ಭಾರತೀಯ ವಾಸ್ತು ಶಿಲ್ಪದ ಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯ

 ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಹೊನ್ನೂರು ಸ್ವಾಮಿ, ಪ್ರೊ.ಜೆ. ಕರಿಯಪ್ಪ ಮಾಳಿಗೆ,  ಡಾ.ಬಿ. ಸುರೇಶ್, ಪ್ರೊ. ತಾರಿಣಿ ಶುಭದಾಯಿನಿ, ಪ್ರೊ. ಹನುಮಂತಪ್ಪ, ಡಾ. ರೇವಣಸಿದ್ದಪ್ಪ, ಪ್ರೊ. ಮಹಮದ್ ಬಾಷ, ಪ್ರೊ.ಬಿ. ಜಗನ್ನಾಥ, ಪ್ರೊ. ಎಸ್.ಬಿ. ಶಿವಪ್ರಸಾದ್ ಇತರರು ಇದ್ದರು.
ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಹೊನ್ನೂರು ಸ್ವಾಮಿ, ಪ್ರೊ.ಜೆ. ಕರಿಯಪ್ಪ ಮಾಳಿಗೆ, ಡಾ.ಬಿ. ಸುರೇಶ್, ಪ್ರೊ. ತಾರಿಣಿ ಶುಭದಾಯಿನಿ, ಪ್ರೊ. ಹನುಮಂತಪ್ಪ, ಡಾ. ರೇವಣಸಿದ್ದಪ್ಪ, ಪ್ರೊ. ಮಹಮದ್ ಬಾಷ, ಪ್ರೊ.ಬಿ. ಜಗನ್ನಾಥ, ಪ್ರೊ. ಎಸ್.ಬಿ. ಶಿವಪ್ರಸಾದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಹೊನ್ನೂರುಸ್ವಾಮಿ ಅನಿಸಿಕೆ
  • ಕಲಾ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
  • ದಾವಿವಿ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ
ಚಿತ್ರದುರ್ಗ: ಬೌದ್ಧ ಸ್ತೂಪಗಳು, ವಿಹಾರಗಳು ಹಾಗೂ ಚೈತ್ಯಾಲಯಗಳ ಅಧ್ಯಯನದಿಂದ ವಿವಿಧ ಧರ್ಮಗಳ ಮೂಲ ಆಶಯ ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ದಾವಿವಿ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮು ಖ್ಯಸ್ಥ ಡಾ. ಹೊನ್ನೂರುಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಭಾರತೀಯ ಕಲೆ ಮತ್ತು ವಾಸ್ತು ಶಿಲ್ಪ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ದೇವಾಲಯಗಳ ಪರಂಪರೆಗೆ ಸುದೀರ್ಘ ಹಾಗೂ ಪ್ರಾಚೀನ ಇತಿಹಾಸವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿ ಸಲು ವಿದ್ಯಾರ್ಥಿಗಳಲ್ಲಿ ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಜ್ಞಾನ ಇರಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ದೇವಾಲಯ, ವಾಸ್ತುಶಿಲ್ಪಗಳು ಜಾತ್ಯತೀತ ಮೌಲ್ಯಗಳನ್ನು ಒಳಗೊಂಡಿದ್ದು, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿವೆ. ಹಾಗಾಗಿ ಪ್ರಾಚೀನ ಪರಂಪರೆ ಬಗ್ಗೆ ವಿದ್ಯಾರ್ಥಿಗಳು ಕಳಕಳಿ ಹೊಂದಿರಬೇಕು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ. ಸುರೇಶ್ ಅವರು ಗಾಂಧಾರ ಮತ್ತು ಮಥುರಾ ಕಲೆಗಳ ವಿಶೇಷತೆ ಪರಿಚಯಿಸಿದರು.
ಐಕ್ಯೂಎಸಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ ಮಾತನಾಡಿದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಹನುಮಂ ತಪ್ಪ, ಡಾ.ರೇವಣಸಿದ್ದಪ್ಪ, ಸ್ನಾತಕ ಪದವಿ ಮುಖ್ಯಸ್ಥ ಪ್ರೊ. ಮಹಮದ್ ಬಾಷ ಇದ್ದರು. ಪ್ರೊ.ಬಿ. ಜಗನ್ನಾಥ ನಿರೂಪಿಸಿದರು. ಪ್ರೊ. ಎಸ್.ಬಿ.ಶಿವಪ್ರಸಾದ್ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net