ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಸುವ ಮೇರು ಮಾಧ್ಯಮ ರಂಗಭೂಮಿ

ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಶಿವ ಸಂಚಾರ ನಾಟಕೋತ್ಸವದಲ್ಲಿ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಡಾ.ಕೆ.ಎಂ. ವೀರೇಶ್, ಡಾ.ಕೆ. ಕರಿಯಪ್ಪ ಮಾಳಿಗೆ, ಚಂದ್ರಶೇಖರ್ ತಾಳ್ಯ, ಕೆ.ಎಂ. ಶಿವಸ್ವಾಮಿ, ಅನಂತರೆಡ್ಡಿ, ರವಿಮಲ್ಲಾಪುರ, ಸುನೀತಾ ಮಲ್ಲಿಕಾರ್ಜುನ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಶಿವ ಸಂಚಾರ ನಾಟಕೋತ್ಸವದಲ್ಲಿ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಡಾ.ಕೆ.ಎಂ. ವೀರೇಶ್, ಡಾ.ಕೆ. ಕರಿಯಪ್ಪ ಮಾಳಿಗೆ, ಚಂದ್ರಶೇಖರ್ ತಾಳ್ಯ, ಕೆ.ಎಂ. ಶಿವಸ್ವಾಮಿ, ಅನಂತರೆಡ್ಡಿ, ರವಿಮಲ್ಲಾಪುರ, ಸುನೀತಾ ಮಲ್ಲಿಕಾರ್ಜುನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಪ್ರಭು ಸ್ವಾಮೀಜಿ ಅಭಿಪ್ರಾಯ
  • ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ
  • ಶಿವಸಂಚಾರ ನಾಟಕೋತ್ಸವ
ಚಿತ್ರದುರ್ಗ: ರಂಗಭೂಮಿ ಮಾನವ ಕುಲದ ಮೊದಲ ವಿಶ್ವವಿದ್ಯಾಲಯ ಎಂದು ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ರಂಗಸೌರಭ ಕಲಾ ಸಂಘ, ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕ್ಪçತಿ ನಿರ್ದೇಶನಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ, ರಂಗಉಪನ್ಯಾಸ, ಗೀತ ಗಾಯನ ಹಾಗೂ ಕಲಾವಿದರು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಸುವ ಮೇರು ಮಾಧ್ಯಮ. ನಾಟಕ ಮನೋರಂಜನೆಯೊAದಿಗೆ ಸಮಾಜ ಮುಖಿ ಯಾಗಿ ಜನರನ್ನು ಎಚ್ಚರಿಸುತ್ತದೆ. ಅಂಕುಡೊAಕುಗಳನ್ನು ತಿದ್ದಿ ಸುಂದರ ಸಮಾಜ ನಿರ್ಮಿಸುವ ಶಕ್ತಿ ರಂಗಭೂಮಿಗಿದೆ. ಇದನ್ನು ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಜೆ. ಕರಿಯಪ್ಪ ಮಾಳಿಗೆ ಅವರು ರಂಗ ನಿರ್ದೇಶಕ ಕÊಷ್ಣಮೂರ್ತಿ ಮೂಡ ಬಾಗಿಲು ಅವರ ರಚನೆ, ನಿರ್ದೇಶನದ ಕಳ್ಳರ ಸಂತೆ ನಾಟಕ ಕುರಿತು ಮಾತನಾಡಿ, ೨೧ನೇ ಶತಮಾನ ಅತ್ಯಂತ ವೇಗವಾಗಿ ಸಾಗುತ್ತಿರುವ ಕಾಲಘಟ್ಟವಾಗಿದೆ. ಮೌಲ್ಯಗಳು ಅಪಮೌಲ್ಯೀಕರಣವಾಗುತ್ತಿರುವ ಈ ಕಾಲದಲ್ಲಿ ರಂಗಭೂಮಿ ಪಾತ್ರ ಮಹತ್ವ ದ್ದಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಚಂದ್ರಶೇಖರ ತಾಳ್ಯ, ರಂಗಕಲೆ ಪ್ರಭುತ್ವಕ್ಕೆ ತಲೆಬಾಗದೆ ಅದರ ವಿರುದ್ಧ ದನಿಯೆತ್ತು ವಂತಿರಬೇಕು. ಇಪ್ಪತ್ತು ವರ್ಷಗಳಿಂದ ಶಿವಸಂಚಾರ ನಾಟಕಗಳ ಪ್ರದರ್ಶನ ಸಮಾಜಕ್ಕೆ ಮೌಲ್ಯಯುತ ಸಂದೇಶಗಳನ್ನು ನೀಡು ತ್ತಾ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾ ಮಿ, ಪತ್ರಕರ್ತ ರವಿ ಮಲ್ಲಾಪುರ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯದರ್ಶಿ ಅನಂತರೆಡ್ಡಿ, ಜ್ಯೋತಿ ದೇವೇಂದ್ರಪ್ಪ, ರಂಗನಿರ್ದೇಶಕ ಕೆ.ಪಿ.ಎಂ. ಗಣೆÃಶಯ್ಯ ಮಾತನಾಡಿದರು.
ಸಾಹಿತಿ ಹುರುಳಿ ಬಸವರಾಜ್ ಸ್ವಾಗತಿಸಿದರು. ಗಾಯಕಿ ತ್ರಿವೇಣಿ ತಂಡದವರು ಸುಗಮ ಸಂಗೀತ ನಡೆಸಿಕೊಟ್ಟರು. ಪ್ರಶಿಕ್ಷಣÁರ್ಥಿ ಕೆ.ಸಿ.ರೇಖಾ ಪ್ರಾರ್ಥಿಸಿದರು. ಕಳ್ಳರ ಸಂತೆ ನಾಟಕವನ್ನು ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಪ್ರದರ್ಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net