ಫುಟ್‌ಪಾತ್ ಒತ್ತುವರಿ ತೆರವಿಗೆ ಕಾರ್ಯಾಚರಣೆ

ರಸ್ತೆಗಿಳಿದ ಸಂಚಾರ ಪೊಲೀಸರು

Operation to clear footpath encroachments
Operation to clear footpath encroachments
Published on: 

ಚಿತ್ರದುರ್ಗ: ನಗರದ ಪ್ರಮುಖ ವಾಣಿಜ್ಯ ಹಾಗೂ ಸಾರಿಗೆ ಸಂಪರ್ಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿದ್ದ ಅಂಗಡಿ- ಮುಂಗಟ್ಟುಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಗುರುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಕುಶಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ, ಸಂಚಾರ ಠಾಣೆ ಪಿಎಸ್‌ಐ ಶೈಲಶ್ರೀ ನೇತÊತ್ವದ ತಂಡ, ನಗರದ ವ್ಯಾಪಾರ ಕೇಂದ್ರಗಳಲ್ಲಿ ದಿಢೀರ್ ಕಾರ್ಯಾಚರಣೆಗಿಳಿದು ಸಾರ್ವಜನಿಕ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿತು.

ನಗರದ ಎಂ.ಜಿ. ವÊತ್ತ, ಬಿ.ಡಿ. ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ, ಆನೆಬಾಗಿಲು, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಸಂತೆಹೊAಡ, ಜಿಲ್ಲಾಸ್ಪತ್ರೆ ಹಾಗೂ ರಂಗಯ್ಯನಬಾಗಿಲು ಮಾರ್ಗಗಳು ನಗರದ ಜೀವನಾಡಿ ರಸ್ತೆಗಳಾಗಿವೆ. ಮೊದಲೇ ಕಿರಿದಾಗಿರುವ ಈ ರಸ್ತೆಗಳಲ್ಲಿ ವರ್ತಕರು ಸಾಮಗ್ರಿಗಳನ್ನು ಹೊರಗಿಟ್ಟುಕೊಳ್ಳುತ್ತಿದ್ದರು. ಇದರಿಂದ ನಿತ್ಯವೂ ಸಂಚಾರ ಸಿಕ್ಕು ಉಂಟಾಗುತ್ತಿತ್ತು. ಪಾದಚಾರಿಗಳು ವಾಹನಗಳ ನಡುವೆ ರಸ್ತೆಯಲ್ಲೇ ನಡೆಯಬೇಕಾದ ಅನಿವಾರ್ಯತೆ ಇತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಮೆದೇಹಳ್ಳಿ ರಸ್ತೆ ಮತ್ತು ಸಂತೆಹೊAಡ ಆವರಣದಲ್ಲಿ ಮೊದಲು ತೆರವು ಆರಂಭಿಸಿದರು. ರಸ್ತೆಯವರೆಗೂ ಚಾಚಿಕೊಂಡಿದ್ದ ಅಂಗಡಿಗಳ ನಾಮ-Àಲಕಗಳು, ಪಾದಚಾರಿ ಮಾರ್ಗದಲ್ಲಿದ್ದ ಪ್ರಚಾರ ಬೋರ್ಡ್ಗಳು, ಬಟ್ಟೆ ಅಂಗಡಿಗಳ ಎದುರು ಇರಿಸಲಾಗಿದ್ದ ಪ್ಲಾಸ್ಟಿಕ್ ಬೊಂಬೆಗಳು ಹಾಗೂ ಅನಽಕÊತವಾಗಿ ನಿರ್ಮಿಸಲಾಗಿದ್ದ ಸಿಮೆಂಟ್ ಮೆಟ್ಟಿಲುಕಟ್ಟೆಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ, ಅಂಗಡಿಯೆದುರು ವಾಹನ ನಿಲ್ಲಿಸಬಾರದೆಂಬ ಕಾರಣಕ್ಕೆ ಕೆಲ ವ್ಯಾಪಾರಿಗಳು ರಸ್ತೆ ಬದಿ ಅಡ್ಡಲಾಗಿ ಇಟ್ಟಿದ್ದ ಕಬ್ಬಿಣದ ಮ್ಯಾಟ್‌ಗಳು ಹಾಗೂ ಕಲ್ಲುಗಳನ್ನು ಸಹ ತೆರವುಗೊಳಿಸಿದರು.

