ಪಕ್ಷದ ಸೈದ್ಧಾಂತಿಕ ನಿಲುವುಗಳೊಂದಿಗೆ ಜನ ಸೇನಾ ಸಂಘಟನೆ

 ಚಿತ್ರದುರ್ಗದಲ್ಲಿ ಶನಿವಾರ ಜನ ಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯ ನಾಗಬಾಬು ಚಾ ಲನೆ ನೀಡಿದರು. ಪಕ್ಷದ ಆಂಧ್ರಪ್ರದೇಶ ರಾಜ್ಯಕರ‍್ಯದರ್ಶಿ ರಾಮ್ ತಲ್ಲೂರಿ, ಡಿ.ಬಸವರಾಜ್ ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ಜನ ಸೇನಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯ ನಾಗಬಾಬು ಚಾ ಲನೆ ನೀಡಿದರು. ಪಕ್ಷದ ಆಂಧ್ರಪ್ರದೇಶ ರಾಜ್ಯಕರ‍್ಯದರ್ಶಿ ರಾಮ್ ತಲ್ಲೂರಿ, ಡಿ.ಬಸವರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆAಧ್ರಪ್ರದೇಶದ ಎಂಎಲ್‌ಸಿ ನಾಗಬಾಬು ಘೋಷಣೆ
  • ಚಿತ್ರದುರ್ಗದಲ್ಲಿ ಪಾರ್ಟಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
  • ಸಂಸ್ಕೃತಿಗಳ ಏಕರೂಪತೆ
ಚಿತ್ರದುರ್ಗ: ಪಕ್ಷದ ಸೈದ್ಧಾಂತಿಕ ನಿಲುವುಗಳಿಗೆ ಬದ್ಧವಾಗಿ ಆಂಧ್ರಪ್ರದೇಶದ ಡಿಸಿಎಂ ಪವನ್‌ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷವನ್ನು ಕರ್ನಾಟಕದ ಲ್ಲೂ ಸಂಘಟಿಸುವುದಾಗಿ ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯ ನಾಗಬಾಬು ಹೇಳಿದರು.
ನಗರದ ಎಸ್‌ಜಿ ಕನ್ವೆನಷನ್ ಹಾಲ್‌ನಲ್ಲಿ ಶನಿವಾರ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾ ಮಾಜಿಕ ಸಾಮರಸ್ಯ. ಧಾರ್ಮಿಕ ಭೇದವಿಲ್ಲದ ರಾಜಕಾರಣ, ಭಾಷೆ, ಸಂಪ್ರದಾಯ. ಸಂಸ್ಕೃತಿ ರಕ್ಷಣೆ.
ರಾಷ್ಟçಭಕ್ತಿ, ಪರಿಸರದ ರಕ್ಷಣೆಯೊಂದಿಗೆ ಪ್ರಗತಿ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮೊದಲಾದ ಸೈದ್ಧಾಂತಿಕ ನಿಲುವುಗಳೊಂದಿಗೆ ಪಾರ್ಟಿಯನ್ನು ಬಲಪಡಿಸುವುದಾಗಿ ಹೇಳಿದರು.
ಕರ್ನಾಟಕದ ಇತಿಹಾಸ ಪುರುಷರು, ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸಿದ ನಾಗಬಾಬು ಅವರು, ರಾಜಕಾರಣದಲ್ಲಿ ಪ್ರಾಮಾಣಿಕ ಹೋರಾಟ ನಡೆಸುವವರ ಪರವಾಗಿ ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಒಡಿಶಾ, ಮಹಾ ರಾಷ್ಟçಗಳಲ್ಲಿ ಪಕ್ಷದ ಸಂಘಟನೆ ಗುರಿ ಇದೆ. ಮುಂದಿನ ದಿನಗಳಲ್ಲಿ ಪವನ್‌ಕಲ್ಯಾಣ್ ಅವರು ಕರ್ನಾಟಕದಲ್ಲಿ ಪ್ರವಾಸ ನಡೆಸಲಿದ್ದು, ರಾಜ್ಯದಲ್ಲಿ ಶೀಘ್ರವೇ ಪಕ್ಷದ ಕಚೇರಿ ಆರಂಭಿಸಲಾಗುವುದು ಎಂದರು.
ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕನ್ನಡಿಗರು ಪಾರ್ಟಿ ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದಾರೆ. ಯುವ ಜನರ ಆಶಯಗಳಿಗೆ ಸ್ಪಂದಿಸುವುದು ಪಕ್ಷದ ಮುಖ್ಯಗುರಿಯಾಗಿದೆ. ಉದ್ಯೋಗ, ಶಿಕ್ಷಣ, ಸಾಮಾಜಿಕ ನ್ಯಾಯ ಸೇರಿದಂತೆ ಸ್ಪಷ್ಟ ರಾಜಕೀಯ ನೀತಿಗಳನ್ನು ರೂಪಿಸಿ ಪರ್ಯಾಯ ರಾಜಕೀಯ ಶಕ್ತಿ ಒದಗಿಸಲಾಗುವುದು. ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡ ಳಿತಕ್ಕೆ ಪಕ್ಷ ಬದ್ಧವಾಗಿದೆ.
ಸಂಸ್ಕೃತಿಗಳ ಏಕರೂಪತೆ ಕಾರಣಕ್ಕೆ ಜನಸೇನಾ ಪಕ್ಷವನ್ನು ಕನ್ನಡಿಗರು ಇಷ್ಟ ಪಡುತ್ತಿದ್ದಾರೆ. ಶ್ರೀ ಕÊಷ್ಣದೇವರಾಯರು ಪ್ರತಿ ನಿಽಸಿದ್ದ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕ ಹಾಗೂ ಆರ್ಥಿಕ ನಂಟಿದೆ ಎಂದರು.
ರಾಜಕೀಯ ದುರುದ್ದೇಶದಿಂದ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಗೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ಕ್ಷೇತ್ರಗಳ ಮ ರು ವಿಂಗಡಣೆಯಿAದ ದಕ್ಷಿಣಕ್ಕೆ ಅನ್ಯಾಯವಾಗುತ್ತಿದೆ ಎಂಬ ಅಭಿಪ್ರಾಯ ರಾಜಕೀಯ ಪ್ರೇರಿತವಾಗಿದೆ. ಕಾಂಗ್ರೆಸ್ ವಿರೋಧದಿಂ ದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ.
ಕರ್ನಾಟಕದಲ್ಲಿ ನಾವು ಎಲ್ಲೆಲ್ಲಿ ಸ್ಪಽðಸುತ್ತೇವೆಂದು ಈಗ ಹೇಳುವುದು ಸೂಕ್ತವಲ್ಲ. ಬಿಜೆಪಿ, ಜನ ಸೇನಾ ಸೇರಿ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಸ್ಪಽðಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ನಾಗಬಾಬು ಹೇಳಿದರು.
ಪಕ್ಷದ ನೂತನ ಜಿಲ್ಲಾಧ್ಯಕ್ಷ ಡಿ.ಬಸವರಾಜ್ ಮಾತನಾಡಿ, ಐಷಾರಾಮಿ ಜೀವನ ನಡೆಸುವ ಎಲ್ಲ ಅವಕಾಶಗಳಿದ್ದರೂ ಪವನ್‌ ಕ ಲ್ಯಾಣ್ ಅವರು ಪಕ್ಷವನ್ನು ಸ್ಥಾಪಿಸಿ ಜನ ಸೇವೆಗೆ ಮುಂದಾಗಿದ್ದಾರೆ ಎಂದರು. ಪಕ್ಷದ ಆಂಧ್ರಪ್ರದೇಶ ಕರ‍್ಯದರ್ಶಿ ರಾಮ್ ತಲ್ಲೂರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net