ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

ಚಿತ್ರದುರ್ಗದ ಸೀಬಾರ-ಗುತ್ತಿನಾಡು ವಿಶ್ವಮಾನವ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕ ನಿಸಾರ್ ಅಹಮದ್, ಜಿ.ಎನ್.ಮಲ್ಲಿಕಾರ್ಜುನಪ್ಪ, ಜಲೀಲ್‌ಸಾಬ್, ಬುಡೇನ್‌ಸಾಬರ್, ಎಚ್.ಆರ್.ಸುಧಾ, ಚನ್ನಬಸಪ್ಪ, ರ‍್ರಿಸ್ವಾಮಿ ಇದ್ದರು.
ಚಿತ್ರದುರ್ಗದ ಸೀಬಾರ-ಗುತ್ತಿನಾಡು ವಿಶ್ವಮಾನವ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕ ನಿಸಾರ್ ಅಹಮದ್, ಜಿ.ಎನ್.ಮಲ್ಲಿಕಾರ್ಜುನಪ್ಪ, ಜಲೀಲ್‌ಸಾಬ್, ಬುಡೇನ್‌ಸಾಬರ್, ಎಚ್.ಆರ್.ಸುಧಾ, ಚನ್ನಬಸಪ್ಪ, ರ‍್ರಿಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ನಿಸಾರ್ ಅಹಮದ್ ಅಭಿಪ್ರಾಯ
  • ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಕುವೆಂಪು ಜನ್ಮ ದಿನಾಚರಣೆ
  • ವಿಶ್ವಮಾನವ ಪ್ರಶಸ್ತಿ
ಚಿತ್ರದುರ್ಗ: ವಿದ್ಯಾರ್ಥಿ ಜೀವನ ಅತ್ಯಮೂಲ್ಯ, ಅದರ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹೊಸದುರ್ಗದ ಉಪನ್ಯಾಸಕ ನಿಸಾರ್‌ಅಹಮದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿತ್ರದುರ್ಗ ಸೈನ್ಸ್ -Ëಂಡೇಷನ್ ಹಾಗೂ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಸಹಯೋಗದಲ್ಲಿ ಸಂಸ್ಥೆ ಆವರಣ ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಅವರ ೧೨೨ನೇ ಜನ್ಮ ದಿನಾಚರಣೆ, ದತ್ತಿ ಉಪನ್ಯಾಸ, ವಿಶ್ವಮಾನವ ಪ್ರಶಸ್ತಿ ಪ್ರದಾನ ಹಾಗೂ ಶಾಲಾ-ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನ ಎಂಬುದು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಇದನ್ನು ಅತ್ಯಂತ ಸೂಕ್ಷವಾಗಿ ಅವಲೋಕಿಸಿ ಸಾಗಿದಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹಾಗೂ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
-ËAಡೇಷನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಕುವೆಂಪು ಮತ್ತು ಗಾಂಽÃಜಿ ಅವರ ತತ್ವಾದರ್ಶಗಳಿಂದ ರೂಪಿತಗೊಂಡಿರುವ ಸಂಸ್ಥೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರ ಪಾಲಿನ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸAಸ್ಥೆ ರೂವಾರಿ ಎಚ್.ಜಲೀಲ್‌ಸಾಬ್ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದರ ಕುರಿತು ವಿವರಿಸಿದರು. ಸಂಸ್ಥೆಯಿAದ ಪ್ರಥಮ ಬಾರಿಗೆ ನೀಡುತ್ತಿರುವ ವಿಶ್ವಮಾನವ ಪ್ರಶಸ್ತಿಯನ್ನು ಕ್ರಿಯೇಟಿವ್ ಆರ್ಟ್ಸ್ನ ಟಿ.ಎಂ.ವೀರೇಶ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್‌ಸಾಬರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಚ್.ಮೌಲಾನ್‌ಸಾಬ್, ಮಹಮದ್ ಮಿರ್ಜಾ, ವಿ ಶ್ವ ಮಾನವ ಸಂಯುಕ್ತ ಪಿಯು ಕಾಲೇಜಿನ ಪ್ರಾಚಾರ್ಯೆ ಎಚ್.ಆರ್.ಸುಧಾ, ವಸತಿ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಆರ್.ಚನ್ನಬ ಸಪ್ಪ, -Ëಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ರ‍್ರಿಸ್ವಾಮಿ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಖಜಾಂಚಿ ಕೆ.ವಿ.ನಾಗಲಿಂಗ ರೆಡ್ಡಿ, ನಿರ್ದೇಶಕ ಡಾ.ಇ.ರುದ್ರಮುನಿ, ಬಿ.ಜಿ.ಶಿವರುದ್ರಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net