ಮುರುಘಾಮಠಕ್ಕೂ ನೈತಿಕ ಶಕ್ತಿಯಾಗಿದ್ದ ನಿಜಲಿಂಗಪ್ಪ

ಚಿತ್ರದುರ್ಗ ತಾಲೂಕಿನ ಸೀಬಾರದ ಸ್ಮಾರಕದಲ್ಲಿ ಬುಧವಾರ ಆಯೋಜಿಸಿದ್ದ ಎಸ್. ನಿಜಲಿಂಗಪ್ಪ ಅವರ ೧೨೩ನೇ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಎಚ್. ಹನುಮಂತಪ್ಪ ಪುಷ್ಪನಮನ ಸಲ್ಲಿಸಿದರು. ಎಸ್.ಎನ್. ಕಿರಣ್‌ಶಂಕರ್, ಎಂ.ಕೆ. ತಾಜ್‌ಪೀರ್, ಕೆಇಬಿ ಷಣ್ಮುಖಪ್ಪ ಇತರರಿದ್ದರು.
ಚಿತ್ರದುರ್ಗ ತಾಲೂಕಿನ ಸೀಬಾರದ ಸ್ಮಾರಕದಲ್ಲಿ ಬುಧವಾರ ಆಯೋಜಿಸಿದ್ದ ಎಸ್. ನಿಜಲಿಂಗಪ್ಪ ಅವರ ೧೨೩ನೇ ಜನ್ಮದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಎಚ್. ಹನುಮಂತಪ್ಪ ಪುಷ್ಪನಮನ ಸಲ್ಲಿಸಿದರು. ಎಸ್.ಎನ್. ಕಿರಣ್‌ಶಂಕರ್, ಎಂ.ಕೆ. ತಾಜ್‌ಪೀರ್, ಕೆಇಬಿ ಷಣ್ಮುಖಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಾನದಲ್ಲಿ ಎಸ್‌ಎನ್ ಪ್ರತಿಮೆ ನಿರ್ಮಾಣ
  • ಡಾ. ಬಸವಕುಮಾರ ಸ್ವಾಮೀಜಿ ಹೇಳಿಕೆ
  • ಎಸ್.ಎನ್. ಸ್ಮಾರಕ
ಚಿತ್ರದುರ್ಗ: ರಾಷ್ಟçನಾಯಕ, ಮಾಜಿ ಸಿಎಂ ನಿಜಲಿಂಗಪ್ಪ ಅವರು ಜಯದೇವ ಮುರುಘಾರಾಜೇಂದ್ರ ಜಗದ್ಗುರು ಅವರ ಕಾಲ ದಿಂದಲೂ ಮುರುಘಾಮಠದೊಂದಿಗೆ ಅನ್ಯೋನ್ಯ ಬಾಂಧವ್ಯ ಹೊಂದಿದ್ದರು. ಅಲ್ಲದೆ, ಶ್ರೀಮಠಕ್ಕೆ ನೈತಿಕ ಶಕ್ತಿಯಾಗಿದ್ದರು ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸ್ಮರಿಸಿದರು.
ತಾಲೂಕಿನ ಸೀಬಾರ ಸಮೀಪದ ಎಸ್.ಎನ್. ಸ್ಮಾರಕದಲ್ಲಿ ಬುಧವಾರ ಆಯೋಜಿಸಿದ್ದ ಎಸ್. ನಿಜಲಿಂಗಪ್ಪ ಅವರ ೧೨೩ನೇ ಜನ್ಮದಿನಾಚರಣೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಿಜಲಿಂಗಪ್ಪ, ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ ಅಂತಹ ಮಹಾನ್ ವ್ಯಕ್ತಿಗಳು ಮುರುಘಾಮಠದೊಂದಿಗೆ ಉತ್ತಮ ಸಂಪ ರ್ಕ ಹೊಂದಿದ್ದರು. ಎಂದಿಗೂ ಸದ್ದು ಮಾಡದೆ, ಸರಳತೆ ಮೂಲಕವೇ ಸಮಾಜಕ್ಕೆ ಮಾದರಿಯಾದವರು. ಈ ರೀತಿ ಪ್ರಾಮಾಣಿಕ ವಾಗಿ ಬದುಕಿದವರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಬೇಕು ಎಂದು ಒತ್ತಾಯಿಸಿದರು.
ಶ್ರೀಮಠದಿಂದ ಎಸ್‌ಎನ್ ಕೃತಿ ಹೊರತರಬೇಕೆಂಬ ಉದ್ದೇಶವಿದೆ. ಸದ್ಯದಲ್ಲೇ ಮಠದ ಉದ್ಯಾನದಲ್ಲಿ ಅವರ ಪ್ರತಿಮೆ ನಿರ್ಮಿಸ ಲಾಗುವುದು. ಸ್ಮಾರಕದ ಬಳಿಯೂ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದಾದರೂ ಯೋಜನೆ ರೂಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ತನ್ನ ಕುಟುಂಬಕ್ಕೂ ಏನನ್ನೂ ಸಹಾಯ ಮಾಡದ, ಬಸವತತ್ವ ಅನುಯಾಯಿಯಾಗಿದ್ದ ನಿಜಲಿಂಗಪ್ಪ ಅವರು ಬಸವಣ್ಣನ ತತ್ವಾದರ್ಶ ಅನುಸರಿಸುತ್ತಿದ್ದರು. ಟಿಬೆಟಿಯನ್ನರಿಗೆ ಭಾರತದಲ್ಲಿ ಆಶ್ರಯ ನೀಡಿದರು. ಬೌದ್ಧ ಧರ್ಮಿಯರು ದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಕಾರಣರಾಗಿದ್ದಾರೆ ಎಂದು ಸ್ಮರಿಸಿದರು.
ನಿಜಲಿಂಗಪ್ಪ ಅವರ ಕೊಡುಗೆ ಯುವಸಮೂಹಕ್ಕೆ ತಿಳಿಸುವ ಅಗತ್ಯವಿದೆ. ಹೀಗಾಗಿ ಸ್ಮಾರಕ ಪ್ರೇಕ್ಷಣೀಯ ಸ್ಥಳವಾಗಬೇಕು. ಮುರುಘಾಮಠದಲ್ಲಿ ಪ್ರತಿಮೆ ಸ್ಥಾಪಿಸಲು ಎಲ್ಲರ ಸಹಕಾರವಿದೆ ಎಂದರು.
ಎಸ್.ಎನ್. ಮೆಮೋರಿಯಲ್ ಟ್ರ¸್ಟï ಗೌರವ ಉಪಾಧ್ಯಕ್ಷ ಎಚ್. ಹನುಮಂತಪ್ಪ, ಕಾರ್ಯದರ್ಶಿ ಎಸ್.ಎನ್. ಕಿರಣ್ ಶಂಕರ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಕೆಇಬಿ ಷಣ್ಮುಖಪ್ಪ, ನಾಗರಾಜ್ ಸಂಗA, ಮಹಡಿ ಶಿವಮೂರ್ತಿ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಕೆ.ಎಂ. ವೀರೇಶ್, ಸಿ.ಜಿ. ಶ್ರೀನಿವಾಸ್, ರುದ್ರಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net