ನೂತನ ಸಚಿವ ರಘುಮೂರ್ತಿ ಪುರಪ್ರವೇಶ ಅದ್ದೂರಿ

ಚಿತ್ರದುರ್ಗದ ರಾಜವೀರ ಮದಕರಿನಾಯಕ ವೃತ್ತದ ಬಳಿ ಸಾವಿರಾರು ಅಭಿಮಾನಿಗಳ ಮಧ್ಯೆ ನೂತನ ಸಚಿವ ಟಿ. ರಘುಮೂರ್ತಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಸೇರಿ ಇತರರಿದ್ದರು.
ಚಿತ್ರದುರ್ಗದ ರಾಜವೀರ ಮದಕರಿನಾಯಕ ವೃತ್ತದ ಬಳಿ ಸಾವಿರಾರು ಅಭಿಮಾನಿಗಳ ಮಧ್ಯೆ ನೂತನ ಸಚಿವ ಟಿ. ರಘುಮೂರ್ತಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿಸಲಾರೆ
  • ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ
  • ಜಿ¯್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ

ಚಿತ್ರದುರ್ಗ:

ಸಚಿವರಾಗಿ ಮೊದಲ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಟಿ. ರಘುಮೂರ್ತಿ ಅವರನ್ನು ನಾಯಕ ಸಮುದಾಯ ಹಾಗೂ ಅಭಿಮಾನಿಗಳು ಬುಧವಾರ ಅದ್ದೂರಿಯಾಗಿ ಬರಮಾಡಿಕೊಂಡರು.

