ಕನ್ನಡಕ್ಕಿದೆ ಸಾವಿರಾರು ವರ್ಷಗಳ ಸಾಂಸ್ಕೃತಿಕ ಬೇರು

ಭರಮಸಾಗರ ಸರ್ಕಾರಿ ಪದವಿ ಕಾಲೇಜಿನಲ್ಲನಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಹನುಮಂತಪ್ಪ ಚೀಳಂಗಿ, ಡಾ. ರವಿಕುಮಾರ್ ನೀಹ, ಪ್ರಾಚಾರ್ಯೆ ಡಾ. ಎಸ್. ಶಶಿಕಲಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಹರೀಶ್, ಕೆ.ಎಚ್. ಮಸೂದ್ ಅಹಮದ್, ಐಕ್ಯುಎಸಿ ಸಂಚಾಲಕಿ ಮಮತಾ ಎನ್. ಆರ್., ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಕುಮಾರ್ ಎಸ್., ರಿಯಾಜ್ ಐ, ಸಿಡಿಸಿಸಿ ಸದಸ್ಯ ಸಿ.ಎಂ. ನಾಡಿಗೇರ್, ಕಲಾವಿದರಾದ ಶಿವಕುಮಾರ್, ಕಾಂತರಾಜ್ ಹಾಗೂ ಸಿಬ್ಬಂದಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯೆ ಡಾ.ಎಸ್. ಶಶಿಕಲಾ ಅನಿಸಿಕೆ
  • ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಭರಮಸಾಗರ: ಕನ್ನಡ ಕೇವಲ ಭಾಷೆಯಲ್ಲ, ಸಾವಿರಾರು ವರ್ಷಗಳ ಸಾಹಿತ್ಯ, ಸಂಸ್ಕೃತಿಯ ಬಲವಾದ ಬೇರು ಎಂದು ಪ್ರಾಚಾರ್ಯೆ ಡಾ.ಎಸ್. ಶಶಿಕಲಾ ಹೇಳಿದರು.
ಭರಮಸಾಗರ: ಕನ್ನಡ ಕೇವಲ ಭಾಷೆಯಲ್ಲ, ಸಾವಿರಾರು ವರ್ಷಗಳ ಸಾಹಿತ್ಯ, ಸಂಸ್ಕೃತಿಯ ಬಲವಾದ ಬೇರು ಎಂದು ಪ್ರಾಚಾರ್ಯೆ ಡಾ.ಎಸ್. ಶಶಿಕಲಾ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಪುರಸ್ಕಾರಗಳು ದೊರೆತಿರುವುದು ಕಲಶಪ್ರಾಯವಾಗಿವೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಾಹಿತಿ ಡಾ. ರವಿಕುಮಾರ್ ನೀಹ ಮಾತನಾಡಿ, ಕನ್ನಡ ತನ್ನ ಬಲವಾದ ಬೇರನ್ನು ನಾಡಿನಲ್ಲಿ ಉಳಿಸಿಕೊಂಡಿದೆ. ಈ ಮಣ್ಣಿನ ಸೊಗಡಿನ ಅನೇಕ ಸಾಹಿತಿಗಳು, ಜ್ಞಾನಿಗಳು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಭಿಪ್ರಾಯಪೊಟ್ಟರು.
2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಮಾರಪ್ಪ ಚೀಳಂಗಿ ಮಾತನಾಡಿ, ಜನಪದ ಕಲೆ ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದೆ. ವಿದ್ಯಾರ್ಥಿಗಳು ಅವುಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹನುಮಂತಪ್ಪ ಚೀಳಂಗಿ, ಡಾ. ರವಿಕುಮಾರ್ ನೀಹ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರ ಹನುಮಂತಪ್ಪ ಅವರಿಂದ ಉರುಮೆ, ಕಲಾವಿದರಾದ ಶಿವಕುಮಾರ್ ಇತರರರಿಂದ ಕಹಳೆ ವಾದನ ನಡೆಯಿತು.
ಕೆ.ಎಚ್. ಮಸೂದ್ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿಡಿಸಿಸಿ ಸದಸ್ಯ ಸಿ.ಎಂ. ನಾಡಿಗೇರ್ ಮಾತನಾಡಿದರು. ರಮ್ಯಾ ಪ್ರಾರ್ಥಿಸಿದರು. ಡಾ. ಪಿ.ಎಸ್. ಹರೀಶ್ ಸ್ವಾಗತಿಸಿದರು. ಚಂದ್ರಕುಮಾರ್ ವಂದಿಸಿದರು. ರಿಯಾಜ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net