ಎಸ್‌ಬಿಐ ಕ್ಲರ್ಕ್ ಎಕ್ಸಾಮಿನೇಷನ್ ೨೬ ಮತ್ತು ೨೭ರಂದು, ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್ ಸೆ.೧೬ರಿಂದ ೨೬, ಕೆಎಸ್‌ಆರ್‌ಪಿ, ಐಆರ್ ಬಿ, ಕೆಎಸ್‌ಐಎಸ್ ಎಫ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ ಸೆ.೨೦ರಂದು ನಡೆಯಲಿವೆ. ಈ ಹಿನ್ನೆಲೆ ಯಲ್ಲಿ ಅರ್ಹ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸಿದ್ದು, ಒಂದೇ ದಿನಾಂಕದAದು ಪರೀಕ್ಷೆಗಳು ನಡೆಯುವುದರಿಂದ ಯಾವುದಾದರೂ ಒಂದು ಉದ್ಯೋಗಾವಕಾಶ ಕಳೆದುಕೊಳ್ಳುವ ನಿರ್ಬಂಧಕ್ಕೆ ಸಿಲುಕಿದ್ದಾರೆ. ಅಲ್ಲದೆ ಪರೀಕ್ಷೆಗಳ ನಡುವೆ ಸಮಯದ ಅಂತರವಿಲ್ಲದೆ ಸಮ ರ್ಪಕ ಸಿದ್ಧತೆಗೂ ಅಡಚಣೆ ಆಗಿದೆ.