ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವಂತೆ ಆಗ್ರಹಿಸಿ ವಿಎಚ್‌ಪಿ-ಬಜರಂಗದಳದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಕೆ.ಎಂ. ಯತೀಶ್, ದೀಪಕ್‌ರಾಜ್, ಬಾಲಕೃಷ್ಣ, ರಂಗಸ್ವಾಮಿ ಇತರರಿದ್ದರು.
ಚಿತ್ರದುರ್ಗ: ಗೋವುಗಳ ಸಂರಕ್ಷಣೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ಬುಧವಾರ ನಗರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
ಕಾAಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೂತನ ಗೋ ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ಯಾವ ಕಾರಣಕ್ಕೂ ಬೆಳಗಾವಿ ಅಽವೇಶನದಲ್ಲಿ ಮಂಡಿಸಿ, ಅನುಮತಿ ನೀಡದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಬಹುಸಂಖ್ಯಾತರ ಭಾವನೆಗೆ ಸ್ಪಂದಿಸಿದ್ದ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಗೋ ಸಂರಕ್ಷಣೆ ಸಂಬAಧ ಕಠಿಣ ಕಾಯ್ದೆ ಜಾರಿಗೊ ಳಿಸಿತ್ತು. ಆದರೀಗ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ, ಓಲೈಕೆ ರಾಜಕಾರಣ ದೃಷ್ಟಿಯಿಂದ ಅದನ್ನು ಸಡಿಲಗೊ ಳಿಸಿ ಗೋವುಗಳ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಗೋವುಗಳ ಅಕ್ರಮ ಸಾಗಾಣೆ ವೇಳೆ ಸಿಕ್ಕಿ ಬಿದ್ದರೆ ಪೊಲೀಸರು ಬಂಽಸಿ ಪ್ರಕರಣವನ್ನು ಎಸಿ ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತಿ ದ್ದರು. ಜಪ್ತಿ ಮಾಡಲಾಗುತ್ತಿದ್ದ ವಾಹನಗಳನ್ನು ಬಿಡಿಸಿಕೊಳ್ಳಲು ದಂಡ ಪಾವತಿಸುವ ಕಠಿಣ ಕಾನೂನು ಜಾರಿಯಲ್ಲಿತ್ತು.ಅದನ್ನೀಗ ಕೈ ಸರ್ಕಾರ ಸಡಿಲಗೊಳಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ೨೦೨೦ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶ ಯಕ್ಕೆ, ಸಮಸ್ತ ಹಿಂದು ಧರ್ಮೀಯರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಜಾರಿಗೊಳಿಸಬಾರದು. ಒಂದು ವೇಳೆ ಜಾ ರಿಯಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂವಿಧಾನದ ಆರ್ಟಿಕಲï ೫೧`ಎ' ಅನ್ವಯ ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಇ ದು ರಾಜ್ಯ ಸರ್ಕಾರಕ್ಕೂ ಅನ್ವಯವಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಜಾನುವಾರು ವಧೆ ನಿಷೇಽಸುವ ಉದ್ದೇಶ ಮಾತ್ರವಲ್ಲದೆ, ಸಂ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಅಕ್ರಮಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು ಎಂದು ಕೋರಿ ದರು.