ವಚನಗಳ ಸಂರಕ್ಷಣೆಗೆ ಹೋರಾಡಿದ ವೀರಾಗ್ರಣಿ

ಉಪನ್ಯಾಸಕ ನರಸಿಂಹಪ್ಪ ಬಣ್ಣನೆ
ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಶಿವಶರಣೆ ಗಂಗಾಬಿಕಾ ದೇವಿ ಜಯಂತಿ ಆಚರಣೆಯಲ್ಲಿ ಎಸ್‌ಜೆಎಂ ವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ನರಸಿಂಹಪ್ಪ, ಬಸವ ಮಹಾಂತ ಸ್ವಾಮೀಜಿ, ಮಲ್ಲಿಕಾರ್ಜುನ ಶ್ರೀಗಳು ಮತ್ತಿತರರು ಇದ್ದರು.
ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಶಿವಶರಣೆ ಗಂಗಾಬಿಕಾ ದೇವಿ ಜಯಂತಿ ಆಚರಣೆಯಲ್ಲಿ ಎಸ್‌ಜೆಎಂ ವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ನರಸಿಂಹಪ್ಪ, ಬಸವ ಮಹಾಂತ ಸ್ವಾಮೀಜಿ, ಮಲ್ಲಿಕಾರ್ಜುನ ಶ್ರೀಗಳು ಮತ್ತಿತರರು ಇದ್ದರು.
Published on: 

ಚಿತ್ರದುರ್ಗ: ಬಸವಾದಿ ಶಿವಶರಣರ ವಚನ ಸಾಹಿತ್ಯವು ಸ್ತೀ ಸಂವೇದನೆಯನ್ನೂ ಒಳಗೊಂಡಿದೆ ಎಂದು ತಳಕಿನ ಎಸ್‌ಜಿಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ನರಸಿಂಹಪ್ಪ ಹೇಳಿದರು.

ಮುರುಘಾಮಠದಲ್ಲಿ ಸೋಮವಾರ ಆಯೋಜಿಸಿದ್ದ ಶಿವಶರಣೆೆ ಗಂಗಾAಬಿಕಾ ಜಯಂತಿ ಕರ‍್ಯಕ್ರಮದಲ್ಲಿ ಮಾತನಾಡಿದರು.

ಬಸವ, ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ ಮತ್ತಿತರ ವಚನಕಾರರೆಲ್ಲರೂ ನುಡಿದಂತೆ ನಡೆದು ಸಮಾನತೆ ಪಥದಲ್ಲಿ ಸಾಗಲು ಮಾರ್ಗದರ್ಶನ ಮಾಡಿದ್ದಾರೆ. ಮಹಿಳೆಗೆ ಮನ್ನಣೆ ಸಿಗದ ಕಾಲದಲ್ಲಿ ಬಸವಣ್ಣನವರ ವಿಚಾರಗಳಿಗೆ ಬೆನ್ನೆಲುಬಾಗಿ, ಶಿವಶರಣರ ನಡೆ ನುಡಿಗಳಿಗೆ ಆದ್ಯತೆ ನೀಡುತ್ತಿದ್ದ ಗಂಗಾAಬಿಕೆ ಕಲ್ಯಾಣ ಕ್ರಾಂತಿ ನಂತರದಲ್ಲಿ ವಚನಗಳ ಸಂರಕ್ಷಣೆಗೆ ದಿಟ್ಟತನದಿಂದ ಹೋರಾಡಿದ ವೀರಾಗ್ರಣಿ. ಅವರ ಲಿಂಗೈಕ್ಯ ಸಮಾಽ ಎಂ.ಕೆ. ಹುಬ್ಬಳ್ಳಿ ಹತ್ತಿರ ಸ್ಮಾರಕವಾಗಿದೆ. ಕಾಯಕ ಜೀವಿಗಳಾಗಿದ್ದ ಶರಣರು ಸಮಾಜ ಕಟ್ಟುವ ಕರ‍್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ಎಸ್‌ಜೆಎA ವಿವಿ ಕುಲಪತಿ ಡಾ.ಕೆ.ಬಿ. ಗುಡಸಿ ಮಾತನಾಡಿ, ಬಸವಣ್ಣನ ಎಲ್ಲ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಿ ಕಲ್ಯಾಣ ಕ್ರಾಂತಿ ನಂತರದಲ್ಲಿ ವಚನ ಸಾಹಿತ್ಯ ರಕ್ಷಣೆಗೆ ದಿಟ್ಟ ಕ್ರಮ ತೆಗೆದುಕೊಂಡ ಮಹಾಮಾತೆ ಗಂಗಾAಬಿಕೆ ಎಂದು ಬಣ್ಣಿಸಿದರು. ಸಮ್ಮುಖ ವಹಿಸಿದ್ದ ಶಿರಸಂಗಿ ಮುರುಘೇಂದ್ರ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡಿದರು.

ಗುರು ಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಶ್ರೀಗಳು, ಬಸವ ಮುರುಘೇಂದ್ರ ಸ್ವಾಮೀಜಿ, ಡಾ.ಬಸವ ಚೇತನ ಸ್ವಾಮೀಜಿ, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಕೋದಂಡ, ಹನುಮಂತಪ್ಪ, ನಾಗರಾಜಸಂಗA, ಎಸ್.ವೀರೇಶ್, ಮಹಾಂತಮ್ಮ, ಇಟಗಿ ವಿಜಯಕುಮಾರ್ ಮತ್ತಿತರರು ಇದ್ದರು.

ಧರ್ಮಸ್ಥಳ ಸಂಘದ ರತ್ನಮ್ಮ ಅವರನ್ನು ಗೌರವಿಸಲಾಯಿತು. ಜ್ಯೋತಿ ಬಸವರಾಜ್, ಗಂಗಾAಬಿಕೆಯವರ ವಚನ ಹಾಡಿದರು. ಡಾ.ಸ್ನೇಹಲತಾ ಸ್ವಾಗತಿಸಿದರು. ಡಾ.ಬಸವರಾಜ ಹರ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net