ನಾಮ-ಫಲಕ ಜಾಗೃತಿ ಆಂದೋಲನ

 ಚಿತ್ರದುರ್ಗದಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಗರದ ಅಂಗಡಿಗಳ ಮಾಲೀಕರು, ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಆಹ್ವಾನ ಮತ್ತು ಕನ್ನಡ ನಾಮ-Àಲಕ ಅಳವಡಿಸುವಂತೆ ಕೋರಿ ಆಂದೋಲನ ನಡೆಸಲಾಯಿತು. ಕೆ.ಎಂ.ಶಿವಸ್ವಾಮಿ, ವಿ.ಶ್ರೀನಿವಾಸ ಮಳಲಿ, ವಿ.ಎಲ್.ಪ್ರಶಾಂತ್, ಆನಂದ್‌ಕುಮಾರ್, ಗಿರೀಶ್‌ನಾಯ್ಕ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಬಳಸಿ
  • ಸಾಹಿತ್ಯ ಸಮ್ಮೇಳನ
  • ಜಾಗೃತಿ ಆಂದೋಲನ
ಚಿತ್ರದುರ್ಗ: ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಫೆ.೧೭ರಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಮ-Àಲಕ ಜಾಗೃತಿ ಆಂದೋಲನ ಮತ್ತು ಸಾರ್ವಜನಿಕರಿಗೆ ಆಹ್ವಾನ ನೀಡುವ ಕಾರ್ಯಕ್ರಮ ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಅಂಗಡಿ, ಮುಂಗಟ್ಟುಗಳ ಮಾಲೀಕರು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಯಿತು. ಅಂಗಡಿಗಳಲ್ಲಿ ನಾಮ-Àಲಕಗಳಲ್ಲಿ ಕಡ್ಡಾಯವಾಗಿ ಶೇ.೬೦ ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ತಿಳಿಸಲಾಯಿತು. ಕೆಲ ಮಾಲೀಕರು ಫಲ ಕಗಳಲ್ಲಿ ಸಂಪೂರ್ಣ ಕನ್ನಡ ಬಳಸುವುದಾಗಿ ತಿಳಿಸಿದರು.
ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಗೃಹಿಣಿಯರು, ಅಂಗಡಿ ಮಾಲೀಕರಿಗೆ ಮನವಿ ಪತ್ರ ಮತ್ತು ಗುಲಾಬಿ ಹೂವು ನೀಡಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ಕನಕ ವೃತ್ತದಿಂದ ಆರಂಭಗೊAಡ ಅಭಿಯಾನ ಪಿಬಿ ರಸ್ತೆ, ಗಾಂಽ ವೃತ್ತದವರೆಗೆ ನಡೆಯಿತು.
ಮುಂದಿನ ದಿನಗಳಲ್ಲಿ ನಗರದ ಎಲ್ಲ ಪ್ರದೇಶಗಳ ಸಾರ್ವಜನಿಕರಿಗೆ ಮನವಿ ಪತ್ರ ತಲುಪಿಸಲಾಗುವುದು ಎಂದು ತಾಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಆನಂದ್‌ಕುಮಾರ್, ಗಿರೀಶ್‌ನಾಯ್ಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net