pm shri yojana:ಪಿಎಂಶ್ರೀ ಯೋಜನೆಯಿಂದ ಬಡಮಕ್ಕಳ ಶಿಕ್ಷಣಕ್ಕೆ ಉತ್ತೇಜನ

PM Shri Yojana:ಮೊಳಕಾಲ್ಮೂರು ಆದರ್ಶ ವಿದ್ಯಾಲಯದಲ್ಲಿ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಮನ್ವಯ ಸಭೆ ನಡೆಯಿತು.
PM Shri Yojana:ಮೊಳಕಾಲ್ಮೂರು ಆದರ್ಶ ವಿದ್ಯಾಲಯದಲ್ಲಿ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಮನ್ವಯ ಸಭೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ವಿಶ್ವಾಸ
  • ಆದರ್ಶ ವಿದ್ಯಾಲಯದಲ್ಲಿ ಪಿಎಂಶ್ರೀ ಯೋಜನೆ ಪೂರ್ವ ಸಿದ್ಧತೆ ಕುರಿತ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ಸಮನ್ವಯ ಸಭೆ
  • ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿಗೂ ಇದು ಪೂರಕ

ಮೊಳಕಾಲ್ಮೂರು:ಪಟ್ಟಣದಆದರ್ಶ ವಿದ್ಯಾಲಯವು ಪಿಎಂಶ್ರೀಯೋಜನೆಗೆ ಒಳಪಟ್ಟಿರುವುದು ಈಭಾಗದ ಬಡ ಮಕ್ಕಳ ಸಮಗ್ರ ಶಿಕ್ಷಣಕ್ಕೆಹೆಚ್ಚು ಅನುಕೂಲವಾಗಲಿದೆ ಎಂದುಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರಆದರ್ಶ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದಪಿಎಂಶ್ರೀ ಯೋಜನೆ ಪೂರ್ವ ಸಿದ್ಧತೆಕುರಿತ ಶಾಲಾಭಿವೃದ್ಧಿ ಸಮಿತಿ(SDMC) ಹಾಗೂಶಿಕ್ಷಕರ ಸಮನ್ವಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಕೇಂದ್ರಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿಮಂಜೂರಾಗುವ ಅನುದಾನದಿಂದ ಮಕ್ಕಳಸಮಗ್ರ ಶಿಕ್ಷಣಕ್ಕೆ ಒತ್ತುನೀಡಲಾಗುವುದು ಎಂದು ಅವರುತಿಳಿಸಿದರು.

ಕಲೆ ಮತ್ತು ವೃತ್ತಿ ಶಿಕ್ಷಣಕ್ಕೆ ಒತ್ತು

ಪಿಎಂಶ್ರೀಯೋಜನೆಯು ಮಕ್ಕಳಿಗೆ ಪಠ್ಯಕ್ರಮಾನುಸಾರಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ,ಕಂಪ್ಯೂಟರ್ಶಿಕ್ಷಣ,ನೃತ್ಯಮತ್ತು ಸಂಗೀತ,ಯೋಗ,ದೈಹಿಕಶಿಕ್ಷಣ,ಕಲೆಮತ್ತು ವೃತ್ತಿ ಶಿಕ್ಷಣಕ್ಕೆಒತ್ತು ಕೊಟ್ಟಿದೆ.ವಿಶೇಷವಾಗಿ,ಹೆಣ್ಣುಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆತರಬೇತಿಗೂ ಇದು ಪೂರಕವಾಗಿದೆ.ಈ ಸಮಗ್ರಪ್ರಗತಿಗೆ ಅನುಕೂಲವಾಗುವಂತೆ,ಶಾಲೆಯಲ್ಲಿಮೆರಿಟ್ ಆಧಾರದ ಮೇಲೆ ಅತಿಥಿಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದುಎಂದು ಮುಖ್ಯ ಶಿಕ್ಷಕರು ಮಾಹಿತಿನೀಡಿದರು.

ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ

ಎಸ್.ಡಿ.ಎಂ.ಸಿಅಧ್ಯಕ್ಷ ನಾಗರಾಜ್ ಮಾತನಾಡಿ,ಶಿಕ್ಷಣಕ್ಷೇತ್ರದಲ್ಲಿ ತೀರಾ ಹಿಂದುಳಿದಪ್ರದೇಶದ ಈ ಶಾಲೆಯನ್ನು ಪಿಎಂಶ್ರೀಯೋಜನೆಗೆ ಸೇರಿಸಿರುವುದು ಮಕ್ಕಳಉಜ್ವಲ ಭವಿಷ್ಯಕ್ಕೆ ದಾರಿಯಾಗಿದೆಎಂದು ಹೇಳಿದರು.ಪಠ್ಯದಜೊತೆಗೆ ಸಹಪಠ್ಯ ಚಟುವಟಿಕೆಗಳಅಭ್ಯಾಸದಿಂದ ಯಾವುದಾದರೂ ಒಂದುಕ್ಷೇತ್ರದಲ್ಲಿ ಸಾಧನೆ ಮಾಡಲುಸಾಧ್ಯ.ವಿದ್ಯಾರ್ಥಿಗಳುಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರುಕರೆ ನೀಡಿದರು.ಇದೇವೇಳೆ,ಮಕ್ಕಳಸಮಗ್ರ ಶಿಕ್ಷಣದ ಹಿತದೃಷ್ಟಿಯಿಂದ,ಶಾಲೆಗೆಕಾಯಂ ಶಿಕ್ಷಕರ ನೇಮಕಾತಿಗೆ ಸರ್ಕಾರಮತ್ತು ಇಲಾಖೆ ಆದ್ಯತೆ ನೀಡಬೇಕುಎಂದು ಮನವಿ ಮಾಡಿದರು.

ಸಮನ್ವಯಸಭೆಯಲ್ಲಿ ಸಹ ಶಿಕ್ಷಕರಾದ ಎಂ.ರೂಪಾ,ನಂದೀಶ್‌ಕುಮಾರ,ಅನಿತಾ,ಕುಮಾರಸ್ವಾಮಿ,ದೊಡ್ಡೇಶ್,ಮುಜಾಮಿಲ್,ಮೋಹನ್‌ಕುಮಾರಮತ್ತು ಶಾಲಾಭಿವೃದ್ಧಿ ಸಮಿತಿಪದಾಧಿಕಾರಿಗಳಾದ ಉಪಾಧ್ಯಕ್ಷೆನಾಗವೇಣಿ,ಸದಸ್ಯರಾದರುದ್ರೇಶ,ನಾಗರಾಜ,ಶಾರದಮ್ಮ,ಅಶೋಕ,ಮನ್ಸೂರ್ಅಹಮದ್,ಬಸವರಾಜಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net