ದರಖಾಸ್ತು, ಬಗರ್‌ಹುಕುಂ ಜಮೀನಿಗೆ ಪೋಡಿ, ಸರ್ವೆ ಸ್ಕೆಚ್ ಮತ್ತಿತರ ಪಕ್ಕಾ ದಾಖಲೆ ಒದಗಿಸಲಾಗುತ್ತಿದೆ. ೨೦೧೩ ರಿಂದ ೨೦೧೮ರ ನಡುವೆ ೫,೮೪೨ ಜಮೀನುಗಳ ಪೋಡಿ ದುರಸ್ತಿ ಆಗಿದ್ದರೆ, ೨೦೧೮ ರಿಂದ ೨೦೨೩ ರೊಳಗೆ ೮,೫೦೦ ಆಗಿದೆ. ಪ್ರಸ್ತುತ ರೈತರ ಅರ್ಜಿಗಳನ್ವಯ ೧,೮೯,೪೯೯ ಜಮೀನಿಗೆ ಪಕ್ಕಾ ದಾಖಲೆ ಒದಗಿಸುವ ಕಾರ್ಯ ಶೇ. ೭೫ ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.