ಮಹಿಳಾ ಪ್ರಾತಿನಿದ್ಯಕ್ಕೆ ಪ್ರತಿಪಕ್ಷಗಳಿಂದ ಅಡ್ಡಗಾಲು

ಹನುಮಂತೇಗೌಡ
ಹನುಮಂತೇಗೌಡ
Published on
ಚಿತ್ರದುರ್ಗ: ಮಹಿಳೆಯರ ಸಬಲೀಕರಣ ವಿಷಯದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಬಿಜೆಪಿ ಮುಖಂಡ ಬಿ.ಸಿ. ಹನುಮಂತೇಗೌಡ ಟೀಕಿಸಿದ್ದಾರೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮುಂದಾಗಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಯತ್ನಕ್ಕೆ ಸೋಲಾಗಿದೆ.
ಸಂಸತ್ತಿನ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಮತ್ತು ಮಿತ್ರ ಪಕ್ಷಗಳ ಧುರೀಣರು ರಾಷ್ಟಾçಭಿವೃದ್ಧಿಯಲ್ಲಿ ಮಹಿಳೆ ಪಾಲ್ಗೊಳ್ಳುವಿಕೆ ಚಿಂತನೆಗೆ ಧಕ್ಕೆ ತಂದಿದ್ದಾರೆ. ಇದರಿಂದ ಮಹಿಳಾ ರಾಜಕೀಯ ಪ್ರಾತಿನಿಧ್ಯದಲ್ಲಿ ಸುವರ್ಣಾಕ್ಷರದಲ್ಲ್ಲಿ ಬರೆದಿಡಬಹುದಾಗಿದ್ದ ಅವಕಾಶ ತಪ್ಪಿದೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಮಹಿಳಾ ವಿರೋಽ ಧೋರಣೆ ಅನಾವರಣಗೊಂಡಿದೆ. ವಿಪಕ್ಷಗಳು ಮಹಿಳಾ ಮೀಸಲಾತಿ ವಿರುದ್ಧವಾಗಿವೆ. ಇವರ ಅಸಲಿ ಚಿಂತನೆ ಸಂಸತ್ತಿನಲ್ಲಿ ಅನಾವರಣಗೊಂಡಿದೆ. ನಾರಿಶಕ್ತಿಗೆ ೨೦೨೯ಕ್ಕಿಂತ ಮೊದಲು ಅವಕಾಶ ಕೊಡಲು ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಸಿದ್ಧವಿಲ್ಲ ಎಂಬುದು ಸಾಬೀತಾಗಿದೆ.
ಇವುಗಳಿಗೆ ಚುನಾವಣೆ ಗೆಲ್ಲುವೊಂದೇ ಏಕಮಾತ್ರ ಉದ್ದೇಶವಾಗಿದ್ದರೆ ಬಿಜೆಪಿಗೆ ರಾಷ್ಟç ನಿರ್ಮಾಣದ ಚಿಂತನೆ ಇದೆ. ಜನಸಂಖ್ಯೆ ಆಧಾರದಲ್ಲಿ ಜನಪ್ರತಿನಿಽಗಳ ಹೆಚ್ಚಳದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಸುಳ್ಳು.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸಂಸದರ ಸಂಖ್ಯೆ ೧೨೯ ರಿಂದ ೧೯೫ಕ್ಕೆ ಏರಿಸುವ ಆಶಯಕ್ಕೆ ಇದೀಗ ಸೋಲಾಗಿದೆ. ಭಾರತವನ್ನು ಉತ್ತರ, ದಕ್ಷಿಣವೆಂದು ಒಡೆಯುವ ಹುನ್ನಾರ ಪ್ರತಿಪಕ್ಷಗಳಾದ್ದಾಗಿದೆ ಎಂದು ಹನುಮಂತೇ ಗೌಡ ಕಿಡಿಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net