

ಚಿತ್ರದುರ್ಗ: ಅಕ್ಷರ ಕಲಿಸಿದ, ಮುಂದೆ ನಾನು ಇಂಜಿಯರ್ ಆಗಲು ನೆರವಾದ ನಾನು ಓದಿದ ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಕ್ರಮ ವಹಿ ಸುವುದಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಹೇಳಿದರು. ಬಾಲ್ಯದಲ್ಲಿ ತಾವು ಓದಿದ ಚಿತ್ರದುರ್ಗ ತಾಲೂಕು ಕಡಬನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ದಿನಾಚರಣೆ ಶನಿವಾರದಂದು, ಚಿತ್ರದುರ್ಗ ಮತ್ತು ಚಳ್ಳಕೆರೆಗೆ ಅಽಕೃತ ಕರ‍್ಯ ನಿಮಿತ್ತ ತೆರಳುವ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿ, ಅಲ್ಲಿಯ ಚಿಣ್ಣರು, ಶಿಕ್ಷಕರೊಂದಿಗೆ ಸಂವಾದ ನಡೆಸಿದ ರು. ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ನಾನು ಇಂಜಿನಿಯರ್ ಆಗಿ, ಸಚಿವನಾದ ಬಳಿಕ ನನ್ನ ಶಾಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ದ್ದೇನೆ.
೧೯೬೭-೬೮ರಲ್ಲಿ ಒಂದನೇ ತರಗತಿಯಿಂದ ೭ನೇ ತರಗತಿಯವರೆಗೂ ನಾನಿಲ್ಲಿ ಓದಿದ್ದೇನೆ. ನಂತರ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ತೆರಳಿದೆ ಎಂದು ವಿವರಿಸಿದರು. ಮಕ್ಕಳ ದಿನಾಚರಣೆಯಂದೇ ನನ್ನ ಶಾಲೆಗೆ ಭೇಟಿ ನೀಡಿರುವುದು ನನ್ನ ಜೀವನದ ಮರೆಯಲಾಗದ ಮತ್ತು ಸ್ಮರ ಣೀಯ ದಿನವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಚಿವರು, ಚಿಣ್ಣರಿಗೆ ಮಕ್ಕಳ ದಿನಾಚರಣೆ ಶುಭಾಶಯ ತಿಳಿಸಿ, ಸಿಹಿ ವಿತರಿಸಿದರು.
ಶಾಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಶಾಲಾ ಸುತ್ತಲಿನ ಪರಿಸರ ಸಂರಕ್ಷಣÉಗೆ ಆದ್ಯತೆ ನೀಡಿ, ಅತ್ಯುತ್ತಮ ರೀತಿಯಲ್ಲಿ ಕಾಣುವಂತೆ ಮಾಡಲು ಅಗತ್ಯ ನೆರವು ನೀಡಲಾಗುವುದೆಂದು ಸಚಿವರು ಭರವಸೆ ನೀಡಿದರು. ಶಾಲೆಯಲ್ಲಿ ದೊರೆಯುತ್ತಿ ರುವ ಸೌಲಭ್ಯಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು, ಶಾಲಾ ಮುಖ್ಯಶಿಕ್ಷಕ ಕೆ.ಸುದರ್ಶನ, ಶಿಕ್ಷಕರು, ಸಿಬ್ಬಂದಿ ಜತೆ ಸ ಮಾಲೋಚನೆ ನಡೆಸಿದರು. ಮಕ್ಕಳ ದಿನಾಚರಣೆ ಸಂಭ್ರಮದಲ್ಲಿದ್ದ ಮಕ್ಕಳು,ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಸಚಿವರ ಆಗಮನದಿಂದ ಅವರು ಸಂತಸಪಟ್ಟರು.