ಆ.೮ರಂದು ಲಿಂ.ಮಲ್ಲಿಕಾರ್ಜುನ ಶ್ರೀಗಳ ೩೨ನೇ ಸ್ಮರಣೋತ್ಸವ

 ಹೊಳಲ್ಕೆರೆ ಒಂಟಿ ಕಂಬದ ಮಠದಲ್ಲಿ ಆಯೋಜಿಸಿದ್ದ ಲಿಂ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳ ಸ್ಮರಣೋತ್ಸವದ ಪೂರ್ವಭಾವಿ ಸಭೆಯಲ್ಲಿ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿದರು. ತಿಪ್ಪೇರುದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಶ್ರೀಗಳು, ಪೂರ್ಣಾನಂದ ಶ್ರೀಗಳು, ಸಿದ್ಧರಾಮಪ್ಪ, ಸಾಂತೇನಹಳ್ಳಿ ತಿಪ್ಪೇಸ್ವಾಮಿ, ಮz್ದÉÃರಿನ ಕರಿಬಸಪ್ಪ, ಶ್ರೀಕಾಂತ, ಎಲ್‌ಪಿಸಿ ರಾಜಣ್ಣ, ಮುರುಘೇಶ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಸವಕುಮಾರ ಸ್ವಾಮೀಜಿ
  • ಹೊಳಲ್ಕೆರೆ ಒಂಟಿ ಕಂಬದ ಮಠ
  • ಶರಣತತ್ವ ಶಿಕ್ಷಣ ಶಿಬಿರ
ಚಿತ್ರದುರ್ಗ: ಹೊಳಲ್ಕೆರೆ ಒಂಟಿ ಕಂಬದ ಮಠದಲ್ಲಿ ಆ.೮ರಂದು ಚಿತ್ರದುರ್ಗ ಮುರುಘಾಮಠದ ಲಿಂ. ಜಗದ್ಗುರು ಶ್ರೀ ಮಲ್ಲಿಕಾರ್ಜು ನ ಮುರುಘರಾಜೇಂದ್ರ ಸ್ವಾಮೀಜಿ ಅವರ ೩೨ನೇ ಸ್ಮರಣೋತ್ಸವ ಜರುಗಲಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಒಂಟಿ ಕಂಬದ ಮಠದಲ್ಲಿ ಸೋಮವಾರ ಸ್ಮರಣೆÆÃತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶ್ರೀಗಳ ಸ್ಮರಣೋತ್ಸವ ಹೊಳಲ್ಕೆರೆ ತಾಲೂಕಿನ ಜನತೆಯ ಮುಂದಾಳತ್ವದಲ್ಲಿ ನಡೆಯಬೇಕು. ಒಂಟಿ ಕಂಬದ ಮಠದ ಅಭಿವೃದ್ಧಿಗೆ ಮುರುಘಾ ಮಠದ ಆಡಳಿತ ಮಂಡಳಿ ಅಧ್ಯಕ್ಷರು ಬದ್ಧರಾಗಿದ್ದಾರೆ. ಕಾಂಪೌAಡ್, ಶಾಲಾ, ಕಾಲೇಜು, ಮಳಿಗೆಗಳ ನಿರ್ಮಾಣ ಯೋಜನೆ ಇದೆ. ಅದೇ ದಿನದಂದು ಚಿತ್ರದುರ್ಗದಲ್ಲಿ ನೂತನ ಕಟ್ಟಡಗಳ ಉದ್ಘಾಟನೆ, ಕೆಲವು ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ ಎಂದರು.
ಸ್ಮರಣೋತ್ಸವದ ಅಂಗವಾಗಿ ಒಂಟಿ ಕಂಬದ ಮಠದಲ್ಲಿ ಆಗಸ್ಟ್ ೬ರಿಂದ ಎರಡು ದಿನಗಳ ಕಾಲ ಶರಣತತ್ವ ಶಿಕ್ಷಣ ಶಿಬಿರ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಮಾಜಿ ಶಾಸಕ ಪಿ. ರಮೇಶ್, ರೈತ ಮುಖಂಡ ರಂಗಸ್ವಾಮಿ, ರಾಜಣ್ಣ ಇತರರು ಮಾತನಾಡಿದರು.
ಬಸವ ಮುರುಘೇಂದ್ರ ಸ್ವಾಮೀಜಿ, ಪೂರ್ಣಾನಂದ ಶ್ರೀಗಳು, ರೈತ ಸಂಘದ ಸಿದ್ಧರಾಮಪ್ಪ, ಸಾಂತೇನಹಳ್ಳಿ ತಿಪ್ಪೇಸ್ವಾಮಿ, ಮz್ದÉÃರಿನ ಕರಿಬಸಪ್ಪ, ಶ್ರೀಕಾಂತ, ಎಲ್‌ಪಿಸಿ ರಾಜಣ್ಣ ಇತರರು ಇದ್ದರು. ಕಲಾವಿದ ತಿಪ್ಪೇಸ್ವಾಮಿ ಪ್ರಾರ್ಥಿಸಿದರು. ಮುರುಘೇಶ್ ಸ್ವಾಗತಿಸಿ, ತಿಪ್ಪೇರುದ್ರ ಸ್ವಾಮೀಜಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net