ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರ ಸ್ಮಾರಕ ಉಪನ್ಯಾಸ ಮಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಲಕ್ಷ÷್ಮಣ ತೆಲಗಾವಿ ಅವರು ಜೋಯಿಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಪ್ರೊ.ಟಿ.ವಿ. ಸುರೇಶ್ ಗುಪ್ತ, ಡಿ. ಗೋಪಾಲಸ್ವಾಮಿ, ಡಾ.ಎನ್.ಎಸ್. ಮಹಂತೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಲಕ್ಷ÷್ಮಣ ತೆಲಗಾವಿ ಅಭಿಪ್ರಾಯ
ಹುಲ್ಲೂರು ಶ್ರೀನಿವಾಸ ಜೋಯಿಸರ ಕುರಿತ ಉಪನ್ಯಾಸ ಮಾಲಿಕೆಗೆ ಚಾಲನೆ
ಇತಿಹಾಸ ಕೂಟ
ಚಿತ್ರದುರ್ಗ: ಚಿತ್ರದುರ್ಗದ ಇತಿಹಾಸ ಸಂಶೋಧನೆಗೆ ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ಅಪಾರವಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಲಕ್ಷ÷್ಮಣ ತೆಲಗಾವಿ ಹೇಳಿದರು.
ಚಿತ್ರದುರ್ಗದ ರೇಣುಕಾ ಪ್ರಕಾಶನ, ಇತಿಹಾಸ ಕೂಟ, ಸಂಶೋಧನಾ ತಂಡ ಹಾಗೂ ರಾಜಾವೀರ ಮದಕರಿ ನಾಯಕ ಸಾಂ ಸ್ಕೃ ತಿಕ ಸಂಘದ ಸಹಯೋಗದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹುಲ್ಲೂರು ಶ್ರೀನಿವಾಸ ಜೋಯಿ ಸರ ಸ್ಮಾರಕ ಉಪನ್ಯಾಸ ಮಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
೧೮೯೨ರ ಮಾರ್ಚ್ ೨೯ರಂದು ಜನಿಸಿದ ಶ್ರೀನಿವಾಸ ಜೋಯಿಸರು ತಮ್ಮ ಬದುಕಿನ ೩೪ ವರ್ಷಗಳನ್ನು ಇತಿಹಾಸ ಸಂಶೋಧ ನೆಗೆ ಸವೆಸಿದ್ದಾರೆ. ಹಲವು ಗ್ರಂಥಗಳು ಇವರಿಗೆ ಸಮರ್ಪಣೆಯಾಗಿವೆ. ತರಾಸು ಅವರು ಜೋಯಿಸರ ಜತೆ ಉತ್ತಮ ಸ್ನೇಹ ಹೊಂ ದಿದ್ದರು.
ಉನ್ನತ ಸ್ಥಾನಮಾನಗಳಿದ್ದರೂ ಜೋಯಿಸರ ಬದುಕು ತುಂಬಾ ಸರಳವಾಗಿತ್ತು. ಸರ್ಕಾರಿ ನೌಕರಿಗೆ ರಾಜಿನಾಮೆ ನೀಡಿ ಚಿತ್ರದು ರ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ ಜೋಯಿಸರು ಸ್ವಾತಂತ್ರ‍್ಯ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದರು.
ಕರ್ನಾಟಕದ ಶ್ರೇಷ್ಠ ಇತಿಹಾಸಕಾರ, ಗಾಂಽÃಜಿ ಅವರಿಂದ ಪ್ರಭಾವಿತರಾಗಿದ್ದ ಜೋಯಿಸರು, ನಗರದ ರಂಗಯ್ಯನ ಬಾಗಿಲು ಬ ಳಿಯ ಪ್ರಾಚ್ಯವಸ್ತು ಸಂಗ್ರಹಾಲಯದ ಸಂಸ್ಥಾಪಕರೆAದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ತೆಲಗಾವಿ ಹೇಳಿದರು.
ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಟಿ.ವಿ. ಸುರೇಶ್‌ಗುಪ್ತ ಮಾತನಾಡಿ, ಇತಿಹಾಸ ಕುರಿತು ಬರೆಯುವವರು ಸಾಕಷ್ಟು ಕಾರ್ಯಕ್ಷೇತ್ರದ ಕೆಲಸ ಮಾಡಬೇಕು. ಶ್ರೀನಿವಾಸ ಜೋಯಿಸರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.
ಎಲ್ಲದಕ್ಕೂ ಅವರ ಉತ್ತರದಾಯಿತ್ವವಿದೆ. ಬರವಣಿಗೆಯಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ. ಕಟುಸತ್ಯವನ್ನೇ ಬರೆಯುತ್ತೇನೆಂದು ಹೇಳುತ್ತಿದ್ದ ಮಹಾನ್ ಚೇತನ ಎಂದರು.
ಮದಕರಿನಾಯಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿ, ಚಿತ್ರದುರ್ಗದ ಇತಿಹಾಸ ಸಂಶೋಧನೆಗೆ ಜೋಯಿಸರು ಹೊಸ ಆಯಾಮ ನೀಡಿದ್ದಾರೆ. ಜೋಯಿಸರು ಹಾಗೂ ಲಕ್ಷ÷್ಮ್ಮಣ ತೆಲಗಾವಿ ಅವರು ದುರ್ಗದ ಅಮೂಲ್ಯ ರತ್ನಗಳು ಎಂದರು.
ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್. ಮಹಂತೇಶ್ ಮಾತನಾಡಿ, ಚಿತ್ರದುರ್ಗದಲ್ಲಿ ಶ್ರೀನಿವಾಸ ಜೋಯಿಸರ ಪುತ್ಥಳಿ/ಪ್ರತಿಮೆ ಸ್ಥಾಪನೆಯಾಗಬೇಕು. ಒಂದು ರಸ್ತೆಗೆ ಅವರು ಹೆಸರು ಇಡಬೇಕಿದೆ ಎಂದರು.
ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯ, ರಾಜಾಜಯಚಂದ್ರ ವೀರಮದಕರಿನಾಯಕ, ಮÊತ್ಯುಂಜಯ, ನಿರಂಜನ ದೇವರಮನೆ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ. ಗುಣವತಿ ಮಹಂತೇಶ್ ಇತರರು ಇದ್ದರು.