ಸಿದ್ಧಲಿಂಗೇಶ್ವರ ಯತಿಗಳಿಂದ ಲಿಂಗಾಯತ ಪರಂಪರೆ ಉಜ್ವಲ

ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಯಡಿಯೂರು  ತೋಂಟದ ಸಿದ್ಧಲಿಂಗ ಯತಿಗಳ ಜಯಂತ್ಯುತ್ಸವದಲ್ಲಿ ಡಾ.ಬಸವ ಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಗೋವಿಂದ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಜಯಂತ್ಯುತ್ಸವದಲ್ಲಿ ಡಾ.ಬಸವ ಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಗೋವಿಂದ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿ.ಆರ್. ಶಿವಪ್ರಕಾಶ್ ಅಭಿಪ್ರಾಯ
  • ಜಯಂತ್ಯುತ್ಸವದಲ್ಲಿ ವಿಷಯಾವಲೋಕನ
  • ಶೂನ್ಯಪೀಠ
ಚಿತ್ರದುರ್ಗ: ಹನ್ನೆರಡನೇ ಶತಮಾನದ ವಚನ ಚಳವಳಿ ತರುವಾಯ ೧೬ನೇ ಶತಮಾನದಲ್ಲಿ ಶ್ರೀ ಯಡಿಯೂರು ಸಿದ್ಧಲಿಂಗ ಶಿವ ಯೋಗಿಗಳು ಲಿ ಂಗಾಯತ ಪರಂಪರೆಯನ್ನು ಉಜ್ವಲವಾಗಿಸಿದರು ಎಂದು ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಽಕಾರಿ ಡಿ.ಆರ್. ಶಿವಪ್ರಕಾಶ್ ಹೇಳಿದರು.
ಮುರುಘಾಮಠದಲ್ಲಿ ಬುಧವಾರ ಶೂನ್ಯಪೀಠದ ೧೮ನೇ ಅಧ್ಯಕ್ಷರಾದ ಶ್ರೀ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಜ ಯಂತ್ಯುತ್ಸವದಲ್ಲಿ ವಿಷಯಾವಲೋಕನ ಮಾಡಿದ ಅವರು, ೧೨ನೇ ಶತಮಾನ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕಾ ಲಘಟ್ಟ. ಬಸವಣ್ಣ, ಅಲ್ಲಮ,ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ನೂರಾರು ಶರಣರ ಕೊಡುಗೆ ಅನನ್ಯ. ತೋಂಟದ ಸಿದ್ಧ ಲಿಂಗ ಯತಿಗಳು ಬಸವಣ್ಣನವರಂತೆ ಈ ನೆಲದಲ್ಲಿ ಅಧ್ಯಯನ ನಡೆಸಿ, ಬಸವೋತ್ತರ ಯುಗದ ವಚನ ಸಾಹಿತ್ಯ ಸೃಷ್ಟಿಗೆ ಕಾರಣ ಕರ್ತರಾಗಿದ್ದಾರೆ ಎಂದರು.
ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಸಿದ್ಧೇಶ್ವರ ಮಠದ ಪೀಠಾಽಪತಿಗಳಾಗಿ ೭೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಶ್ರೀಗಳು ಮಾತನಾಡಿದರು. ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ವಿವಿಧ ಸಮಾಜಗಳ ಪ್ರಮುಖರಾದ ಶ್ರೀನಿವಾಸ್, ತಿಪ್ಪೇಸ್ವಾಮಿ, ನಾಗರಾಜಸಂಗA, ಕುಬೇರಪ್ಪ, ವಕೀಲ ಹನುಮಂತಪ್ಪ,
ಜಯದೇವಮೂರ್ತಿ, ಇಟಗಿ ವಿಜಯಕುಮಾರ್ ದಂಪತಿ, ಕಣಿವೆಮಾರಮ್ಮ ಸಂಘದ ತಿಪ್ಪೇಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಸಂ ಶೋಧಕ ಡಾ.ಬಿ.ರಾಜಶೇಖರಪ್ಪ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೊಟ್ರೇಶಪ್ಪ, ರೋಣ ಎಸ್. ವೀರೇಶ್, ನೇತಾಜಿ ತಿಪ್ಪೇಸ್ವಾಮಿ, ಅಂಚೆ ಇಲಾಖೆ ಮಹೇಂದ್ರಕುಮಾರ್, ಚಂದ್ರಣ್ಣ, ಎಚ್.ಡಿ. ಪುರ ಗಂಗಾಧರಪ್ಪ, ಶಿವಾನಂದ, ಗಂಗಾಧರ ಇತರರು ಇದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ಸಿದ್ಧಲಿಂಗ ಶಿವಯೋಗಿಗಳ ವಚನ ಪ್ರಾರ್ಥನೆ ಮಾಡಿದರು. ಪ್ರಾಚಾರ್ಯ ಬೋರೇಶ್ ಸ್ವಾಗತಿಸಿ, ಚಲ್ಮೇಶ್‌ವಂದಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net