ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಸಂಸದರ ಒತ್ತಾಯ

 ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಬಾಕಿ ಇರುವ ವಿಮಾ ಮೊತ್ತದ ಬಿಡುಗಡೆಗೆ ಒತ್ತಾಯಿಸಿ ಸಂಸದ ಗೋವಿಂದ ಎಂ.ಕಾರಜೋಳ ಅವರು ಹೊಸದಿಲ್ಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಣ್ ಅವರಿಗೆ ಮನವಿ ಸಲ್ಲಿಸಿದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಬಾಕಿ ಇರುವ ವಿಮಾ ಮೊತ್ತದ ಬಿಡುಗಡೆಗೆ ಒತ್ತಾಯಿಸಿ ಸಂಸದ ಗೋವಿಂದ ಎಂ.ಕಾರಜೋಳ ಅವರು ಹೊಸದಿಲ್ಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಣ್ ಅವರಿಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಕೃಷಿ ಸಚಿವರಿಗೆ ಕಾರಜೋಳ ಮನವಿ
  • ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್
  • ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮೆ
ಚಿತ್ರದುರ್ಗ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಬಾಕಿ ಇರುವ ವಿಮಾ ಮೊತ್ತವನ್ನು ಶೀಘ್ರ ಬಿಡುಗಡೆಗೊಳಿ ಸುವಂತೆ ಒತ್ತಾಯಿಸಿ ಗುರುವಾರ ಹೊಸದಿಲ್ಲಿಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಜಿಲ್ಲೆಯ ರೈತರಿಗೆ ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬಾಕಿ ಇರುವ ವಿಮಾ ಮೊತ್ತ ಬಿಡುಗಡೆ ತೀವ್ರ ವಿಳಂಬವಾಗಿದ್ದು,ಇದರಿAದಾಗಿ ಕೃಷಿ ಸಮುದಾಯ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಪ್ರಸ್ತುತ ಜಿಲ್ಲೆಯ ೪,೮೪೩ ರೈತರು ಈ ಯೋಜ ನೆಯಡಿ ನೋಂದಾಯಿಸಿಕೊAಡಿದ್ದು,ಆದರೆ ಈವರೆಗೆ ಒಬ್ಬ ರೈತನಿಗೂ ವಿಮಾ ಮೊತ್ತ ಪಾವತಿಯಾಗದಿರುವುದು ಗಂಭೀರ ವಿಷಯವಾಗಿದೆ. ಚಿತ್ರದುರ್ಗ ಜಿಲ್ಲೆಯ ವಿಮಾ ಪರಿಹಾರವಾಗಿ ಅಂದಾಜು ೧೫ ಕೋಟಿ ರೂ. ಬಿಡುಗಡೆ ಆಗಬೇಕಿದೆ.
ಜಿಲ್ಲೆಗೆ ಕ್ಷೇಮ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಅಽಸೂಚಿತ ವಿಮಾ ಕಂಪನಿಯಾಗಿದೆ. ಬೆಳೆ ಹಂಗಾಮು ಮುಗಿದಿದ್ದು,ಹವಾಮಾ ನ ದತ್ತಾಂಶದ ಲಭ್ಯತೆ,ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ದೀರ್ಘಕಾಲದವರೆಗೆ ವಿಮೆ ಹಣ ಬಾಕಿ ಉಳಿದಿದೆ. ಬೆಳೆ ನಷ್ಟ ದಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಳಂಬ ಯೋಜನೆ ಮೂಲ ಉದ್ದೇಶವನ್ನೇ ವಿ-Àಲಗೊಳಿಸುತ್ತಿದೆ.
ಆದ್ದರಿಂದ ಜಿಲ್ಲೆಯಲ್ಲಿ ಬಾಕಿ ವಿಮಾ ಪರಿಹಾರದ ಸ್ಥಿತಿಗತಿ ಪರಿಶೀಲಿಸಿ,ಅರ್ಹ ವಿಮಾ ಮೊತ್ತವನ್ನು ಕೂಡಲೇ ಇತ್ಯರ್ಥಪಡಿಸಲು ಕ್ಷೇ ಮ ಜನರಲ್ ಇನ್ಶೂರೆನ್ಸ್ಗೆ ನಿರ್ದೇಶನ ನೀಡಬೇಕು. ೧೫ ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿ ಸಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಗೋವಿಂದ ಕಾರಜೋಳ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net