ರಸ್ತೆ ಅಪಘಾತದಲ್ಲಿ ಚಿರತೆ ಸಾವು

ಎನ್‌ಎಚ್‌ಐ ಅಽಕಾರಿಗಳಿಗೆ ನೋಟಿಸ್
ರಸ್ತೆ ಅಪಘಾತದಲ್ಲಿ ಚಿರತೆ ಸಾವು
ಚಿತ್ರದುರ್ಗ ತಮಟಕಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ಚಿರತೆ ಮರಿ.
Published on: 

ಚಿತ್ರದುರ್ಗ: ನಗರದ ಹೊರವಲಯ ತಮಟಕಲ್ಲು ಬಳಿ ಎನ್‌ಎಚ್ ೪೮ರಲ್ಲಿ ಮಂಗಳವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಸುಮಾರು ಒಂದೂವರೆ ವರ್ಷದ ಹೆಣ್ಣು ಚಿರತೆ ಮರಿ ಮೃತಪಟ್ಟಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಚಿರತೆ ಅಸು ನೀಗಿದೆ.

ಚಿರತೆ ತನ್ನ ಮರಿಯೊಂದಿಗೆ ಹೆದ್ದಾರಿ ದಾಟುತ್ತಿದ್ದಾಗ, ಮರಿ ಅಪಘಾತಕ್ಕೀಡಾಗಿ ಅಸು ನೀಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಭಾರೀ ವಾಹನವೊಂದು ಡಿಕ್ಕಿ ಹೊಡೆದಿರಬಹುದು. ಆದ್ದರಿಂದ ಗುಯಿಲಾಳು ಟೋಲ್‌ಗೇಟ್‌ನಲ್ಲಿ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗುವುದು ಎಂದು ಆರ್‌ಎಫ್‌ಒ ವಸಂತಕುಮಾರ್ ತಿಳಿಸಿದ್ದಾರೆ. ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಚಿರತೆ ಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕರಡಿ ಅಸು ನೀಗಿತ್ತು

ಕಳೆದ ಜುಲೈ ೨೮ರಂದು ಇದೇ ರಾಷ್ಟ್ರೀಯ ಹೆದ್ದಾರಿ ತಮಟಕಲ್ಲು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ೨ ವರ್ಷದ ಕರಡಿ ಸ್ಥಳದಲ್ಲೇ ಮೃತಪಟ್ಟಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವನ್ಯಜೀವಿಗಳು ಅಪಘಾತಕ್ಕೀಡಾಗಿ ಅಸು ನೀಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಅಽಕಾರಿಗಳಿಗೆ ನೋಟಿಸ್ ನೀಡಲಾಗುವುದು. ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ವೈಲ್ಡ್ಲೈಪ್ ಮಿಟಿಗೇಷನ್‌ಪ್ಲ್ಯಾನ್ ಅನುಷ್ಠಾನವಾಗಿಲ್ಲ ಎಂದು ಡಿಸಿಎಫ್ ಜಿ.ಗೋಪ್ಯನಾಯ್ಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net