ಆಧುನಿಕ ಜೀವನ ಶೈಲಿ ಉತ್ತಮ ಆರೋಗ್ಯಕ್ಕೆ ಅಡ್ಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿಟ್ರಸ್ಟ್ ತಾಲೂಕು ಘಟಕ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಡಾ. ಜ್ಯೋತಿ ಶರತ್‌ಕುಮಾರ್, ಬಿ. ಗೀತಾ, ರೂಪಾ ಜನಾರ್ಧನ್, ಚಂದ್ರಹಾಸ, ಶಿವಕುಮಾರ್ ಇತರರು ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿಟ್ರಸ್ಟ್ ತಾಲೂಕು ಘಟಕ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಡಾ. ಜ್ಯೋತಿ ಶರತ್‌ಕುಮಾರ್, ಬಿ. ಗೀತಾ, ರೂಪಾ ಜನಾರ್ಧನ್, ಚಂದ್ರಹಾಸ, ಶಿವಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಜ್ಯೋತಿ ಶರತ್‌ಕುಮಾರ್ ಅಭಿಪ್ರಾಯ
  • ಧರ್ಮಸ್ಥಳ ಸಂಸ್ಥೆಯಿAದ ವಿಚಾರಗೋಷ್ಠಿ
ಚಿತ್ರದುರ್ಗ: ಒತ್ತಡದಲ್ಲಿ ಬದುಕು ನಡೆಸುತ್ತಿರುವ ಮಹಿಳೆಯರು ಆರೋಗ್ಯದ ಕಡೆ ಗಮನ ಕೊಡುತ್ತಿಲ್ಲ ಎಂದು ಹೆರಿಗೆ ಮತ್ತು ಸಿöÃರೋಗ ತಜ್ಞೆ ಡಾ. ಜ್ಯೋತಿ ಶರತ್‌ಕುಮಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿಟ್ರಸ್ಟ್ ಚಿತ್ರದುರ್ಗ ತಾಲೂಕು ಘಟಕ ನಗರದ ಬರಗೇರಮ್ಮ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಚಾರಗೋಷ್ಠಿ `ಮಹಿಳಾ ಜ್ಞಾನವಿಕಾಸ' ಉದ್ಘಾಟಿಸಿ ಮಾತನಾಡಿ, ಮನೆ, ಮಕ್ಕಳು, ಗಂಡ, ಸಂಸಾರವೆAದು ಬಿಡುವಿಲ್ಲದೆ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.
ಆಧುನಿಕ ಜೀವನ ಶೈಲಿ ಉತ್ತಮ ಆರೋಗ್ಯಕ್ಕೆ ಅಡ್ಡಿ ಆಗಿದೆ. ಟಿವಿ, ಮೊಬೈಲ್‌ಗಳಿಂದ ಪಾಲಕರು ದೂರವಿದ್ದು ಮಕ್ಕಳ ಶಿಕ್ಷಣದ ಕಡೆಗೆ ನಿಗಾ ವಹಿಸಬೇಕು. ಒಳ್ಳೆಯ ಸಂಸ್ಕಾರ ಕಲಿಸಿ ಅವರನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವÊದ್ಧಿ ಯೋಜನೆಯಡಿ ೬.೩೦ ಲಕ್ಷ ಸ್ವ ಸಹಾಯ ಸಂಘಗಳಿದ್ದು, ೫೦ ಲಕ್ಷ ಸದಸ್ಯರಿದ್ದಾರೆ. ಇವರಿಗೆ ಆರ್ಥಿಕ ನೆರವು, ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿ ಸಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷೆ ರೂಪಾ ಜನಾರ್ಧನ್ ಮಾತನಾಡಿದರು. ಕಾರ್ಯ ಕ್ರಮದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜ್ಞಾನ ವಿಕಾಸ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಚಂದ್ರಹಾಸ, ಶಿವಕುಮಾರ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net