ಅವರ ಆಗಮನದ ಹಿನ್ನೆಲೆಯಲ್ಲಿ ಮದಕರಿ ನಾಯಕ ಪ್ರತಿಮೆಯನ್ನು ಹೂ, ಬಾಳೆ ಕಂದುಗಳಿAದ ಅಲಂಕಾರ ಮಾಡಲಾಗಿತ್ತು. ವೃ ತ್ತದ ನಾಲ್ಕು ಕಡೆಗಳಲ್ಲೂ ಸಚಿವರ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು.
ಡೊಳ್ಳು, ತಮಟೆ, ಕಹಳೆ ಸದ್ದು ಮೊಳಗಿತು. ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಜೆಸಿಬಿ ಯಂತ್ರಗಳ ಮೂಲಕ ರಘುಮೂರ್ತಿ ಅವರಿಗೆ ಪುಷ್ಪ ಮಳೆಗರೆಯಲಾಯಿತು. ಬೃಹದಾಕಾರದ ಹೂವಿನ ಹಾರಹಾಕಿ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ರಘುಮೂರ್ತಿ ಅವರು, ಜಿ¯್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ. ಜನ ನನ್ನ ಮೇಲಿಟ್ಟಿರುವ ನಿರೀಕ್ಷೆ ಹುಸಿಯಾಗಿಸಲಾರೆ ಎಂದರು.
ಎಲ್ಲ ಸಮಾಜದವರನ್ನು ಜತೆಯಲ್ಲಿ ಕರೆದುಕೊಂಡು ಪಕ್ಷಾತೀತವಾಗಿ ಪ್ರಗತಿಯಲ್ಲಿ ಮುನ್ನಡೆಸಲು ಪ್ರಾಮಾಣಿಕವಾಗಿ ಶ್ರಮಿ ಸುತ್ತೇನೆ. ಖಾತೆ ಯಾವುದಾದರೂ ಇರಲಿ ಸಚಿವ ಸ್ಥಾನದ ದೊಡ್ಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದರು.
ಶಾಸಕರಾದ ಬಿ.ಜಿ. ಗೋವಿಂದಪ್ಪ, ಕೆ.ಸಿ. ವೀರೇಂದ್ರಪಪ್ಪಿ, ಎನ್.ವೈ. ಗೋಪಾಲಕೃಷ್ಣ ಅವರೂ ಸಚಿವರಾಗಲು ಅರ್ಹರಿz್ದÁರೆ. ಆದರೆ, ಅದೃಷ್ಟವೋ, ಹಣೆ ಬರಹವೋ, ದೈವ ಕೃಪೆಯೋ ನನಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಿಂದುಳಿದ ಈ ಜಿ¯್ಲÉಯನ್ನು ಮುಂದುವರಿದ ಜಿಲ್ಲೆಯಾಗಿಸುವ ಗುರಿ ನನ್ನ ಮೇಲಿದೆ ಎಂದು ಹೇಳಿದರು.
ಪ್ರತಿಷ್ಠೆ ಬಿಟ್ಟು ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಜಿ¯್ಲÉಯ ಋಣ ತೀರಿಸಬೇಕಿದೆ. ಭದ್ರಾ ಮೇಲ್ದಂಡೆ ಸೇರಿ ಇನ್ನಿತರ ಯೋಜನೆಗಳಿಂದ ಹನಿ ನೀರಾವರಿ ಜಾರಿಗೊಳಿಸುವ ಚಿಂತನೆ ಇದೆ. ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.
ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮಾತನಾಡಿ, ಅಭಿವೃದ್ಧಿಗೆ ರಘುಮೂರ್ತಿ ಹೆಸರಾಗಿದ್ದಾರೆ. ಇದಕ್ಕೆ ಚಳ್ಳಕೆರೆ ಕ್ಷೇತ್ರವೇ ನಿದರ್ಶನ. ಅವರಿಗೆ ಸಚಿವ ಸ್ಥಾನ ಲಭಿಸಿರುವುದು ಸ್ವಾಗತಾರ್ಹ. ಜಿ¯್ಲÉ ರಾಜ್ಯಕ್ಕೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಸ-Áಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ಜಿಲ್ಲೆಯಲ್ಲಿ ರಘುಮೂರ್ತಿ ಅಜಾತಶತ್ರು. ಕಿರಿಯರು, ಹಿರಿಯರು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಮಾತನಾಡಿಸಿ ಸಮಸ್ಯೆ ಬಗೆಹರಿಸುವ ಗುಣ ಅವರಲ್ಲಿದೆ ಎಂದರು.
ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ. ಕಾಂತರಾಜ್, ಉದ್ಯಮಿ ಅರುಣ್‌ಕುಮಾರ್, ಮುಖಂಡರಾದ ಸುಹಾಸ್ ಸುಧಾಕರ್, ಪ್ರೊ.ಗುಡದೇಶ್ವರಪ್ಪ, ದರ್ಶನ್ ಇಂಗಳದಾಳ್, ದೀಪು, ಸಂದೀಪ್, ಆನಂದಕುಮಾರ್, ಎಚ್. ಅಂಜಿನಪ್ಪ, ಸೋಮೇಂದ್ರ, ಮಂ ಜುನಾಥ್, ಅಶೋಕ್(ಜಿಮ್ಮಿ), ದಿನೇಶ್ ಗೌಡಗೆರೆ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಕಾಂಗ್ರೆಸ್ ಜಿ¯್ಲÁಧ್ಯಕ್ಷ ಎಂ. ಕೆ.ತಾಜ್‌ಪೀರ್, ಪದಾಽಕಾರಿಗಳಾದ ಕೆ.ಎಂ. ಹಾಲಸ್ವಾಮಿ, ಎನ್.ಡಿ. ಕುಮಾರ್, ಆರ್. ಶಿವಣ್ಣ, ಡಿ.ಎನ್. ಮೈಲಾರಪ್ಪ, ಕೆ.ಪಿ. ಸಂಪತ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಗೊಪ್ಪೆ, ಅ¯್ಲÁಭಕ್ಷಿ ಇತರರಿದ್ದರು.

ಆಗಸ್ಟ್ ಅಂತ್ಯದೊಳಗೆ ಭದ್ರಾ ನೀರು

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಹೀಗಾಗಿ ಆಗ¸್ಟï ಅಂತ್ಯದೊಳಗೆ ಕೆಲ ಭಾಗ ಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲಾಗುವುದು ಎಂದು ರಘುಮೂರ್ತಿ ಭರವಸೆ ನೀಡಿದರು. ಜಿ¯್ಲÉ ಯ ಜನರ ಕಷ್ಟಗಳನ್ನು ಆಲಿಸಿ, ಬರದ ಕುರಿತು ಮಾಹಿತಿ ಸಂಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ನೀಡಲಾಗುವುದು. ನಂತರ ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net