ವಚನಗಳ ಆಶಯದಿಂದ ಬದುಕು ಸಾರ್ಥಕ

ಚಿತ್ರದುರ್ಗದ ಮುರುಘಾಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ವಚನ ಕಾರ್ತಿಕ ಮಹೋತ್ಸವದ ಸಮಾರಂಭದಲ್ಲಿ ಡಾ.ಶ್ರೀ ಬ ಸವಕುಮಾರ ಸ್ವಾಮೀಜಿ,ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ ಹಾಗೂ ಇತರ ಗಣ್ಯರು ಇದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ವಚನ ಕಾರ್ತಿಕ ಮಹೋತ್ಸವದ ಸಮಾರಂಭದಲ್ಲಿ ಡಾ.ಶ್ರೀ ಬ ಸವಕುಮಾರ ಸ್ವಾಮೀಜಿ,ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ ಹಾಗೂ ಇತರ ಗಣ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ೩೩ ದಿನಗಳ ವಚನ ಕಾರ್ತಿಕ ಮಹೋತ್ಸವ ಸಂಪನ್ನ
  • ಭಕ್ತರಲ್ಲಿ ಅರಿವು ಮೂಡಿಸಿದ ಕರ‍್ಯಕ್ರಮ
  • ಶಿವ ಶರಣರ ವ್ಯಕ್ತಿತ್ವ ಮತ್ತು ಸಾಧನೆ
ಚಿತ್ರದುರ್ಗ: ಕಾರ್ತಿಕ ಮಾಸದಲ್ಲಿ ವಚನಗಳು,ಅವುಗಳ ಆಶಯಗಳನ್ನು ನೆನಪಿಸುವ ಮೂಲಕ ಮುರುಘಾಮಠ ಹಲವು ಶಿವ ಶರ ಣರಿಗೆ ಗೌರವ ಸಲ್ಲಿಸಿದೆ ಎಂದು ನಿವೃತ್ತ ಪ್ರಾಚರ‍್ಯ ಎಸ್.ಎಂ.ಕೊಟ್ರೇಶಪ್ಪ ಅವರು ಹೇಳಿದರು. ಶ್ರೀ ಮಠದಿಂದ ಮಂಗಳವಾರ ವ ಚನ ಕಾರ್ತಿಕ ಮಹೋತ್ಸವ ಸಮಾರೋಪದಲ್ಲಿ ಶಿವಶರಣ ಮನುಮುನಿ ಗುಮ್ಮಟದೇವರ ಕುರಿತು ವಿಷಯಾವಲೋಕನ ಮಾಡಿ ದ ಅವರು, ಪ್ರತಿಯೊಬ್ಬ ಶರಣರದ್ದು ಒಂದೊAದು ರೀತಿಯ ವ್ಯಕ್ತಿತ್ವ ಮತ್ತು ಸಾಧನೆಯಾಗಿದೆ. ಶರಣರಿಗೆ ಶರಣರೇ ಸಾಟಿಯಾಗಿ ದ್ದಾರೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್.ಚಂದ್ರಶೇಖರ್ ಅವರು ಮಾತನಾಡಿ, ಶಿವಶರಣರು ಗುರುತರ ಕಾಯಕ ದೊಂ ದಿಗೆ ವಚನಗಳನ್ನು ರಚಿಸಿರುವುದು ಅಮೋಘ ಸಾಧನೆಯಾಗಿದೆ ಎಂದರು. ಸಮ್ಮುಖ ವಹಿಸಿದ್ದ ಶ್ರೀ ಮುರುಘೇಂದ್ರ ಸ್ವಾಮೀಜಿ ಅ ವರು ಮಾತನಾಡಿ,ವಚನ ಸಾಹಿತ್ಯಕ್ಕೆ ಅತ್ಯಂತ ಮೌಲ್ಯವಿದೆ. ಈ ಕರ‍್ಯಕ್ರಮದಿಂದ ಹಲವು ವಚನಕಾರರು ಮತ್ತು ಅವರ ವಚನಗ ಳಡೆ ಭಕ್ತರಲ್ಲಿ ಅರಿವು ಮೂಡಿಸಲು ಸಾಧ್ಯವಾಗಿದೆ ಎಂದರು.
