ಕೆಲಸದೊತ್ತಡ ಮರೆತು ಸಂಗೀತ ಆಸ್ವಾದಿಸಿದ ಅಽಕಾರಿ, ಸಿಬ್ಬಂದಿ

 ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪದಲ್ಲಿ ಸಿ.ಎಸ್. ಷಡಾಕ್ಷರಿ, ಬಿ.ಟಿ. ಕುಮಾರಸ್ವಾಮಿ, ಡಿಎಸ್ ಡಾ. ರಂಗಸ್ವಾಮಿ, ಮಾಲತೇಶ್‌ಮುದ್ದಜ್ಜಿ,ನಾರಾಯಣಸ್ವಾಮಿ, ನಟ ಪ್ರೇಮ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪದಲ್ಲಿ ಸಿ.ಎಸ್. ಷಡಾಕ್ಷರಿ, ಬಿ.ಟಿ. ಕುಮಾರಸ್ವಾಮಿ, ಡಿಎಸ್ ಡಾ. ರಂಗಸ್ವಾಮಿ, ಮಾಲತೇಶ್‌ಮುದ್ದಜ್ಜಿ,ನಾರಾಯಣಸ್ವಾಮಿ, ನಟ ಪ್ರೇಮ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರರ ಕ್ರೀಡಾಕೂಟದ ಸಮಾರೋಪ
  • ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಪ್ರದಾನ
  • ಸಂಕ್ರಾAತಿ ಸಂಭ್ರಮ ಸುಗ್ಗಿಸಿರಿ
ಚಿತ್ರದುರ್ಗ: ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯ ಸರ್ಕಾರಿ ನೌಕರರು ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಕ್ರಾAತಿ ಸಂಭ್ರಮ ಸುಗ್ಗಿಸಿರಿ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರು, ಚಲನಚಿತ್ರ ನಟರು ಪ್ರಸ್ತುತಪಡಿಸಿದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಸ್ವಾದಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಜ.೨೯ ರಿಂದ ಎರಡು ದಿನಗಳ ಕಾಲ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪದಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ನೌಕರರು, ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.
ನಟ ನೆನಪಿರಲಿ ಪ್ರೇಮ್, ಗಾಯಕರಾದ ಕಂಬದ ರಂಗಯ್ಯ, ಸುಪ್ರಿತಾಭಟ್, ಕಡಬಗೆರೆ ಮುನಿರಾಜು ಅವರು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ೨೫೦೦ಕ್ಕಿಂತ ಹೆಚ್ಚು ನೌಕರರು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಗೌರವಾಧ್ಯಕ್ಷ ನಾರಾಯಣ ಸ್ವಾಮಿ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ಎಸ್. ರಾಜಪ್ಪ, ಚಳ್ಳಕೆರೆ ತಾಲೂಕು ಅಧ್ಯಕ್ಷ ಸಿ.ಟಿ. ವೀರೇಶ್, ಹಿರಿಯೂರು ತಾಲೂಕು ಅಧ್ಯಕ್ಷ ರಮೇಶ್ ಮತ್ತಿತರ ಪದಾಽಕಾರಿಗಳು, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಜಿಪಂ ಡಿಎಸ್ ಡಾ. ರಂಗಸ್ವಾಮಿ, ತಾಪಂ ಇಒ ರವಿಕುಮಾರ್, ತಹಸೀಲ್ದಾರ್ ಗೋವಿಂದರಾಜ್ ಇತರ ಅಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net