ಸಮ-ಬೆಸ ಪಾರ್ಕಿಂಗ್ ನಿಯಮ ಪಾಲನೆಗೆ ಸೂಚನೆ

ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಸಮ ಮತ್ತು ಬೆಸ ದಿನಾಂಕಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ವಾಹನ ಸವಾರರಿಗೆ ಹಾಗೂ ಸ್ಥಳೀಯ ವರ್ತಕರಿಗೆ ತಿಳಿಹೇಳಲಾಯಿತು. ರಸ್ತೆಯನ್ನು ಆಕ್ರಮಿಸಿ ವ್ಯಾಪಾರ ನಡೆಸಬಾರದು, ಒಂದು ವೇಳೆ ಪುನಃ -ÀÅಟ್‌ಪಾತ್ ಒತ್ತುವರಿ ಮಾಡಿದರೆ ದಂಡ ಸೇರಿದಂತೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಸಂಚಾರ ಠಾಣೆಯ ಪಿಎಸ್‌ಐ ಮಂಜುನಾಥ್, ಎಎಸ್‌ಐಗಳಾದ ರವಿ, ಶ್ರೀನಿವಾಸ್ ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಬಸ್ ನಿಲ್ದಾಣ ಮುಂಭಾಗ ಪ್ರತ್ಯೇಕ ಲೇನ್, ಬ್ಯಾರಿಕೇಡ್ ವ್ಯವಸ್ಥೆ

ಮುಂದಿನ ದಿನಗಳಲ್ಲಿ ನಗರದ ಉಳಿದ ಪ್ರಮುಖ ವÊತ್ತ ಹಾಗೂ ಮಾರ್ಗಗಳಲ್ಲೂ -ÀÅಟ್‌ಪಾತ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಶೈಲಶ್ರೀ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಭಾಗದಲ್ಲಿ ವಿಶಾಲವಾದ ಅಽಕÊತ ಪಾರ್ಕಿಂಗ್ ಸೌಲಭ್ಯವಿದೆ. ಆದರೂ ಬಹುತೇಕ ಸವಾರರು ನಿಲ್ದಾಣದ ಪ್ರವೇಶ ದ್ವಾರದ ಮುಖ್ಯ ರಸ್ತೆಯಲ್ಲೇ ಬೈಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಇದರಿಂದ ಬಸ್‌ಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾರಿಗೆ ನಿಗಮದ ಹಿರಿಯ ಅಽಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಯೋಜನೆ ರೂಪಿಸಲಾಗಿದೆ ಎಂದರು.

ಬಸ್‌ಗಳ ಒಳ ಮತ್ತು ಹೊರ ಸಂಚಾರಕ್ಕೆ ತೊಂದರೆಯಾಗದAತೆ, ಬೈಕ್ ಸವಾರರು ನಿಲ್ದಾಣದ ಅಽಕÊತ ಪಾರ್ಕಿಂಗ್ ತಾಣಕ್ಕೆ ಸುಲಭವಾಗಿ ತೆರಳಲು ಪ್ರತ್ಯೇಕ ಮಾರ್ಗ (ಲೇನ್) ಕಲ್ಪಿಸಲಾಗಿದೆ. ಅಲ್ಲದೆ, ಬಸ್ ನಿಲ್ದಾಣದ ಎದುರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ತಡೆಯಲು ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ಸಂಚಾರ ಪೊಲೀಸರು ಮೆದೇಹಳ್ಳಿ ರಸ್ತೆ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ಪಿಎಸ್‌ಐಗಳಾದ ಶೈಲಶ್ರೀ, ಮಂಜುನಾಥ್ ಮತ್ತಿತರರು ಇದ್ದರು.