Law: ಪ್ರತಿಯೊಬ್ಬರಿಗೂ ಕನಿಷ್ಠ ಕಾನೂನು ಅರಿವು ಅಗತ್ಯ

Law:ಹೊಸದುರ್ಗದಲ್ಲಿ ಮಂಗಳವಾರ ವಿಶ್ವ ಮಾನವ ಹಕ್ಕುಗಳ ದಿನ ಕಾರ್ಯಕ್ರಮವನ್ನು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ ಉದ್ಘಾಟಿಸಿದರು.
Law:ಹೊಸದುರ್ಗದಲ್ಲಿ ಮಂಗಳವಾರ ವಿಶ್ವ ಮಾನವ ಹಕ್ಕುಗಳ ದಿನ ಕಾರ್ಯಕ್ರಮವನ್ನು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೊತ್ತಿಲ್ಲ ಎಂದರೆ ಕಾನೂನು ಒಪ್ಪದು
  • ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ ಹೇಳಿಕೆ
  • ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಹೊಸದುರ್ಗ:Lawಕಾನೂನು ಸಾಕ್ಷರತೆಯ ಕೊರತೆಯಿಂದ ಕಾನೂನು ಉಲ್ಲಂಘಿಸಿದ ಸಂದರ್ಭದಲ್ಲಿ ನನಗೆ ಕಾನೂನು ಗೊತ್ತಿಲ್ಲ ಎಂದು ಕ್ಷಮೆ ಕೋರಿದರೆ ನ್ಯಾಯಾಲಯ ಅದನ್ನು ಒಪ್ಪುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಠ ಕಾನೂನು ಅರಿವನ್ನು ಹೊಂದಿರಬೇಕು ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವೈ.ಕೆ. ಬೇನಾಳ ತಿಳಿಸಿದರು.
ಪಟ್ಟಣದ ಗಣೇಶ ಸದನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆ

ಆಡಳಿತ ಮತ್ತು ಕಾನೂನು: ದೇಶದ ಆಡಳಿತವು ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತಿದೆ. ಆಳುವ ಪಕ್ಷಗಳು ಯಾವುದೇ ಇರಲಿ, ಕಾನೂನಿನ ಅಡಿಯಲ್ಲಿ ಆಡಳಿತ ನಡೆಸದಿದ್ದರೆ ಶಿಕ್ಷೆ ಅನಿವಾರ್ಯ.
ಉಚಿತ ಕಾನೂನು ಸೇವೆ: ಕಾನೂನು ಸೇವಾ ಪ್ರಾಧಿಕಾರವು ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ/ಪಂಗಡದವರು ಹಾಗೂ ವಾರ್ಷಿಕ 3 ಲಕ್ಷ ರೂ. ಒಳಗೆ ಆದಾಯವಿರುವ ವ್ಯಕ್ತಿಗಳಿಗೆ ಕೆಳಹಂತದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ ಉಚಿತ ಕಾನೂನು ಸೇವೆ ಒದಗಿಸುತ್ತದೆ.
ಜನನ ಪ್ರಮಾಣ ಪತ್ರ: ಪ್ರತಿಯೊಬ್ಬರೂ ಕಡ್ಡಾಯವಾಗಿ ಜನನ ಪ್ರಮಾಣ ಪತ್ರ ಹೊಂದಿರಬೇಕು. ದಾಖಲೆ ಇಲ್ಲದವರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಇದನ್ನು ಪಡೆಯಬಹುದು.
ಮಾನವ ಹಕ್ಕುಗಳು: ಸಂವಿಧಾನವು ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸುವ ಹಕ್ಕನ್ನು ನೀಡಿದೆ. ಮಾನವ ಹಕ್ಕುಗಳ ಉಲ್ಲಂಘನೆಯು ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದೆ.

ಗ್ರಾಹಕರ ಹಕ್ಕುಗಳು

ಗುಣಮಟ್ಟದ ವಸ್ತು ಮತ್ತು ಸೇವೆ ಪಡೆಯುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕು. ಯಾವುದೇ ವಸ್ತು ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಹಣ ಕೊಟ್ಟು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ಲೋಪವಿದ್ದರೆ ಮತ್ತು ವರ್ತಕರಿಂದ ಸ್ಪಂದನೆ ಸಿಗದಿದ್ದರೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.

ಭೂಮಿ ಖರೀದಿಸುವ ಮುನ್ನ ಎಚ್ಚರ!

ಇತ್ತೀಚೆಗೆ ಭೂಮಿ ಖರೀದಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು, ಖರೀದಿದಾರರಿಗೆ ಈ ಕೆಳಗಿನ ಸಲಹೆ ನೀಡಿದರು.
  • ಆಸ್ತಿಯ ಹಕ್ಕು ಹೊಂದಿರುವ ಎಲ್ಲಾ ವಾರಸುದಾರರನ್ನು ಸ್ಪಷ್ಟವಾಗಿ ಗುರುತಿಸಿ.
  • ಕೇವಲ ದಾಖಲೆಯಲ್ಲಿ ಹೆಸರಿರುವ ವ್ಯಕ್ತಿಯ ಒಪ್ಪಿಗೆ ಮಾತ್ರವಲ್ಲದೆ, ಎಲ್ಲಾ ರಕ್ತ ಸಂಬಂಧಿಗಳ ಒಪ್ಪಿಗೆ ಪಡೆದು ವ್ಯವಹಾರ ನಡೆಸಿ. ಇಲ್ಲವಾದರೆ, ನಂತರದ ದಿನಗಳಲ್ಲಿ ಇತರ ವಾರಸುದಾರರು ನ್ಯಾಯಾಲಯದಲ್ಲಿ ದಾವೆ ಹೂಡಿ ಭೂಮಿಯನ್ನು ವಾಪಸ್ ಪಡೆಯುವ ಸಾಧ್ಯತೆ ಇರುತ್ತದೆ,
  • ಇದರಿಂದ ಖರೀದಿದಾರರಿಗೆ ಆರ್ಥಿಕ ನಷ್ಟವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net