ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ತಿದ್ದುಪಡಿಗೆ ವಿರೋಧ

 ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ೨೦೨೦-ತಿದ್ದುಪಡಿ ಮಸೂದೆ ವಿರೋಽಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ಅಂತ್ಯವಾದ ಬಳಿಕ ಪ್ರತಿಭಟನಾ ನಿರತ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಎಸ್.ಕೆ. ಬಸವರಾಜನ್, ಕೆ.ಟಿ. ಕುಮಾರಸ್ವಾಮಿ, ಪ್ರಭಂಜನ್, ಚನ್ನಕೇಶವ, ಡಾ. ಮಂಜುನಾಥ್ ಇತರರು ಇದ್ದರು.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ೨೦೨೦-ತಿದ್ದುಪಡಿ ಮಸೂದೆ ವಿರೋಽಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ಅಂತ್ಯವಾದ ಬಳಿಕ ಪ್ರತಿಭಟನಾ ನಿರತ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಎಸ್.ಕೆ. ಬಸವರಾಜನ್, ಕೆ.ಟಿ. ಕುಮಾರಸ್ವಾಮಿ, ಪ್ರಭಂಜನ್, ಚನ್ನಕೇಶವ, ಡಾ. ಮಂಜುನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿವಾರ ಕಾರ್ಯಕರ್ತರ ಪ್ರತಿಭಟನೆ ಅಂತ್ಯ
  • ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಕೆ
  • ರಾಜ್ಯ ಸಚಿವ ಸಂಪುಟ
ಚಿತ್ರದುರ್ಗ: ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ೨೦೨೦-ತಿದ್ದುಪಡಿ ಮಸೂದೆ ಮಂಡಿಸದAತೆ ಆಗ್ರಹಿಸಿ ವಿಶ್ವ ಹಿಂದು ಪ ರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಆರಂಭಿಸಿದ್ದ ೨೪ ಗಂಟೆಗಳ ಆಹೋರಾತ್ರಿ ನಿರಶನವನ್ನು ಗುರುವಾರ ಅಂತ್ಯಗೊಳಿಸಿ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕಾಯ್ದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ರಾಜಕೀಯ, ಧಾರ್ಮಿಕ ವಲಯಗಳ ತೀವ್ರ ಉದ್ವಿಗ್ನತೆಗೆ ಕಾ ರಣವಾಗಿದೆ. ವಿಧಾನಮಂಡಲದ ಬೆಳಗಾವಿ ಚಳಿಗಾಲ ಅಽವೇಶನದಲ್ಲಿ ಅಕ್ರಮ ಗೋ ಸಾಗಾಟಕ್ಕೆ ಬಳಸುವ ವಾಹನಗಳ ಬಿಡು ಗಡೆ ನಿಯಮ ಸಡಿಲಗೊಳಿಸುವ ತಿದ್ದುಪಡಿ ಮಸೂದೆ ಮಂಡನೆಗೆ ಸರ್ಕಾರ ಮುಂದಾಗಿದೆ.
ಈಗ ಜಾರಿಯಲ್ಲಿರುವ ಕಾಯ್ದೆ ಸೆಕ್ಷನ್ ೮ರ ಪ್ರಕಾರ ಗೋವುಗಳನ್ನು ಅಕ್ರಮ ಸಾಗಾಟ ವಾಹನ ಬಿಡುಗಡೆಗೆ ವಾಹನದ ಮೌಲ್ಯ ದಷ್ಟು ಬ್ಯಾಂಕ್ ಗ್ಯಾರಂಟಿ ಕೊಡಬೇಕಾಗಿದೆ. ಆದರೆ, ಇದನ್ನು ಸರ್ಕಾರ ಬದಲಿಸಲು ಮುಂದಾಗಿದೆ. ಈ ಕಠಿಣ ನಿಯಮವನ್ನು ಹಿಂಪಡೆದರೆ ಅಕ್ರಮ ಗೋಸಾಗಾಟಕ್ಕೆ ನೇರ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಗ್ಯಾರಂಟಿ ನಿಯಮದಿಂದ ಅಕ್ರಮ ಸಾಗಾಟಗಾರರಿಗೆ ತಡೆ ಉಂಟಾಗಿತ್ತು. ಈಗ ಅದನ್ನೇ ತೆರವುಗೊಳಿಸುವ ಮೂಲಕ ಸರ್ಕಾರ ಗೋವುಗಳ ಕಳ್ಳ ಸಾಗಾಟಗಾರರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಈ ತಿದ್ದುಪಡಿ ಜಾರಿಗೆ ಬಂದರೆ ಹಿಂದು ಸಮಾಜಕ್ಕೆ ಪವಿತ್ರವಾಗಿರುವ ಗೋವಂಶದ ಮೇಲೆ ಹಿಂಸೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿ ಹಿಂದಿನ ಬಿಜೆಪಿ ಸರ್ಕಾರ ಗೋ ಸಂರಕ್ಷಣೆ ಸಂಬAಧ ಕಠಿಣ ಕಾಯ್ದೆ ಜಾರಿಗೊಳಿಸಿತ್ತು. ಆ ದರೆ, ಈಗ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಠಿಕರಣದಲ್ಲಿ ತೊಡಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಸಡಿಲಗೊಳಿಸಿ ಗೋ ಕಳ್ಳರಿಗೆ ಅನುಕೂಲ ಮಾಡಿ ಕೊಡಲು ಹೊರಟಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದರಿಂದ ಉದ್ದೇಶಿತ ತಿದ್ದುಪಡಿ ಕೈ ಬಿಡಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪರಿವಾರ ಪ್ರಮುಖರಾದ ಪ್ರಭಂಜನ್, ಚನ್ನ ಕೇಶವ, ಡಾ. ಮಂಜುನಾಥ್, ಕÊಷ್ಣ, ದಿನೇಶ್, ರಾಮು, ಲೋಕೇಶ್, ರಾಜಕುಮಾರ್, ದೃವಕುಮಾರ್, ಯತೀಶ್, ರೇಖಾ, ವೆಂಕಟೇಶ್ ಯಾದವ್, ಜಿ.ಎಂ. ಸುರೇಶ್, ವಿಠ್ಠಲ್, ಮೋಹನ್‌ಕುಮಾರ್, ಈರಣ್ಣ, ದೀಪಕ್‌ರಾಜ್, ದರ್ಶನ್ ನಾಗರಾಜ್‌ಬೇದ್ರೆ, ದ್ಯಾಮಣ್ಣ, ವೆಂಕಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net