

ಪ್ರಮುಖ ಮುಖ್ಯಾಂಶಗಳು
ಚಿಕ್ಕಜಾಜೂರು: ತಾಲೂಕಿನ ರಾಮಗಿರಿಬೆಟ್ಟದಲ್ಲಿ ನೆಲೆಸಿರುವಕರಿಸಿದ್ದೇಶ್ವರ ಸ್ವಾಮಿಯ ಕಡೆಕಾರ್ತೀಕೋತ್ಸವ ಹಾಗೂ ಲಕ್ಷದೀಪೋತ್ಸವ ಸೋಮವಾರ ಜರುಗಲಿದೆ. Laksha Deepotsavam
ಬೆಟ್ಟ ಹತ್ತಲುನಿರ್ಮಿಸಿರುವ ಮೆಟ್ಟಿಲುಗಳ ಮೇಲೆಹಾಗೂ ಬೆಟ್ಟದ ಮೇಲಿರುವ ದೇವಸ್ಥಾನದಆವರಣದವರೆಗೆ ಲಕ್ಷ ದೀಪ ಇರಿಸಿಬೆಳಗಿಸಲಾಗುವುದು.
ರಾತ್ರಿಸ್ವಾಮಿಗೆ ಮಹಾಮಂಗಳಾರತಿಆಗುತ್ತಿದ್ದಂತೆ ತಾಲೂಕಿನ ಹಾಗೂವಿವಿಧ ಜಿಲ್ಲೆಗಳಿಂದ ಆಗಮಿಸಿದಸಾವಿರಾರು ಭಕ್ತರು ಸ್ವಾಮಿಯನ್ನುಸ್ಮರಿಸುತ್ತ ಹರಕೆಯ ದೀಪಗಳನ್ನುಹಚ್ಚುವರು.ಈ ಸಮಯದಲ್ಲಿಇಡೀ ಬೆಟ್ಟ ದೀಪಗಳ ಬೆಳಕಿನಲ್ಲಿಕಂಗೊಳಿಸುತ್ತದೆ.
ಮಂಗಳವಾರ ಮುಂಜಾನೆಕರಿಸಿದ್ದೇಶ್ವರ,ಕರಿಯಮ್ಮಹಾಗೂ ಆಂಜನೇಯ ಸ್ವಾಮಿಗಳ ಉತ್ಸವಮೂರ್ತಿಗಳನ್ನು ಬೆಟ್ಟದಿಂದಗ್ರಾಮಕ್ಕೆ ಕರೆತರಲಾಗುವುದು.
ಗ್ರಾಮದದೇವಸ್ಥಾನದಲ್ಲಿ ಬಾಳೆ ದಿಂಡಿನಿಂದಸುಂದರವಾಗಿ ಅಲಂಕಾರ ಮಾಡಿ,ನಿರ್ಮಿಸಿದಕದಳಿ ಮಂಟಪದಲ್ಲಿ ಉತ್ಸವ ಮೂರ್ತಿಗಳನ್ನುಕೂರಿಸಲಾಗುವುದು.ಮಂಗಳವಾರರಾತ್ರಿ ಪೂರ್ತಿ ಉತ್ಸವ ಮೂರ್ತಿಗಳಿಗೆವಿವಿಧ ಪೂಜೆ ನಡೆಸಲಾಗುತ್ತದೆ.
ಕದಳಿ ಮಂಟಪದಲ್ಲಿಕುಳಿತ ದೇವರುಗಳಿಗೆ ಭಕ್ತರುತಮ್ಮ ಹರಕೆಯಂತೆ ಬಾಳೆಹಣ್ಣುತಂದು ಅರ್ಪಿಸುತ್ತಾರೆ.ಭಕ್ತರುನೀಡಿದ ಬಾಳೆ ಹಣ್ಣುಗಳನ್ನು ಕದಳಿಮಂಟಪದ ಮುಂದೆ ದೇವಸ್ಥಾನ ಸಮಿತಿಯವರುರಾಶಿ ಹಾಕುತ್ತಾರೆ.
ನಂತರ,ಉತ್ಸವಮೂರ್ತಿಗಳಿಗೆ ಮಹಾ ಮಂಗಳಾರತಿನಡೆಸಲಾಗುತ್ತದೆ.ಆನಂತರ ಬಾಳೆಹಣ್ಣಗಳನ್ನು ಭಕ್ತರಿಗೆ ಪ್ರಸಾದವಾಗಿನೀಡಲಾಗುತ್ತದೆ.