ಬೆಳೆ ನಷ್ಟ ಪರಿಹಾರ ವಿಳಂಬಕ್ಕೆ ಆಕ್ರೋಶ

ಮೊಳಕಾಲ್ಮೂರಿನಲ್ಲಿ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಶೀಘ್ರ ಘೋಷಣೆಗೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನಾಗವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ಆರ್.ಬಿ. ನಿಜಲಿಂಗಪ್ಪ, ಜಿ.ಕೆ.ನಾಗರಾಜು, ಪಿ. ರಾಮಾಂಜಿನಿ ಇತರರಿದ್ದರು.
ಮೊಳಕಾಲ್ಮೂರಿನಲ್ಲಿ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಶೀಘ್ರ ಘೋಷಣೆಗೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ನಾಗವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ಆರ್.ಬಿ. ನಿಜಲಿಂಗಪ್ಪ, ಜಿ.ಕೆ.ನಾಗರಾಜು, ಪಿ. ರಾಮಾಂಜಿನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದಿಂದ ಪ್ರತಿಭಟನೆ
  • ಬೆಳೆ ನಷ್ಟ ಪರಿಹಾರ ನೀಡಲು ವಿಳಂಬ ಧೋರಣೆ
  • ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
ಮೊಳಕಾಲ್ಮೂರು: ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನಡೆ ಖಂಡಿಸಿ ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ. ನಿಜಲಿಂಗಪ್ಪ ಮಾತನಾಡಿ, ಮಳೆ ಅಭಾವದಿಂದ ಉಂಟಾಗಿರುವ ಬೆಳೆನಷ್ಟದಿಂದ ರೈತರ ಬದುಕು ದುಸ್ತರವಾಗಿದೆ. ಜೀವನ ನಿರ್ವಹಣೆ ಹಾಗೂ ಜಾನುವಾರು ರಕ್ಷಣೆಗೆ ಕಾಸಿಲ್ಲದೆ ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಬೆಳೆ ವಿಮೆ ಕೊಡಬೇಕೆಂಬ ರೈತರ ಕೂಗು ಕೇಳಿಸದ ರೀತಿ ವರ್ತಿಸುತ್ತಿರುವ ಸರ್ಕಾರದ ನಾಟಕ ಬಹಳ ದಿನ ನಡೆಯುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಶಾಸಕರು ಸರ್ಕಾರದ ಕಣ್ತೆರೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಡಿಎಸ್‌ಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂಬುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮರೆತಂತಿದೆ. ಬರಕ್ಕೆ ತುತ್ತಾಗಿ ಪರಿತಪಿಸುತ್ತಿದ್ದರೂ ಪರಿಹಾರ ಕೊಡದೆ ಮೊಂಡುತನ ಪ್ರದರ್ಶಿಸುತ್ತಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದರು.
ಬಯಲುಸೀಮೆಗೆ ಭದ್ರಾ ಮೇಲ್ದಂಡೆ ನೀರು ಹರಿಸುವ ವಿಚಾರದಲ್ಲೂ ನಿರ್ಲಕ್ಷೃ ಧೋರಣೆ ತಾಳಿರುವ ನಡೆ ಸರಿಯಲ್ಲ. ರೈತರು ತಾಳ್ಮೆ ಕಳೆದುಕೊಳ್ಳುವ ಮುನ್ನ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು. ಉದಾಸೀನ ತೋರಿದರೆ ನಿರಶನಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.
ರೈತಸಂಘದ ಪದಾಧಿಕಾರಿಗಳಾದ ಜಿ.ಕೆ. ನಾಗರಾಜ, ಪಿ.ರಾಮಾಂಜಿನಿ, ಜಿ.ಎನ್.ಶಿವಮೂರ್ತಿ, ಮಂಜಣ್ಣಚಾರಿ, ಜಿ.ಎಲ್. ನಾಗಭೂಷಣ, ಸಿದ್ದಪ್ಪ, ಎಚ್. ಕುಶಾಲಪ್ಪ, ಉಮೇಶ, ಎಸ್. ನಾಗಭೂಷಣ, ಎಂ. ಮಾರ್ಕಂಡಯ್ಯ, ತಿಪ್ಪೇಸ್ವಾಮಿ, ಭೀಮಣ್ಣ, ಪರುಶುರಾಮಪ್ಪ, ತಿಪ್ಪಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net