ದ್ವೇಷಾಸೂಯೆಯಿಂದ ಏನನ್ನೂ ಸಾಽಸಲಾಗದು

 ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವಮಹಾಂತ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಶ್ರೀ ಬಸವಮಹಾಂತ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಸವಕುಮಾರ ಸ್ವಾಮೀಜಿ ಅನಿಸಿಕೆ
  • ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ
  • ದುಂದು ವೆಚ್ಚದ ವಿವಾಹ
ಚಿತ್ರದುರ್ಗ: ಎಲ್ಲ ಕಲಹ, ಆತಂಕಗಳಿಗೆ ಮುಖ್ಯಕಾರಣ ದ್ವೇಷ. ಇದರಿಂದ ದೇಶವೇ ನಾಶವಾಗುತ್ತದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಶುಕ್ರವಾರ ೩೫ನೇ ವರ್ಷದ ೧೨ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತ ನಾಡಿ, ಎಷ್ಟೋ ಜನರು ದ್ವೇಷದಿಂದ ಬದುಕನ್ನೇ ನಾಶ ಮಾಡುವಂತಹವರಾಗಿರುತ್ತಾರೆ. ಶರಣು ಎಂದವರಿಗೆ ಮರಣವಿಲ್ಲ. ಬಸ ವಣ್ಣ ಹೇಳಿರುವಂತೆ ನಾವೆಲ್ಲರೂ ನಾನೆಚ್ಚು-ನೀನೆಚ್ಚು ಎಂಬ ಭಾವನೆಯಿಂದ ಹೊರ ಬರಬೇಕಾಗಿದೆ ಎಂದರು. ನವ ದಂಪತಿಗಳಲ್ಲಿ ಪ್ರೀತಿ, ವಾತ್ಸಲ್ಯ, ಮಮತೆ ಇರಬೇಕು. ದ್ವೇಷ, ಅಸೂಯೆಯಿಂದ ಏನನ್ನೂ ಸಾಽಸಲು ಸಾಧ್ಯವಿಲ್ಲ. ಅವುಗಳಿಂದ ದೂರವಿದ್ದು ನೆಮ್ಮದಿಯಾಗಿರಬೇಕು ಎಂದರು.
೨ ಅಂತರ್ಜಾತಿ ಸಹಿತ ೧೪ ಜೋಡಿಗಳ ವಿವಾಹ ನೆರವೇರಿದೆ. ದುಂದು ವೆಚ್ಚದ ವಿವಾಹದಿಂದ ದೂರವಿರುವುದೇ ದೇಶ ಸೇವೆಯಾಗಿದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಸತಿಪತಿಗಳು ಒಂದಾಗಿ ಜೀವನ ನಡೆಸಿದರೆ ಅದು ಅಮೃತವಾಗುತ್ತದೆ. ಮದುವೆ ಎಂಬುದು ಮನಸ್ಸು ಮತ್ತು ಆಲೋಚನೆಗಳ ನಡುವಿನ ಹೊಂದಾಣಿಕೆ. ಇಂದಿನ ದಿನಗಳಲ್ಲಿ ಸ್ವಪ್ರತಿಷ್ಠೆ, ಅಹಂಕಾರ ಭಾವನೆಯಿಂದ ಹೊಂದಾಣಿಕೆ ಇಲ್ಲವಾಗುತ್ತಿದೆ. ಇದರ ಪರಿಣಾಮ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ನಂಬಿಕೆ, ವಿಶ್ವಾಸದಿಂದ ಜೀವ ನಡೆಸಬೇಕು ಎಂದು ನವ ದಂಪತಿಗಳಿಗೆ ಸಲಹೆ ನೀಡಿದರು.
ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ, ಹೊಳಲ್ಕೆರೆಯ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿದರು. ಜಾನಪದ ಕಲಾವಿದ ಗಂಜಿಗಟ್ಟೆ ಕÊಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ದರ್ಶನ್ ದೇವರು ಸ್ವಾಗತಿಸಿ, ಜ್ಞಾನಮೂರ್ತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net