೨೩ರಂದು ವಿಧಾನ ಪರಿಷತ್ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ

ಜಿಲ್ಲೆಯಲ್ಲಿ ೫೫ ಮತಗಟ್ಟೆ ೩೫೦ ಸಿಬ್ಬಂದಿ ನೇಮಕ
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬಂಽಸಿದ ಭಾಚಿತ್ರಗಳಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಽಕಾರಿ ಎಸ್.ರಮ್ಯಾ ಬಿಡುಗಡೆ ಮಾಡಿದರು.  ಬೀಬೀ -Áತೀಮಾ, ಎಂ. ಜುಂಜಣ್ಣ ಇತರರು ಇದ್ದಾರೆ.
ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬಂಽಸಿದ ಭಾಚಿತ್ರಗಳಿರುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಽಕಾರಿ ಎಸ್.ರಮ್ಯಾ ಬಿಡುಗಡೆ ಮಾಡಿದರು. ಬೀಬೀ -Áತೀಮಾ, ಎಂ. ಜುಂಜಣ್ಣ ಇತರರು ಇದ್ದಾರೆ.
Published on: 

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು ೫೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ೪೪,೦೭೩ ಮತದಾರರಿದ್ದು, ೨೦೨೫ರ ಡಿಸೆಂಬರ್ ಅಂತ್ಯಕ್ಕೆ ಪದವೀಧರ ಕ್ಷೇತ್ರದ ಮತಪಟ್ಟಿಯಲ್ಲಿ ೪೧,೩೫೮ ಪದವೀಧರ ಮತದಾರರಿದ್ದರು. ಈಗ ಹೊಸದಾಗಿ ೨೭೧೫ ಮತದಾರರ ಸೇರ್ಪಡೆಯಾಗಿದೆ ಎಂದು ಜಿಲ್ಲಾಽಕಾರಿ ಎಸ್. ರಮ್ಯಾ ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆಯ ೩ ತಾಲೂಕುಗಳು ಆಗ್ನೇಯ ಪದವೀಧರ ಕ್ಷೇತ್ರದ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು ಒಟ್ಟು ೧.೮೮ ಲಕ್ಷ ಮತದಾರರು ಇದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದಿನ ಯಾವುದೇ ಮತದಾರರ ಹೆಸರನ್ನು ತೆಗೆದು ಹಾಕಿಲ್ಲ. ೨೫,೫೫೧ ಪುರುಷ ಹಾಗೂ ೧೮,೫೨೨ ಮಹಿಳೆಯರು ಸೇರಿ ೪೪,೦೭೩ ಪದವೀಧರ ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಪದವೀಧರ ಮತದಾರರು ಇದ್ದಾರೆ. ಈ ಹಿಂದಿನ ೨೦೨೨ರ ಚುನಾವಣೆಯಲ್ಲಿದ್ದ ೨೨ ಮತಗಟ್ಟೆಗಳೊಂದಿಗೆ, ಈ ಬಾರಿ ೩೩ ಹೆಚ್ಚುವರಿ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ ೫೫ಕ್ಕೆ ಏರಿಕೆಯಾಗಿದೆ.

ಮತದಾನ ಪ್ರಕ್ರಿಯೆಗೆ ೩೫೦ ಅಽಕಾರಿ, ಸಿಬ್ಬಂದಿ ನೇಮಿಸಲಾಗಿದೆ. ೭೦ ಮತಗಟ್ಟೆ ಅಽಕಾರಿ, ೭೦ ಸಹಾಯಕ ಮತಗಟ್ಟೆ ಅಽಕಾರಿಗಳು, ಇದರೊಂದಿಗೆ ಎರಡು ಹಾಗೂ ೩ನೇ ಮತಗಟ್ಟೆ ಅಽಕಾರಿಗಳಾಗಿ ತಲಾ ೭೦, ಸೂಕ್ಷ ವೀಕ್ಷಕರಾಗಿ ೬೮ ಹಾಗೂ ೨ ಮಾಸ್ಟರ್ ಟ್ರÊೆನರ್‌ಗಳು ಮತದಾನ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

