ಚಿತ್ರದುರ್ಗ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿ ಹೊರಡಿಸಿದ್ದ ಅಽಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಪವೇ ಕಾರಣ ಎಂದು ಲೋಕಸಭಾ ಸದಸ್ಯ ಗೋವಿಂದ ಎಂ. ಕಾರಜೋಳ ಕಿಡಿಕಾರಿದರು.
ಈ ಸಮಾಜಗಳ ಬಗ್ಗೆ ಕಳಕಳಿ ಇದ್ದರೆ ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ಬೆಂಬಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.
ಕಾಂಗ್ರೆಸ್ ಸರ್ಕಾರ ಈ ಸಮುದಾಯಗಳಿಗೆ ಮೋಸ ಮಾಡಿದೆ. ೪ ಬಾರಿ ವಿಚಾರಣೆ ವೇಳೆ ಸರ್ಕಾರದಿಂದ ಯಾರೂ ಕೋರ್ಟಿಗೆ ಹಾಜರಾಗಿಲ್ಲ. ಅಂಕಿ-ಅಂಶ ಸಹಿತ ಸಮರ್ಥ ವಾದ ಮಂಡನೆ ಮಾಡಿಲ್ಲ. ೫ನೇ ಬಾರಿ ವಿಚಾರಣೆ ವೇಳೆ ಎಸ್ಸಿ ಸಮುದಾಯಕ್ಕೆ ಶೇ. ೧೭ರ ಬದಲು ೧೫ ಹಾಗೂ ಎಸ್ಟಿ ಸಮುದಾಯದ ಶೇ. ೭ರ ಬದಲು ಶೇ. ೩ ಮೀಸಲಾತಿ ಇರಲಿದೆ ಎಂಬ ರಾಜ್ಯದ ಆಡ್ವೊಕೇಟ್ ಜನರಲ್ ಅವರ ಹೇಳಿಕೆ ಮನ್ನಿಸಿರುವ ಕೋರ್ಟ್, ಹೆಚ್ಚಳ ಆದೇಶ ರದ್ದುಗೊಳಿಸಿದೆ . ಹೈಕೋರ್ಟ್ ಆದೇಶ ಪ್ರಶ್ನಿಸಿ ಈ ಸಮುದಾಯಗಳು ಹಾಗೂ ಬಿಜೆಪಿ ಸುಪ್ರೀಂಕೋರ್ಟಿಗೆ ಮನವಿ ಮಾಡಲಿವೆ ಎಂದರು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯಸರ್ಕಾರವೇ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲವಾದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಶಾಸಕರು, ಮಂತ್ರಿಗಳು, ಮುಖಂಡರು, ಯುವಜನರು ಪಕ್ಷಾತೀತ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ದೇಶದಲ್ಲಿ ಸದ್ಯ ಶೇ. ೬೦ ಮೀಸಲಾತಿ ಇದೆ. ಇತರೆ ರಾಜ್ಯಗಳಲ್ಲೂ ಶೇ. ೫೦ನ್ನು ಮೀರಿ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮೀಸಲು ಪ್ರಮಾಣ ಹೆಚ್ಚಳ ಮಾಡುವ ಮನಸ್ಸು ಸಿದ್ದ ರಾಮಯ್ಯ, ಸಿಎಂ ಶಿವಕುಮಾರ್ ಅವರಿಗೆ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ಗಾಂಽ ಅವರಿಗೂ ಎಳ್ಳಷ್ಟು ಕಳಕಳಿ ಇಲ್ಲದಿರುವುದು ಖಂಡನೀಯ ಎಂದರು.
ಸ್ವಾತಂತ್ರ್ಯ ನಂತರ ಎಸ್ಸಿ, ಎಸ್ಟಿ ಸಮುದಾಯಗಳ ಏಳಿಗೆಗಾಗಿ ದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದಾಗಿ ೧೯೫೦ರಲ್ಲಿ ಮೀಸಲಾತಿ ಜಾರಿಯಾಯಿತು. ಎಸ್ಸಿ ಜಾತಿಗಳ ಸಂಖ್ಯೆ ೧೦೧ಕ್ಕೆ ಹಾಗೂ ಎಸ್ಟಿ ಸಮುದಾಯಗಳ ಸಂಖ್ಯೆ ೫೬ಕ್ಕೆ ಕಾಲಕ್ರಮೇಣ ಹೆಚ್ಚಾ ಗಿದ್ದು, ಕಳೆದ ೩೦ ವರ್ಷಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.
೨೦೨೪ರಿಂದ ೨೦೨೬ವರೆಗೆ ಜಾರಿಯಲ್ಲಿದ್ದ ಮೀಸಲಾತಿಯಿಂದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಪ್ರತಿ ವರ್ಷ ೬೦೦ ಮೆ ಡಿಕಲ್ ಸಹಿತ ವೃತ್ತಿಪರ ಕೋರ್ಸ್ಗಳ ಸೀಟುಗಳ ಸಂಖ್ಯೆ ಹೆಚ್ಚಾಗಿತ್ತು. ಆದರೀಗ ಈ ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಯಥಾವತ್ತಾಗಿ ನಾಗಮೋಹನ್ದಾಸ್ ವರದಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಎಸ್ಸಿ ಪಟ್ಟಿಯಿಂದ ಯಾವುದೇ ಜಾತಿಗಳನ್ನು ಕೈ ಬಿಡಬೇಕೆಂದು ಬಿಜೆಪಿ ಹೇಳಿಲ್ಲ. ಯುಪಿಎ ನೇತೃತ್ವದ ಕೇಂದ್ರದ ಸರ್ಕಾರ, ಈ ನಿ ಟ್ಟಿನಲ್ಲಿ ಕರ್ನಾಟಕಕ್ಕೆ ಬರೆದಿದ್ದ ಪತ್ರಕ್ಕೆ, ಅಂದಿನ ಸಿಎಂ ಸದಾನಂದಗೌಡ ಅವರು, ಎಸ್ಸಿ, ಎಸ್ಟಿ ಪಟ್ಟಿಯಲ್ಲಿರುವ ಎಲ್ಲ ಜಾತಿಗಳನ್ನೂ ಮುಂದುವರಿಸಬೇಕೆಂದು ಉತ್ತರಿಸಿದ್ದರು. ಕಾಂಗ್ರೆಸ್ ಈ ವಿಚಾರದಲ್ಲಿ ಮೋಸದಾಟವಾಡುತ್ತಿದೆ. ಯಾವುದೇ ಜಾತಿಯನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಬೇಕೆಂದು ಸುಪ್ರಿಂಕೋರ್ಟ್ ಆದೇಶಿಸಿಲ್ಲವೆಂದು ಸಂಸದರು ಹೇಳಿದರು.
ಎ. ಮುರುಳಿ, ಚೇತನ್ಕುಮಾರ್, ಬಾಳೆಕಾಯಿ ರಾಮದಾಸ್, ಪರಶುರಾಂ, ನಾಗರಾಜ್ಬೇದ್ರೆ, ಸಂಪತ್ಕುಮಾರ್ ಇದ್ದರು.