ಸಮ್ಮುಖ ವಹಿಸಿದ್ದ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅವರು ಮಾತನಾಡಿ, ಗುರು,ಲಿಂಗ, ಜಂಗಮ, ಪ್ರ ಸಾದ,ಪಾದೋದಕದ ಅರ್ಥ ವಿವರಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,ನಮಗೆ ಗೊತ್ತಿರದ ಶರಣರ ಚಿಂತನೆ ಶ್ರೀಮಠದಲ್ಲಿ ೩೩ ದಿನಗಳ ಕಾಲ ನಡೆದ ಈ ಕರ‍್ಯಕ್ರಮ ಸಮಾರೋಪಗೊಳ್ಳು ತ್ತಿರುವುದು ಸಂತಸದ ಸಂಗತಿ ಎಂದರು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಕರ‍್ಯ ದರ್ಶಿ ಬಸವರಾಜಕಟ್ಟಿ,ಹೊಸದುರ್ಗ ಘಟಕದ ಅಧ್ಯಕ್ಷ ಜೆ.ಮಲ್ಲೇಶ್,ಮುಖ್ಯಶಿಕ್ಷಕಿ ಡಾ.ಬಿ.ಟಿ.ಲೋಲಾಕ್ಷಮ,ಪ್ರಧಾನ ಅಂಚೆ ಕಚೇರಿ ಸಹಾಯಕ ಆರ್.ತಿಪ್ಪೇಸ್ವಾಮಿ, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಕರ‍್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ, ಎಚ್‌ಡಿ ಪುರದ ಅಣ್ಣಪ್ಪ, ನಾ ಗರಾಜ ಸಂಗಮ್,ಚುಟುಕು ಕವಿ ಗಂಗಾಧರಪ್ಪ ಮತ್ತಿತರರು ಮಾತನಾಡಿದರು.
ಶರಣೆ ಜಯದೇವಿ ತಾಯಿ,ಶರಣÉ ಚಿನ್ಮಯಿತಾಯಿ, ಕೆಇಬಿ ಷಣ್ಮುಖಪ್ಪ,ಜಿ.ಎಸ್.ಉಜ್ಜಿನಪ್ಪ,ಮಹಡಿ ಶಿವಮೂರ್ತಿ,ಲೇಖಕ ಆನಂ ದಕುಮಾರ್,ಸಿದ್ದಪ್ಪ,ಎಸ್.ಪರಮೇಶ್,ಸುನಿತಾ ಮಲ್ಲಿಕಾರ್ಜುನ್,ಆರತಿಮಹಡಿ ಶಿವಮೂರ್ತಿ, ಚೆನ್ನಯ್ಯ, ಗುತ್ತಿನಾಡು ಶಿವಲಿಂಗ ಪ್ಪ, ವಕೀಲ ಉಮೇಶ್,ಉದ್ಯಮಿಗಳಾದ,ಶಂಕರಮೂರ್ತಿ,ಅರುಣ್‌ಕುಮಾರ್,ಶರಣ್‌ಕುಮಾರ್,ಸೈಟ್‌ಬಾಬಣ್ಣ ಇತರರು ಇದ್ದರು. ಪಾರ್ವತಿ ಸ್ವಾಗತಿಸಿ, ಆಶಾರಾಣಿ ವಂದಿಸಿದರು. ಗೀತಾ ರುದ್ರೇಶ್‌ನಿರೂಪಿಸಿದರು. ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ನಗ ದು ಬಹುಮಾನ,ಪ್ರಮಾಣ ಪತ್ರ ಪ್ರದಾನ ಮಾಡಿ ಗೌರವಿಸಲಾಯಿತು.
"

ಕೋಟ್ವಚನ ಅಂದರೆ ಬೆಳಕು,ಈ ಬೆಳಕು ಮಾನವನ ಮನಸ್ಸಿನಲ್ಲಿ ಬೆಳಗ ಬೇಕಿದೆ. ವಚನಗಳು ಪಚನವಾದರೆ ಬದುಕಿನಲ್ಲಿ ಶಾಂತಿ,ನೆಮ್ಮದಿ ಹಾಗೂ ಯಶಸ್ಸು ಲಭ್ಯವಾಗಲಿದೆ. ವಚನಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ,ಅವು ಎಲ್ಲರ ಬದುಕಿಗೆ ಪ್ರೇರಕವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net