ಕೈದಿಗಳಿಗೆ ಮೊಬೈಲ್, ಮದ್ಯ, ಗಾಂಜಾ ಪೂರೈಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ೩ ವರ್ಷಗಳ ಹಿಂದೆ ಜಿಲ್ಲಾ ರಕ್ಷಣಾಽಕಾರಿ ಅಧ್ಯಕ್ಷತೆಯಲ್ಲಿ ಎಎಸ್‌ಪಿ, ಐಎಸ್‌ಡಿ ಡಿವೈಎಸ್‌ಪಿ ಹಾಗೂ ಜೈಲು ಅಽÃಕ್ಷಕರ ಒಳಗೊಂಡ ಆಂತರಿಕ ಭದ್ರತಾ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಭದ್ರತೆ ಮತ್ತಿತರ ವಿಚಾರಗಳನ್ನು ಪರಿಶೀಲಿಸಬೇಕಿದೆ. ಜೈಲುಗಳಲ್ಲಿ ಸೌಲಭ್ಯಗಳ ಸುಧಾರಣೆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಽಕಾರಿ ಅಧ್ಯಕ್ಷತೆಯ ಜಿಲ್ಲಾ ಸಂದರ್ಶಕರ ಮಂಡಳಿಯೂ ಇದೆ. ಜಿಲ್ಲಾ ಮಟ್ಟದಲ್ಲಿ ಎಸ್‌ಪಿ, ಡಿಸಿ ಅವರ ಮೇಲಿರುವ ಈ ಹೊಣೆಗಾರಿಕೆಯೊಂದಿಗೆ ಸರ್ಕಾರ ಈಚೆಗೆ ರಚಿಸಿರುವ ಕಾರಾಗೃಹ ಇಲಾಖೆ ಎಡಿಜಿಪಿ ನೇತೃತ್ವದ ಉನ್ನತಮಟ್ಟದ ಸಮಿತಿ ಸದಸ್ಯರನ್ನಾಗಿ ಮಾಡಲು ನಿರ್ದೇಶಿಸಿದೆ ಎನ್ನಲಾಗಿದೆ. ಎಸ್‌ಪಿ, ಡಿಸಿ ಕಾಲ ಕಾಲಕ್ಕೆ ಜೈಲುಗಳನ್ನು ಪರಿಶೀಲಿಸಿ ಸಮಿತಿಗೆ ವರದಿ ಸಲ್ಲಿಸಬೇಕಿದೆ.