ಮಕ್ಕಳಿಗೆ ತಾಯಂದಿರು ಸೂರ್ತಿಯಾಗಲಿ

ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಪಿಎಸ್‌ಐ ಬಿ. ರುಕ್ಕಮ್ಮ ಉದ್ಘಾಟಿಸಿದರು. ಪ್ರೊ. ಸುಮನಾ ಎಸ್. ಅಂಗಡಿ, ಗೀತಾ, ರೂಪಾ ಜನಾರ್ಧನ್, ಕಮಲಾಕ್ಷ, ರತ್ನ, ಚಂದ್ರಮ್ಮ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಪಿಎಸ್‌ಐ ಬಿ. ರುಕ್ಕಮ್ಮ ಉದ್ಘಾಟಿಸಿದರು. ಪ್ರೊ. ಸುಮನಾ ಎಸ್. ಅಂಗಡಿ, ಗೀತಾ, ರೂಪಾ ಜನಾರ್ಧನ್, ಕಮಲಾಕ್ಷ, ರತ್ನ, ಚಂದ್ರಮ್ಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಮತ್ತು ಟಿವಿ ವೀಕ್ಷಣೆ ಕಡಿಮೆ ಮಾಡಿ
  • ಬಾಲ್ಯವಿವಾಹ ಕಾನೂನು ಬಾಹಿರ
  • ಸಂವಿಧಾನದಿAದಾಗಿ ಮತದಾನದ ಹಕ್ಕು
ಚಿತ್ರದುರ್ಗ:

ಕುಟುಂಬ ಮತ್ತು ಮಕ್ಕಳಿಗೆ ತಾಯಂದಿರು ಸೂರ್ತಿಯಾಗಬೇಕು ಎಂದು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಬಿ. ರುಕ್ಕಮ್ಮ ಹೇಳಿದರು.

ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶಾಲಾವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ನೀಡುವ ನಿಜವಾದ ಆಸ್ತಿ ಶಿಕ್ಷಣ. ಪಾಲಕರು ಮೊಬೈಲ್ ಮತ್ತು ಟಿವಿ ವೀಕ್ಷಿಸುವುದನ್ನು ಕಡಿಮೆ ಮಾಡಿ ಮಕ್ಕಳ ಶಿಕ್ಷಣ ಒತ್ತು ಕೊಡಬೇಕು. ಮಕ್ಕಳ ಉತ್ತಮ ಭವಿಷ್ಯಕ್ಕೆ ಮನೆಯಲ್ಲಿ ಶ್ರದ್ಧೆಯ ವಾತಾವರಣ ನಿರ್ಮಿಸಬೇಕಿದೆ. ಮಹಿಳೆಯರು ಬುದ್ಧಿ ವಂತಿಕೆ, ಶ್ರಮ ಮತ್ತು ಛಲದಿಂದ ಉನ್ನತ ಮಟ್ಟಕ್ಕೆ ಬೆಳೆಯಬಹುದು ಎಂದು ತಿಳಿಸಿದರು.
ಬಾಲ್ಯವಿವಾಹ ಕಾನೂನು ಬಾಹಿರವಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ. ಅಪ್ರಾಪ್ತರಿಗೆ ಮೋಟಾರು ವಾಹ ನಗಳನ್ನು ಚಲಾಯಿಸಲು ಕೊಡಬಾರದು. ದ್ವಿಚಕ್ರವಾಹನ ಸವಾರಿ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಜೆಎಂ ಕಾನೂನು ಕಾಲೇಜಿನ ಪ್ರೊ. ಸುಮನಾ ಎಸ್. ಅಂಗಡಿ ಅವರು ಮಹಿಳೆಯರ ಹಕ್ಕು ಮತ್ತು ಕಾನೂನುಗಳ ಕುರಿತು ಉ ಪನ್ಯಾಸ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿAದಾಗಿ ಮತದಾನದ ಹಕ್ಕು, ಸ್ತಿçà ಸ್ವಾತಂತ್ರ‍್ಯ, ಸಮಾನ ಕೆಲಸಕ್ಕೆ ಸಮಾನ ವೇತನ, ಹೋರಾಟದ ಹಕ್ಕು, ರಕ್ಷಣೆ ಹಕ್ಕು ಸೇರಿ ವಿವಿಧ ರೀತಿಯ ಸೌಲಭ್ಯಗಳು ಮಹಿಳೆಯರಿಗೆ ದೊರೆತಿವೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿದರು. ಅಖಿಲ ಕರ್ನಾ ಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷೆ ರೂಪಾ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕಮಲಾಕ್ಷ, ಯೋಜನಾಽ ಕಾರಿಗಳಾದ ರತ್ನ, ಚಂದ್ರಮ್ಮ ಇದ್ದರು.
ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಬಿಡಿಸುವ, ಪುಷ್ಪಗುಚ್ಛ ತಯಾರಿಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿ ಸಲಾಯಿತು. ಬಿ.ಸಿ. ಟ್ರಸ್ಟ್ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರೇಣುಕಮ್ಮ ಪ್ರಾರ್ಥಿಸಿದರು. ಚಂದ್ರಹಾಸ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net