Pratibha karanji: ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಮಕ್ಕಳ ತಯಾರಿಸಿ

Pratibha karanji ದೇವಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಬಾ ಕಾರಂಜಿ ಕಾರ್ಯಕ್ರಮದಲ್ಲಿ ಬುದ್ಧನ ಪೋಷಾಕಿನಲ್ಲಿದ್ದ ಬಾಲಕ ಎಲ್ಲರ ಗಮನ ಸೆಳೆದನು.
Pratibha karanji ದೇವಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರತಿಬಾ ಕಾರಂಜಿ ಕಾರ್ಯಕ್ರಮದಲ್ಲಿ ಬುದ್ಧನ ಪೋಷಾಕಿನಲ್ಲಿದ್ದ ಬಾಲಕ ಎಲ್ಲರ ಗಮನ ಸೆಳೆದನು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿಕೆ
  • ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
  • ಮಕ್ಕಳಿಗೆ ಮನೆ ಮೊದಲ ಪಾಠಶಾಲೆ
ಮೊಳಕಾಲ್ಮೂರು: ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.Pratibha karanji
ತಾಲೂಕಿನ ದೇವಸಮುದ್ರ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ ಸೋಮವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಮನೆ ಮೊದಲ ಪಾಠಶಾಲೆ ಆದರೂ ಶಿಕ್ಷಣದ ದೇಗುಲ ಅವರ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಇದ್ದಂತೆ. ಕೇವಲ ಪಾಠ, ಪ್ರವಚನಗಳಿಗೆ ಮೀಸಲಾಗದೆ. ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಬೇಕು. ಅವರ ಪ್ರತಿಭೆ ಗುರುತಿಸಿ ಅವಕಾಶಗಳನ್ನು ಕಲ್ಪಿಸಿದರೆ ಪ್ರತಿಭಾವಂತರಾಗಿ ಬೆಳೆಯುತ್ತಾರೆ ಎಂದರು.
ಬಿಇಒ ನಿರ್ಮಲಾದೇವಿ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಪ್ರತಿಭಾ ಕಾರಂಜಿ ತುಂಬಾ ಉಪಯುಕ್ತವಾಗಿದೆ. 2004ರಲ್ಲಿ ಆರಂಭವಾರ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಅನೇಕ ಮಕ್ಕಳು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ದೇವಸಮುದ್ರದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಚಂದ್ರಣ್ಣ, ಉಪಾಧ್ಯಕ್ಷ ಜಿ.ಆರ್. ಕುಮಾರಸ್ವಾಮಿ, ತಹಸೀಲ್ದಾರ್ ನಾಗವೇಣಿ, ಇಒ ಎಚ್. ಹನುಮಂತಪ್ಪ, ಬಿಆರ್‌ಸಿ ಕೆ. ತಿಪ್ಪೇಸ್ವಾಮಿ, ಅಕ್ಷರ ದಾಸೋಹ ಅಧಿಕಾರಿ ಹನುಮಂತಪ್ಪ, ಪಿಡಿಒ ಬಾಂಡ್ರಾವಪ್ಪ, ಪರಮೇಶ್ವರಪ್ಪ, ಪ್ರಾಚಾರ್ಯ ನಾಗೇಂದ್ರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net