ಪಿಎಂಶ್ರೀ ಯೋಜನೆ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ

ಮೊಳಕಾಲ್ಮೂರು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಕೇಂದ್ರದ ಪಿಎಂಶ್ರೀ ಯೋಜನೆ ಕುರಿತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಮನ್ವಯ ಸಭೆ ನಡೆಯಿತು. ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ, ಸಹ ಶಿಕ್ಷಕರಾದ ಎಂ. ರೂಪಾ, ನಂದೀಶ್‌ಕುಮಾರ, ಅನಿತಾ, ಕುಮಾರಸ್ವಾಮಿ, ದೊಡ್ಡೇಶ್, ಮುಜಾಮಿಲ್, ಮೋಹನ್‌ಕುಮಾರ ಇದ್ದರು.
ಮೊಳಕಾಲ್ಮೂರು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಕೇಂದ್ರದ ಪಿಎಂಶ್ರೀ ಯೋಜನೆ ಕುರಿತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಮನ್ವಯ ಸಭೆ ನಡೆಯಿತು. ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ, ಸಹ ಶಿಕ್ಷಕರಾದ ಎಂ. ರೂಪಾ, ನಂದೀಶ್‌ಕುಮಾರ, ಅನಿತಾ, ಕುಮಾರಸ್ವಾಮಿ, ದೊಡ್ಡೇಶ್, ಮುಜಾಮಿಲ್, ಮೋಹನ್‌ಕುಮಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ ವಿಶ್ವಾಸ ವಿಶ್ವಾಸ
  • ಎಸ್‌ಡಿಎಂಸಿ ಪದಾಧಿಕಾರಿಗಳು-ಶಿಕ್ಷಕರ ಸಮನ್ವಯ ಸಭೆ
ಮೊಳಕಾಲ್ಮೂರು: ಆದರ್ಶ ವಿದ್ಯಾಲಯ ಪಿಎಂಶ್ರೀ ಯೋಜನೆಗೆ ಒಳಪಟ್ಟಿರುವುದು ಈ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯ ಶಿಕ್ಷಕ ಎಂ. ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಕೇಂದ್ರದ ಪಿಎಂಶ್ರೀ ಯೋಜನೆ ಪೂರ್ವ ಸಿದ್ಧತೆ ಕುರಿತು ಸೋಮವಾರ ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಹಾಗೂ ಶಿಕ್ಷಕರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಂಜೂರಾಗುವ ಅನುದಾನದಿಂದ ಮಕ್ಕಳ ಸಮಗ್ರ ಶಿಕ್ಷಣಕ್ಕೆ ಒತ್ತುಕೊಡಲಾಗುವುದು ಎಂದು ತಿಳಿಸಿದರು.
ವಿಶೇಷವಾಗಿ ಮಕ್ಕಳಿಗೆ ಪಠ್ಯಕ್ರಮಾನುಸಾರ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಕಂಪ್ಯೂಟರ್ ಶಿಕ್ಷಣ, ನೃತ್ಯ ಮತ್ತು ಸಂಗೀತ, ಯೋಗ, ದೈಹಿಕ ಶಿಕ್ಷಣ, ಕಲೆ ಮತ್ತು ವೃತ್ತಿ ಶಿಕ್ಷಣ ಹಾಗೂ ಮಕ್ಕಳಿಗೆ ಆತ್ಮ ರಕ್ಷಣೆಗೆ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಗೆ ಪಿಎಂಶ್ರೀ ಯೋಜನೆ ಒತ್ತುಕೊಟ್ಟಿದೆ. ಇದು ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ಪೂರಕವಾಗಿದೆ. ಇದಕ್ಕಾಗಿ ಮೆರಿಟ್ ಆದಾರದ ಮೇಲೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದ ಪ್ರದೇಶದ ಶಾಲೆಯನ್ನು ಪಿಎಂಶ್ರೀ ಯೋಜನೆಗೆ ಸೇರಿಸಿರುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿಯಾಗಿದೆ. ಪಠ್ಯದ ಜತೆ ಸಹ ಪಠ್ಯ ಚಟುವಟಿಕೆಗಳ ಅಭ್ಯಾಸದಿಂದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ. ಸಿಕ್ಕ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಸಮಗ್ರ ಶಿಕ್ಷಣದ ಹಿತದೃಷ್ಟಿಯಿಂದ ಕಾಯಂ ಶಿಕ್ಷಕರ ನೇಮಕಾತಿಗೆ ಸರ್ಕಾರ ಮತ್ತು ಇಲಾಖೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.
ಸಹ ಶಿಕ್ಷಕರಾದ ಎಂ. ರೂಪಾ, ನಂದೀಶ್‌ಕುಮಾರ, ಅನಿತಾ, ಕುಮಾರಸ್ವಾಮಿ, ದೊಡ್ಡೇಶ್, ಮುಜಾಮಿಲ್, ಮೋಹನ್‌ಕುಮಾರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ರುದ್ರೇಶ, ನಾಗರಾಜ, ಶಾರದಮ್ಮ, ಅಶೋಕ, ಮನ್ಸೂರ್ ಅಹಮದ್, ಬಸವರಾಜ ಇದ್ದರು.
ಪೋ ಎಂಎಲ್ಕೆ ಸಭೆ. ನ-24)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net