ಜಿಲ್ಲಾ ವಕೀಲರ ಸಂಘ ಮತ್ತು ವಕೀಲರ ಸಾಂಸ್ಕೃತಿಕ ಕಲಾ ಬಳಗದಿಂದ ೩ ನೇ ಬಾರಿಗೆ ಕುರುಕ್ಷೇತ್ರ ಅರ್ಥಾತ್ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಾಟಕದ ಪ್ರಚಾರದ ಕರ ಪತ್ರಿಕೆಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ರೋಣ ವಾಸುದೇವ್ ಬಿಡುಗಡೆ ಮಾಡಿ ಮಾತನಾಡಿದರು.ನ್ಯಾಯಾಲಯದ ಎಲ್ಲ ನ್ಯಾಯಾಽÃಶರು ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಾಂಸ್ಕೃತಿ ಕಲಾ ಬಳಗದ ವ್ಯವಸ್ಥಾಪಕ ಪಿ.ಆರ್. ವೀರೇಶ ಮತ್ತು ಸಂಯೋಜಕ ಬಿ.ಡಿ.ಬಸವರಾಜ್, ಸ್ಟೇಜ್ ಮ್ಯಾನೇಜರ್ ಬೀಸಹಳ್ಳಿ ಜಯಪ್ಪ, ನಾಟಕದ ಎಲ್ಲ ಪಾತ್ರಧಾರಿಗಳು, ಕಲಾವಿದರು ಇದ್ದರು.
ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘ ಮತ್ತು ವಕೀಲರ ಸಾಂಸ್ಕೃತಿಕ ಕಲಾ ಬಳಗದಿಂದ ೩ ನೇ ಬಾರಿಗೆ ಕುರುಕ್ಷೇತ್ರ ಅರ್ಥಾತ್ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ನಗರದ ನ್ಯಾಯಾಲಯ ಆವರಣದಲ್ಲಿ ಡಿ. ೬ ರಂದು ರಾತ್ರಿ ೮ ಗಂಟೆಗೆ ಏರ್ಪಡಿಸಲಾಗಿದೆ.
ಈಚೆಗೆ ನಾಟಕದ ಪ್ರಚಾರದ ಕರ ಪತ್ರಿಕೆಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ರೋಣ ವಾಸುದೇವ್ ಬಿಡುಗಡೆ ಮಾಡಿ ಮಾತನಾಡಿ, ವಕೀಲರು ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ. ಕಳೆದ ೨ ಬಾರಿಯೂ ನಮ್ಮ ವಕೀಲರಿಂದ ನಾಟಕ ಯಶಸ್ವಿಯಾಗಿ ಪ್ರದರ್ಶಿತವಾಗಿದೆ. ವಕೀಲರ ಕಲಾ ಪ್ರದರ್ಶನ ಶ್ಲಾಘನೀಯ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ ಮಾತನಾಡಿ, ಕಲೆ ಎಂಬುದು ಹರಿಯುವ ನೀರು, ನಿಂತ ನೀರಲ್ಲ. ಕಲೆ ಗೆ ತನ್ನದೇ ಆದ ಇತಿಹಾಸವಿದೆ. ರಾಜಮಹಾರಾಜರ ಕಾಲದಲ್ಲಿ ಮನರಂಜನೆಯಲ್ಲಿ ಅದ್ವಿತೀಯ ಸ್ಥಾನಮಾನ ಪಡೆದಿತ್ತು ಎಂ ದರು.
ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವು ಯಾದವ್ ಮಾತನಾಡಿ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನರಂಜನೆಗಾಗಿ ಗ್ರಾ ಮೀಣರು ನಾಟಕ ಮೊದಲಾದ ಕಲಾಪ್ರಕಾರಗಳಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕಲಾಮಾತೆಯನ್ನು ಆರಾಽಸೋಣ, ಕಲೆ ಯನ್ನು ಉಳಿಸಿ ಬೆಳೆಸೋಣ ಎಂದರು.
ನ್ಯಾಯಾಲಯದ ಎಲ್ಲ ನ್ಯಾಯಾಽÃಶರು ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಾಂಸ್ಕೃತಿ ಕಲಾ ಬಳಗದ ವ್ಯವಸ್ಥಾಪಕ ಪಿ.ಆರ್. ವೀರೇಶ ಮತ್ತು ಸಂಯೋಜಕ ಬಿ.ಡಿ.ಬಸವರಾಜ್, ಸ್ಟೇಜ್ ಮ್ಯಾನೇಜರ್ ಬೀಸಹಳ್ಳಿ ಜಯಪ್ಪ, ನಾಟಕದ ಎಲ್ಲ ಪಾತ್ರಧಾರಿಗಳು, ಕಲಾವಿದರು ಇದ್ದರು.