ಅಂತಾರಾಷ್ಟಿçÃಯ ಭಗವದ್ಗೀತೆ ಜಯಂತ್ಯುತ್ಸವ

 ಚಿತ್ರದುರ್ಗದಲ್ಲಿ ಸೋಮವಾರ ಭಗವದ್ಗೀತೆ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ಗೀತೆ ಪಠಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಲಿಂಗಪ್ಪ ಅವರನ್ನು ಗೌರವಿಸಲಾಯಿತು. ರವಿ ಕೆ.ಅಂಬೇಕರ್, ವನಜಾಕ್ಷಮ್ಮ, ಅಂಬುಜಾಕ್ಷಮ್ಮ, ಅನೀತಾ, ತಿಪ್ಪಮ್ಮ, ರಮಾ, ಸುಧಮ್ಮ ಇತರರು ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಭಗವದ್ಗೀತೆ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ಗೀತೆ ಪಠಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪಿ.ಲಿಂಗಪ್ಪ ಅವರನ್ನು ಗೌರವಿಸಲಾಯಿತು. ರವಿ ಕೆ.ಅಂಬೇಕರ್, ವನಜಾಕ್ಷಮ್ಮ, ಅಂಬುಜಾಕ್ಷಮ್ಮ, ಅನೀತಾ, ತಿಪ್ಪಮ್ಮ, ರಮಾ, ಸುಧಮ್ಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಗವದ್ಗೀತೆ ಅಧ್ಯಯನ
  • ಭಾರತೀಯ ಯೋಗ ಶಿಕ್ಷಣ ಸಂಸ್ಥೆ
  • ಭಗವದ್ಗೀತೆ ಜಯಂತ್ಯುತ್ಸವ
ಚಿತ್ರದುರ್ಗ: ಭಗವದ್ಗೀತೆ ಅಧ್ಯಯನದಿಂದ ಮನುಷ್ಯನ ಜೀವನದಲ್ಲಿ ಸುಖ, ದುಃಖಗಳನ್ನು ಸಮನಾಗಿ ಸ್ವೀಕರಿಸಲು ಸಾಧ್ಯವಾಗಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪಿ. ಲಿಂಗಪ್ಪ ಹೇಳಿದರು.
ಚಿತ್ರದುರ್ಗ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಂತಾರಾಷ್ಟಿçÃಯ ಭಗವದ್ಗೀತೆ ಜಯಂತ್ಯುತ್ಸವದ ಅಂಗವಾಗಿ ನಗರದ ತುರುವನೂರು ರಸ್ತೆ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಭಗವದ್ಗೀತೆ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಸಂಸ್ಥೆಯಿAದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗೀತೆಯ ಅಧ್ಯಯನ ಧೈರ್ಯ, ಕರ್ತವ್ಯ ನಿಷ್ಠೆಯನ್ನು ಕಲಿಸುತ್ತದೆ ಎಂದರು.
ಸAಸ್ಥೆ ಅಧ್ಯಕ್ಷ ರವಿ ಕೆ. ಅಂಬೇಕರ್, ಭಗವದ್ಗೀತೆ ಮತ್ತು ಯೋಗಕ್ಕೆ ನಿಕಟ ಸಂಬAಧವಿದೆ. ಭಗವದ್ಗೀತೆಯ ೬ನೇ ಅಧ್ಯಾಯವನ್ನು `ಧ್ಯಾನ ಯೋಗ'ವೆಂದು ಕರೆಯಲಾಗುತ್ತದೆ. ಯೋಗಾಭ್ಯಾಸದ ಮೂಲ ತತ್ವಗಳನ್ನು ಮತ್ತು ಗೀತೆಯಲ್ಲಿ ಯೋಗವನ್ನು ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣ ಪ್ರಕ್ರಿಯೆಯಾಗಿ ವಿವರಿಸಲಾಗಿದೆ ಎಂದರು. ಸಂಸ್ಥೆಯ ಮಹಿಳಾ ಸದಸ್ಯರು ಭಗವದ್ಗೀತೆಯ ಸಾಮೂಹಿಕ ಪಠಣ ಮಾಡಿದರು. ಭಗವದ್ಗೀತೆ ಗ್ರಂಥಕ್ಕೆ ಪೂಜೆ ಸಲ್ಲಿಸಿ, ಶ್ರೀ ಕೃಷ್ಣನಿಗೆ ಅವಲಕ್ಕಿಬೆಲ್ಲ ನೈವೇದ್ಯ ಸಮರ್ಪಿಸಿ ಭಕ್ತರಿಗೆ ಹಂಚಲಾಯಿತು.
ಯೋಗ ಸಾಧಕರಾದ ವನಜಾಕ್ಷಮ್ಮ, ಅಂಬುಜಾಕ್ಷಮ್ಮ, ಅನೀತಾ, ತಿಪ್ಪಮ್ಮ, ರಮಾ, ಸುಧಮ್ಮ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net