ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಸಿಂಪಿ ಸಂಭ್ರಮ ಕಾರ್ಯಕ್ರಮದಲ್ಲಿ ನಿರ್ಮಾಲಾ ಮರಡಿಹಳ್ಳಿ, ಇಂದಿರಾ ಜಯದೇವ ಮೂರ್ತಿ, ಎಸ್.ಎಂ. ಚಂದನಾ, ಸೌಮ್ಯಸ್ವಾಮಿ, ಸುಧಾ, ನಿರ್ಮಲಾ ಬಸವರಾಜು, ಮಂಗಳಾ ವೀರಣ್ಣ, ನಂದಾಬಕ್ಕೇಶ್, ಗೌರಮ್ಮ ಬಸವರಾಜು ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ನಿರ್ಮಲಾ ಮರಡಿಹಳ್ಳಿ ಸಲಹೆ
ಶಿವಸಿಂಪಿ ಮಹಿಳಾ ಸಂಭ್ರಮ
ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕ
ಚಿತ್ರದುರ್ಗ: ಮಹಿಳೆ ಪ್ರಪಂಚದ ದೊಡ್ಡ ಶಕ್ತಿ,ಆಕೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಇದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ನಿರ್ಮಲಾ ಮರಡಿಹಳ್ಳಿ ಹೇಳಿದರು.
ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕ ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಶಿವಶಿಂಪಿ ಮಹಿಳಾ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ. ರಾಕೆಟ್ ಉಡಾವಣÉ ಮಾಡುವ ಮಟ್ಟಕ್ಕೆ ಮಹಿಳೆ ಬೆಳೆದು ನಿಂತಿ ದ್ದಾಳೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ. ಶೋಷಣÉ ದೌರ್ಜನ್ಯದ ವಿರುದ್ಧ ದನಿ ಎತ್ತುವ ದಿಟ್ಟತನ ಮಹಿಳೆಯರಲ್ಲಿ ಇರಬೇಕಿದೆ ಎಂದರು.
ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಅಧ್ಯಕ್ಷ ಶಂಭುಲಿAಗಪ್ಪ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸಿ, ದಿನಕ್ಕೆ ಒಂದು ಬಾರಿಯಾದರೂ ದೇವಾಲಯಕ್ಕೆ ಹೋಗಿಬರುವಂತೆ ತಿಳಿ ಹೇಳಬೇಕೆಂದು ಪಾಲಕರಿಗೆ ಮನವಿ ಮಾಡಿದರು.
ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ ಜಯದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೈಲಾ ವಿಜಯಕುಮಾರ್ ಇದ್ದರು. ಭರತನಾಟ್ಯ ಕಲಾವಿದೆ ಸಾಗರದ ಎಸ್.ಎಂ. ಚಂದನಾ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೌಮ್ಯಸ್ವಾಮಿ, ಸುಧಾ ಪ್ರಾರ್ಥಿಸಿದರು. ನಿರ್ಮಲಾ ಬಸವರಾಜು ಸ್ವಾಗತಿಸಿ, ಮಂಗಳಾ ವೀರಣ್ಣ ವಂದಿಸಿದರು. ನಂದಾಬಕ್ಕೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಗೌರಮ್ಮ ಬಸವರಾಜು ಸಂಘದ ವಾರ್ಷಿಕ ವರದಿ ವಾಚಿಸಿದರು.
ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ಜಯದೇವಮೂರ್ತಿ, ಮಲ್ಲಿಕಾರ್ಜನ್, ವಿಜಯಕುಮಾರ್, ಕಣ್ವಕುಪ್ಪಿ ನಾಗರಾಜ್, ಮುರುಗೇಶ್, ಕೊಟ್ರಬಸಪ್ಪ, ಶೇಖರ್, ಕೋಟ್ರೇಶ್ ಮತ್ತಿತರರು ಇದ್ದರು.