ಚಿತ್ರದುರ್ಗ: ಯುಗಾದಿ ಸಂದರ್ಭದಲ್ಲಿ ಮೋಜಿಗೆಂದು ಜೂಜಾಟದಲ್ಲಿ ತೊಡಗಿ ಸಿಕ್ಕಿಬಿದ್ದು ಹಬ್ಬದ ಸಂಭ್ರಮ ಕಳೆದುಕೊಳ್ಳುವುದರ ಜತೆಗೆ ಸಂಕಷ್ಟಕ್ಕೆ ಸಿಲುಕದಂತೆ ಪೊಲೀಸರು ಜನರನ್ನು ಎಚ್ಚರಿಸಿದ್ದಾರೆ.
ಜಿಲ್ಲೆಯ ೨೨ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಜೂಜಾಡುವವರ ಮೇಲೆ ನಿಗಾಕ್ಕೆ ಕ್ರಮ ವಹಿಸಲಾಗಿದೆ. ಪ್ರತಿ ಠಾಣೆಯಲ್ಲಿ ಆಯಾ ಠಾಣಾಽಕಾರಿ ನೇತೃತ್ವದಲ್ಲಿ ಸ್ಪೆಷಲ್‌ಟೀಮ್ ಹಾಗೂ ಜಿಲ್ಲಾ ಮಟ್ಟದಲ್ಲಿ ಹಿರಿಯ ಅಽಕಾರಿಗಳನ್ನು ಒಳಗೊಂಡು ಮೂರು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಜೂಜಾಟದಂಥ ಕಾನೂನು ಬಾಹಿರ ಚಟುವಟಿಕೆ ನಿರಂತರವಾಗಿವೆ ಎಂಬ ದೂರುಗಳಿದ್ದರೂ ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಸರ್ವೆ ಸಾಮಾನ್ಯ ಎಂಬAತಾಗಿದೆ. ಲಕ್ಷಾಂತರ ರೂ. ಕೈ ಬದಲಾಗುತ್ತದೆ. ಇದನ್ನು ನಿಯಂತ್ರಿಸಲು ಪೊಲೀಸರು ಅಖಾಡಕ್ಕೆ ಇಳಿದಿದ್ದಾರೆ.
ಮಾಹಿತಿದಾರರನ್ನು ಚುರುಕುಗೊಳಿಸುವುದರೊಂದಿಗೆ, ಜೂಜಾಟ ಕುರಿತಂತೆ ೧೧೨ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಾಹಿತಿ ಕೊಡುವಂಥವರ ಹೆಸರು, ವಿಳಾಸ ಗೌಫ್ಯವಾಗಿರುತ್ತದೆ ಎಂದು ಭರವಸೆ ನೀಡಿದ್ದಾರೆ.
ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಆಟೋರಿಕ್ಷಾಗಳ ಮೂಲಕವೂ ಇಸ್ಪೀಟ್, ಅಂಧರ ಬಾಹರ್ ಮೊದಲಾದ ಜೂಜಿನಲ್ಲಿ ತೊಡಗದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಪರಾಧ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ತೆಗೆದುಕೊಳ್ಳುವ ಕಾನೂನು ಕ್ರಮಗಳ ಕುರಿತಂತೆ ಜನರನ್ನು ಎಚ್ಚರಿಸಲಾಗುತ್ತಿದೆ.
ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲೂ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಜೂಜಾಟಗಳನ್ನು ಕಟ್ಟುನಿಟ್ಟಾಗಿ ನಿಷೇಽಸಲಾಗಿದೆ. ಅಂಗಡಿ ಗಳು, ಶಾಮಿಯಾನಗಳು, ಮನೆಗಳು, ತೋಟದ ಮನೆಗಳು, ಹೋಟೆಲ್‌ಗಳು ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಜೂ ಜಾಟ ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ ಕುಮ್ಮಕ್ಕು ನೀಡುವ ಅಥವಾ ಸ್ಥಳಾವಕಾಶ ಮಾಡಿಕೊಡುವ ಮಾಲೀಕರನ್ನೂ ಆರೋಪಿಗಳೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಅದೃಷ್ಟದ ಮೇಲೆ ನಂಬಿಕೆ, ಶ್ರಮವಿಲ್ಲದೆ ಹಣಗಳಿಸುವ ಆಸೆ ಹಾಗೂ ಕೆಟ್ಟ ಸ್ನೇಹಿತರ ಸಹವಾಸ ಜೂಜಾಟದ ಕಡೆ ಆಕರ್ಷಿಸ ಬಹುದು. ಜೂಜು ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಜೀವನದ ಮೇಲೆ ನೇರ ದುಷ್ಪರಿಣಾಮ ಬೀರಲಿದೆ ಎಂದು ಪೊಲೀ ಸರು ಜನರನ್ನು ಎಚ್ಚರಿಸಿದ್ದಾರೆ.
ಜೂಜಾಟದ ಪ್ರಕರಣಗಳು
ಕಳೆದ ಮೂರು ವರ್ಷಗಳಲ್ಲಿ ಅಂದರೆ ೨೦೨೩ರಿಂದ ಕ್ರಮವಾಗಿ ೪೭೯, ೪೬೯ ಹಾಗೂ ೫೫೧ ಜೂಜಾಟದ ಪ್ರಕರಣಗಳು ದಾಖಲಾಗಿವೆ. ವಿಶೇಷವಾಗಿ ಯುಗಾದಿ ಹಬ್ಬದಲ್ಲಿ ೨೦೨೩ ಮಾ.೨೧ರಿಂದ ೨೪ರವರೆಗೆ ೧೩೧, ೨೦೨೪ ಏಪ್ರಿಲ್ ೮ರಿಂದ ೧೧ರವರೆಗೆ ೧೩೫ ಹಾಗೂ ೨೦೨೫ ಮಾ.೨೯ರಿಂದ ಏಪ್ರಿಲ್ ೧ರವರೆಗೆ ೧೭೪ ಗ್ಯಾಂಬ್ಲಿAಗ್ ಪ್ರಕರಣಗಳು ದಾಖಲಾಗಿವೆ.
"
ಯುಗಾದಿ ಸಂದರ್ಭದಲ್ಲಿ ಜೂಜಾಡುವುದು ಟ್ರೆಂಡ್ ಆಗಿದೆ. ಗ್ಯಾಂಬ್ಲಿAಗ್‌ನಲ್ಲಿ ತೊಡಗಿರುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು. ಇಂಥ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಪೊಲೀಸರಿಗೆ ಸಹಕರಿಸಬೇಕು.