ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಉದ್ಘಾಟಿಸಿದರು. ಡಾ. ಶಿವಣ್ಣ, ಡಾ.ಪಿ.ಎನ್. ಮಧುಸೂದನ, ಡಿ. ಗೋಪಾಲಸ್ವಾಮಿ ನಾಯಕ, ಡಾ. ವಿಜಯಲಕ್ಷಿ÷್ಮÃ, ಡಾ. ಜಯಲಕ್ಷ÷್ಮಮ್ಮ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ.ಬಿ.ಎಂ. ಗುರುನಾಥ್ ಅನಿಸಿಕೆ
ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಸಂಗೀತೋತ್ಸವ
ಸಂಗೀತೋತ್ಸವ
ಚಿತ್ರದುರ್ಗ: ಸಂಗೀತದಿAದ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಹೇಳಿದರು.
ನಗರದ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಗೀತಕ್ಕೆ ಮನುಷ್ಯನನ್ನು ಮೌಲ್ಯದೆಡೆಗೆ ಕೊಂಡೊಯ್ಯುವ, ಎಲ್ಲರನ್ನು ಸಂವಹನಗೊಳಿಸುವ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಡಾ. ಶಿವಣ್ಣ ಮಾತನಾಡಿ, ಸಂಗೀತದ ಕಲಿಕೆ ಏಕಾಗ್ರತೆಗೆ ನೆರವಾಗಲಿದೆ. ಶಿಸ್ತು, ತ್ಯಾಗ, ಸರಳತೆ ಕಲಿಸಿ ವಿಧೇಯತೆ ಬೆಳೆಸುತ್ತದೆ ಎಂದರು. ಆAಗ್ಲ ವಿಭಾಗದ ಮುಖ್ಯಸ್ಥ ಡಾ.ಪಿ.ಎನ್. ಮಧುಸೂದನ ಮಾತನಾಡಿ, ಸಂಗೀತ ಒಂದು ಧ್ಯಾನ, ತಪಸ್ಸಿದ್ದಂತೆ. ಸಂಗೀತದ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂದರು.
ಕೇAದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ, ಡಾ. ವಿಜಯಲಕ್ಷಿ÷್ಮÃ, ಡಾ. ಜಯಲಕ್ಷ÷್ಮಮ್ಮ, ಹಲಸಂದಿ ಸತೀಶ್, ವೆಂಕಟೇಶ್, ಸರಿಗಮ ಸಂಗೀತ ಪಾಠಶಾಲೆಯ ಸುಜಿತ್ ಕುಲಕರ್ಣಿ ಇತರರು ಇದ್ದರು.