೧೦ ಅಭ್ಯರ್ಥಿಗಳು

ಅಕ್ಟೋಬರ್ ೬ ರಂದು ನಾಮಪತ್ರ ಸಲ್ಲಿಕೆ ಅವಽ ಮುಕ್ತಾಯಗೊಂಡಿದ್ದು, ಪರಿಶೀಲನೆ ನಂತರ ಒಟ್ಟು ೧೦ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್‌ನಿಂದ ಶಶಿಹುಲಿಕುಂಟೆ ಮಠ್, ಬಿಜೆಪಿಯಿಂದ ಕೆ.ಎಂ. ಸುರೇಶ (ಸೋಮೇಶ್ವರ), ಸರ್ವ ಜನತಾ ಪಕ್ಷದಿಂದ ಜಿ.ಸಿ. ಪಾಟೀಲ್ ಅಭ್ಯರ್ಥಿಗಳಾಗಿದ್ದಾರೆ. ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್.ಯಾದವ್, ಆರ್.ಲಕ್ಷ÷್ಮಯ್ಯ, ಲಕ್ಷಿ÷್ಮÃಕಾಂತ್ ಎಸ್.ಯಾದವ್, ಶಶಿಹುಲಿಕಟ್ಟಿ, ಸೈಯದ್ ಅಕಾ ಅಹಮದ್, ಅಡ್ಡೊಕೇಟ್‌ಬರೀದ್ ಸ್ಪಽðಸಿದ್ದಾರೆ.

ಮತಗಳು ಇನ್‌ವ್ಯಾಲಿಡ್ ಆಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲಾಗುವುದು. ಭಾವಚಿತ್ರ ರಹಿತ ಅಂತಿಮ ಮತದಾರ ಪಟ್ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸಾರ್ವಜನಿಕರು ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ ೧೯೫೦ನ್ನು ಸಂಪರ್ಕಿಸಬಹುದು ಎಂದು ಡಿಸಿ ತಿಳಿಸಿದರು.

ಯಾರ ಹೆಸರನ್ನೂ ಕೈ ಬಿಟ್ಟಿಲ್ಲ

ಎಸ್‌ಐಆರ್‌ನಿಂದ ಅನರ್ಹರೆಂದು ಗುರುತಿಸಲಾಗಿದ್ದ ಮತದಾರರ ವಿಚಾರಣೆ ಪ್ರಗತಿಯಲ್ಲಿದ್ದು, ೨೫೦ ಮತದಾರರ ವಿಚಾರಣೆ ಪೂರ್ಣಗೊಂಡಿದೆ ಎಂದು ಜಿಲ್ಲಾಽಕಾರಿ ಹೇಳಿದರು.

ಮಂಗಳವಾರ ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆಯಲ್ಲಿ ಮಾತನಾಡಿದ ಅವರು, ನೋಟಿಸ್ ನೀಡಿದ ಎಲ್ಲ ೨,೩೭೨ ಮತದಾರರ ವಿಚಾರಣೆ ಪೂರ್ಣಗೊಳಿಸಿ ಶೀಘ್ರ ಅಂತಿಮ ಆದೇಶ ನೀಡಲಾಗುವುದು. ಜಿಲ್ಲೆಯಲ್ಲಿ ನಮೂನೆ ೭ರ ಅರ್ಜಿ ಆಧರಿಸಿ ಯಾವುದೇ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ತಹಸೀಲ್ದಾರ್ ಬೀಬೀ -Áತೀಮಾ, ಜಿಲ್ಲಾ ವಾರ್ತಾಽಕಾರಿ ಎಂ. ಜುಂಜಣ್ಣ, ಕಾಂಗ್ರೆಸ್ಸಿನ ಡಿ.ಎನ್. ಮೈಲಾರಪ್ಪ, ಜೆಡಿಎಸ್‌ನ ಗೋಪಾಲಸ್ವಾಮಿ ನಾಯಕ, ಆಮ್‌ಆದ್ಮಿ ಪಾರ್ಟಿಯ ರಾಮಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net