ಮಕ್ಕಳಿಗೆ ವಚನ ಅಭ್ಯಾಸ ಅಗತ್ಯ

ಡಾ. ಬಸವಕುಮಾರ ಸ್ವಾಮೀಜಿ ಅಭಿಮತ
ಮುರುಘಾ-ವಚನ
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ವಚನ ಗಾಯನದ ತಾಲೀಮು ಕಾರ್ಯಕ್ರಮದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಗಾಯಕರಾದ ಕೆ.ಯುವರಾಜ್ ಡಿ.ಒ. ಮುರಾರ್ಜಿ ಇತರರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಮುರುಘಾಮಠದಿಂದ ಅಕ್ಟೋಬರ್ ೧೪ ರಿಂದ ೨೨ರವರೆಗೆ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದ ಅನುಭವ ಮಂಟಪದಲ್ಲಿ ಅ.೧೭ರಂದು ಏಕ ಕಾಲದಲ್ಲಿ ೧೦ ಸಾವಿರ ಜನರಿಂದ ಸಾಮೂಹಿಕ ವಚನ ಗಾಯನ ಆಯೋಜಿಸಲಾಗಿದೆ ಎಂದು ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಶ್ರೀ ಮಠದಲ್ಲಿ ಮಂಗಳವಾರ ವಚನ ಗಾಯನ ತಾಲೀಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ೧೨ನೇ ಶತಮಾನದ ವಚನಗಳು ಅನರ್ಘ್ಯ ರತ್ನ. ಅವುಗಳು ಜನಮಾನಸದಲ್ಲಿ ಸದಾ ಹಸಿರಾಗಿವೆ. ಮಕ್ಕಳಿಗೆ ವಚನ ಅಭ್ಯಾಸವಾಗಬೇಕೆಂಬ ಮತ್ತು ದೊಡ್ಡವರಿಗೂ ಅವುಗಳ ಮನನ ಅಗತ್ಯವೆಂಬ ಕಾರಣಕ್ಕೆ ಕಳೆದ ಶರಣ ಸಂಸ್ಕೃತಿ ಉತ್ಸವದಿಂದ ಈ ಪ್ರಯತ್ನ ನಡೆದಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಲಿಂಗಾಯತ ಮಠಾಽÃಶರ ಒಕ್ಕೂಟ ಸೆ.೩೦ರಂದು ಸಂಜೆ ೬ಕ್ಕೆ ಇಂತಹದೇ ವಚನನಾದ ಎಂಬ ಸಮೂಹ ಗಾಯನ ಕಾರ್ಯಕ್ರಮ ಏರ್ಪಡಿಸಿದೆ ಎಂದರು.

ಖ್ಯಾತ ಹಿನ್ನೆಲೆ ಗಾಯಕ ಕೆ.ಎಸ್.ಅಶ್ವಥ್ ಅವರ ನಿರ್ದೇಶನ ಹಾಗೂ ಸ್ವರ ಸಂಯೋಜನೆಯಲ್ಲಿ ಸಿದ್ಧಪಡಿಸಿದ್ದ ಕೂಡಲಸಂಗಮದೇವ ಧ್ವನಿಸುರಳಿಯ ಆಯ್ದ ೩೨ ವಚನಗಳನ್ನು ಹೆಸರಾಂತ ಗಾಯಕ ಕೆ.ಯುವರಾಜ್ ಹೇಳಿಕೊಟ್ಟರು. ಗಾಯಕ ಡಿ.ಒ.ಮುರಾರ್ಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net