಸ್ ಠಾಣೆ ಎಸ್‌ಐ ಯಶೋಧಮ್ಮ ಜಾನಪದ, ರೈತ, ಹಳೆ ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸಿದರು. ಜೈಲರ್ ರಾಜೇಂದ್ರ ಕೊಪರ್ಡೆ, ಶ್ರೀನಿವಾಸ ಮಳಲಿ, ಭಾಗ್ಯಮ್ಮ ಇತರರಿದ್ದರು.