ಚಿತ್ರದುರ್ಗದಲ್ಲಿ ಆಯೋಜಿಸಿರುವ`ಒ-ಲೆವೆಲ್ ಐಒಟಿ-ಸಾಫ್ಟ್ ಸ್ಕಿಲ್' ಕುರಿತ ೪ ದಿನಗಳ ಕಾರ್ಯಾಗಾರಕ್ಕೆ ಶುಕ್ರವಾರ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಚಾಲನೆ ನೀಡಿದರು. ಡಾ.ಕೆ.ಎ. ಬಾಲಾಜಿ, ಡಾ. ಕೆ.ಬಿ. ಸಿದ್ದೇಶ್, ಡಾ.ಎ.ಎಂ. ರಾಜೇಶ್ ಇತರರು ಇದ್ದರು.
ಚಿತ್ರದುರ್ಗ: ಯುವ ಜನರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಇವತ್ತಿನ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದಿಂದ `ಒ-ಲೆವೆಲ್ ಐಒಟಿ - ಸಾಫ್ಟ್ ಸ್ಕಿಲ್' ಕುರಿತ ನಾಲ್ಕು ದಿನಗಳ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ತಾಂತ್ರಿಕ ಹಾಗೂ ಸಂವಹನ ಕೌಶಲಗಳನ್ನು ಅಭಿವÊದ್ಧಿಪಡಿಸಿಕೊಳ್ಳಬೇಕು. ಈ ರೀತಿಯ ತರಬೇತಿಗಳು ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿ ಸುತ್ತವೆ ಎಂದು ಭರತ್ ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ಎಲೆಕ್ಟಾçನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ-ï ಎಲೆಕ್ಟಾç ನಿಕ್ಸ್- ಇನ್ -Áರ್ಮೇಷನ್ ಟೆಕ್ನಾಲಜಿ ಹಿರಿಯ ಅಧ್ಯಾಪಕ ಡಾ.ಕೆ.ಎ. ಬಾಲಾಜಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ಡಾ.ಕೆ. ಸಿದ್ದೇಶ್, ಡಾ.ಎ.ಎಂ. ರಾಜೇಶ್, ಡಾ.ಎಸ್. ಚೇತನ್, ಪ್ರೊ.ಟಿ.ಬಿ. ಲವಕುಮಾರ್, ಪ್ರೊ.ಎಂ.ಕೆ. ಸುದರ್ಶನ್, ಪ್ರೊ. ಎಸ್. ರಘು ಇತರರು ಇದ್ದರು. ಸಾವಿತ್ರಿ ಪ್ರಾರ್ಥಿಸಿದರು. ಭಾವನ ಶೆಟ್ಟಿ ಸ್ವಾಗತಿಸಿ, ಚಿನ್ಮಯ್ ವಂದಿಸಿದರು.