ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ

 ಚಿತ್ರದುರ್ಗ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣÉ ಶಿಬಿರ ಹಾಗೂ ನಡೆದ ಆಹಾರ ಮೇಳದ ಉದ್ಘಾಟನಾ ಕರ‍್ಯಕ್ರಮದಲ್ಲಿ ಡಾ.ಬಸವಕುಮಾರ ಸ್ವಾಮಿ, ಡಾ.ಕೆ.ಎಂ.ವೀರೇಶ್, ಪ್ರೊ.ಎಂ.ಆರ್.ಜಯಲಕ್ಷಿ÷್ಮÃ, ಡಾ.ರಾಜೇಶ್, ಕೆ.ಎಂ.ಚೇತನ್ ಇತರರು ಇದ್ದರು.
ಚಿತ್ರದುರ್ಗ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣÉ ಶಿಬಿರ ಹಾಗೂ ನಡೆದ ಆಹಾರ ಮೇಳದ ಉದ್ಘಾಟನಾ ಕರ‍್ಯಕ್ರಮದಲ್ಲಿ ಡಾ.ಬಸವಕುಮಾರ ಸ್ವಾಮಿ, ಡಾ.ಕೆ.ಎಂ.ವೀರೇಶ್, ಪ್ರೊ.ಎಂ.ಆರ್.ಜಯಲಕ್ಷಿ÷್ಮÃ, ಡಾ.ರಾಜೇಶ್, ಕೆ.ಎಂ.ಚೇತನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಹಾರ ಮೇಳ
  • ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ
  • ಆರೋಗ್ಯ ತಪಾಸಣೆ ಶಿಬಿರ
ಚಿತ್ರದುರ್ಗ: ಸದೃಢ ಆರೋಗ್ಯಕ್ಕಾಗಿ ಶುಚಿಯಾದ ಆಹಾರ ಮುಖ್ಯವೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಬಸವೇಶ್ವರ ಆಸ್ಪತ್ರೆ ಸಹಯೋಗದೊಂದಿಗೆ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯಕ್ಕೆ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿದೆ. ಶರಣರು ಪ್ರಸಾದವೆಂದು ಕರೆದಿರುವ ಆಹಾರ ಮ ನಸ್ಸು ಮತ್ತು ದೇಹಕ್ಕೆ ಪ್ರಸನ್ನತೆ ಕೊಡುತ್ತದೆ. ಈ ಹಿಂದೆ ಮುರುಘಾಮಠದಲ್ಲಿ ಸೇವೆ ಸಲ್ಲಿಸಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕರ‍್ಯದರ್ಶಿ ಕೆ.ಎಂ.ವೀರೇಶ್ ಅವರು ಶಿಕ್ಷಣ ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಬುದ್ಧವಂತಿಕೆ ಇದೆ ಎಂದರು.
ಬಸವೇಶ್ವರ ಆಸ್ಪತ್ರೆ ಡೀನ್ ಡಾ.ರಾಜೇಶ್ ಅವರು ಮಾತನಾಡಿ, ಆರೋಗ್ಯ ತಪಾಸಣೆ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕ ಕೆ.ಎಂ.ಚೇತನ್ ಮಾತನಾಡಿ, ಆರೋಗ್ಯವಿಲ್ಲದಿದ್ದರೆ ಆಸ್ತಿ, ಅಂತಸ್ತು ಪ್ರಯೋಜನಕ್ಕೆ ಬಾರದು. ಮಕ್ಕಳಲ್ಲಿ ಮಾರುಕಟ್ಟೆ, ವ್ಯವಹಾರದ ಬಗ್ಗೆ ಅರಿವು ಮೂಡಿಸುವುದು ಆಹಾರ ಮೇಳದ ಉದ್ದೇಶವಾಗಿದೆ ಎಂದರು.
ಡಾ.ಕೆ.ಎA.ವೀರೇಶ್, ಬಿ.ಇಡಿ.ಕಾಲೇಜು ಪ್ರಾಚಾರ್ಯೆ ಪ್ರೊ.ಎಂ.ಆರ್.ಜಯಲಕ್ಷಿ÷್ಮÃ, ಉಪಪ್ರಾಚರ‍್ಯ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ಮಂಜುನಾಥ್, ತಜ್ಞ ವೈದ್ಯರಾದ ಡಾ.ಸುಹಾಸ್, ಡಾ.ನಿರಂಜನ್, ಡಾ.ಸೌಂದರ್ಯ, ಡಾ.ರೂಪಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net