ಜಿಪA ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳು, ಸಮಸ್ಯೆಗಳು ಮತ್ತು ಗ್ರಾಮದ ಅಭಿವÊದ್ಧಿ ಕುರಿತು ಚರ್ಚಿಸಲು ಹಾಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗುತ್ತಿದೆ. ಶಿಕ್ಷಣದ ಪ್ರಗತಿ, ಬಿಸಿಯೂಟ, ಶೌಚಗೃಹ, ಶಾಲಾ ಸ್ವಚ್ಛತೆ, ಸಾರಿಗೆ ಸೌಕರ್ಯ ಇತ್ಯಾದಿ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.